About Us Advertise with us Be a Reporter E-Paper

Uncategorizedಸಿನಿಮಾಸ್

‘ಸಾಲಿಗ್ರಾಮ’ ಹಾರರ್ ಸಿನಿಮಾ!

‘ಸಾಲಿಗ್ರಾಮ’, ಉಡುಪಿ ಜಿಲ್ಲೆಯ ಒಂದು ಊರು. ಜತೆಗೆ ಸಾಲಿಗ್ರಾಮ ಅನ್ನೋದು ಒಂದು ಪೂಜಾ ಸಾಮಾಗ್ರಿ ಕೂಡಾ ಹೌದು. ಆದರೆ ಇನ್ನು ಮುಂದೆ ಈ ಪದಕ್ಕೆ ಇನ್ನೊಂದು ಸೇರ್ಪಡೆಯಾಗಲಿದೆ. ಅದೆನೆಂದರೆ ‘ಸಾಲಿಗ್ರಾಮ’ ಎನ್ನುವ  ಸಿನಿಮಾ.  ಇನ್ನೇನು ಕೆಲದಿನಗಳಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಹೆಸರು ಕೇಳಿದವರು ಯಾರಾದರೂ ಇದನ್ನು ಒಂದು ಭಕ್ತಿಪ್ರಧಾನ ಸಿನಿಮಾ ಎಂದು ಭಾವಿಸಬಹುದು. ಆದರಿದು ಭಕ್ತಿಯ ಬದಲು ಭಯದ ಸಿನಿಮಾ. ಇದೊಂದು ಪಕ್ಕಾ ಕಮರ್ಷಿಯಲ್ ಹಾರರ್ ಸಿನಿಮಾ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಎನ್ನುತ್ತಿದೆ ಚಿತ್ರತಂಡ. ಇತ್ತೀಚಿಗಷ್ಟೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಹಾಡುಗಳು ಈಗಾಗಲೇ ಜನರ ಮೆಚ್ಚುಗೆ ಗೆ ಪಾತ್ರವಾಗಿದೆ.

ಚಿತ್ರದಲ್ಲಿ ಜೀವ ಎಂಬುವವರಿಗೆ ಉಡುಪಿಯ ಸಾಲಿಗ್ರಾಮ ಎಂಬ ಊರಿಗೆ ವರ್ಗಾವಣೆಯಾಗುತ್ತದೆ. ಅಲ್ಲಿ ವಾಸಿಸುವ ಅವನ ಕುಟುಂಬ ಒಂದು ದುಷ್ಟ ಶಕ್ತಿಯ ಕಾಟಕ್ಕೆ ಸಿಲುಕುತ್ತದೆ. ಆ ದುಷ್ಟ ಶಕ್ತಿಯ ಉಪಟಳದಿಂದ ಕುಟುಂಬ ಹೇಗೆ ಪಾರಾಗುತ್ತದೆ ಎನ್ನುವುದನ್ನು ಚಿತ್ರದ ಮೂಲ ಕಥೆಯಾಗಿದೆ.

ಸಂದೀಪ್ ಅವರ ಕಥೆ, ಹರ್ಷ ನಾರಾಯಣಸ್ವಾಮಿ ನಿರ್ದೇಶನ, ‘ಪೂರ್ಣಶ್ರೀ ಕ್ರಿಯೇಷನ್‌ಸ್’ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ್ ಮತ್ತು ರಾಜ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಶ್ರೀಹರಿ ಚೈತನ್ಯ ಸಂಭಾಷಣೆ ಬರೆದಿದ್ದು, ಸಿದ್ದಾರ್ಥ್ ಮಾದ್ಯಮಿಕ, ರಂಜಿತ್, ದಿಶ ಪೂವೈಯ್ಯ, ಪಲ್ಲವಿ ರಾಜು, ರಂಜಿತ್ ರಾಜ್ ಕುಮಾರ್‌, ಯಶವಂತ್ ಶೆಟ್ಟಿ, ಬೇಬಿ ಮನಸ್ವಿ, ರವೀಂದ್ರನಾಥ್ ಇನ್ನು ಮುಂತಾದವರು ತಾರಾಬಳ ತೆರೆ ಹಂಚಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close