About Us Advertise with us Be a Reporter E-Paper

ವಿ +

ಸಂಧ್ಯಾ ಕಾಲದ ಆಶಾಕಿರಣ ಮುರಳೀಸ್ ಓಲ್ಡ್ ಏಜ್ ಹೋಮ್

 ದೀಪಾ ವಿಶಾಲ

ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಂರಕ್ಷಿಸಿ,  ಲಾಲನೆ ಪಾಲನೆ ಮಾಡಿದ ಹೆತ್ತವರೇ, ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ ಕರುಳ ಕುಡಿಗಳಿಗೆ ಬೇಡವಾಗುತ್ತಿದ್ದಾರೆ. ಸಮಯದ ಅಭಾವವೋ, ಸಂಸಾರದಲ್ಲಿ ಸಾಮರಸ್ಯದ ಕೊರತೆಯಿಂದಲೋ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೆ. ಹೀಗೆ ಸ್ವಂತದವರಂತೆ ಕಾಳಜಿ ವಹಿಸಿ, ತಮ್ಮವರಿಂದ ದೂರವಾಗಿರುವ ಹಿರಿಯ ಜೀವಗಳ ಬೇಕು- ಬೇಡಗಳನ್ನು ನೋಡಿಕೊಳ್ಳುವ ವೃದ್ಧಾಶ್ರಮ ‘ಮುರಳೀಸ್ ಓಲ್ಡ್ ಏಜ್ ಹೋಮ್’.  ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಇಳಿ ವಯಸ್ಸಿನ ನೆಮ್ಮದಿಯ  ತಾಣದ ಬಗ್ಗೆ ಈ ಲೇಖನ.

ಬಾಲ್ಯ, ಹರೆಯದಲ್ಲಿ ಹಿರಿಯರ ಆಸರೆ ಬಯಸುವ ಮಕ್ಕಳು, ಬೆಳೆಯುತ್ತಿದ್ದಂತೆ ರೆಕ್ಕೆ ಮೂಡಿದ ಹಕ್ಕಿಗಳಂತೆ ತಮ್ಮದೇ ಸ್ವಂತ ಗೂಡನ್ನು ಕಟ್ಟಿಕೊಳ್ಳಬಯಸುತ್ತಾರೆ. ವೃದ್ಧಾಪ್ಯ ಸಮೀಪಿಸುತ್ತಿರುವ ಹೆತ್ತವರನ್ನು ಅವರ ಪಾಡಿಗೆ ಬಿಟ್ಟು, ತನ್ನದೇ ಸಂಸಾರದಲ್ಲಿ ಮುಳುಗಿ ಬಿಡುತ್ತಾರೆ. ತಮ್ಮಿಡೀ ಬದುಕನ್ನೇ ಮಕ್ಕಳಿಗಾಗಿ ಸವೆಸಿದ ಹೆತ್ತವರಿಗೆ, ಬಾಳಿನ ಇಳಿಸಂಜೆಯಲ್ಲಿ ಮಕ್ಕಳ ಸಾಮಿಪ್ಯವೆಂಬುದು ಮರೀಚಿಕೆಯಾಗಿ ಬಿಡುತ್ತದೆ. ಈ ಸಂದರ್ಭದಲ್ಲಿ ಇಂತಹ ನತದೃಷ್ಟರಿಗೆ ಬಂದೊದಗುವುದು ವೃದ್ಧಾಶ್ರಮಗಳು. ಸ್ವಂತ ತಂದೆ ತಾಯಿಯನ್ನು ನೋಡಿಕೊಳ್ಳುವುದಕ್ಕೆ ಹಿಂಜರಿಯುವವರನ್ನು, ರೇಜಿಗೆ ಪಡುವವರನ್ನು, ಅವರ ಆರೈಕೆಯಿಂದ ತಪ್ಪಿಸಿಕೊಳ್ಳಲು ಬಯಸುವವರು, ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಬ್ಧಾರಿಯಿಂದ ನುಣುಚಿಕೊಳ್ಳುತ್ತಾರೆ.

ಇಂತಹವರ ಮಧ್ಯೆ ತಂದೆಯ ಕನಸನ್ನು ನನಸಾಗಿಸಲು ತಮ್ಮ ಜೀವನವನ್ನೇ ಹಿರಿಯರ ಆರೈಕೆಗೆ ಮಿಸಲಿಟ್ಟಿದ್ದಾರೆ ಮುರಳೀಸ್ ಓಲ್ಡ್ ಏಜ್ ಹೋಮ್ಸ್‌ನ ಸಂಸ್ಥಾಪಕರಾದ ಶ್ರೀ ಮುರಳಿಧರರವರು. ಮೂಲತಃ ಬೆಂಗಳೂರಿನವರಾದ ಇವರ ತಂದೆಯು ಲೋಕೋಪಯೋಗಿ ಇಲಾಖೆಯಿಂದ ನಿವೃತ್ತಿ ಹೊಂದಿದ ನಂತರ ಬೆಂಗಳೂರಿನ ಜಯನಗರದ ನಿವಾಸದಲ್ಲಿ ವಾಸವಿದ್ದರು. ಈ ಸಮಯದಲ್ಲಿ ಅವರು ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಬಹಳಷ್ಟು ಹಿರಿಯ ರನ್ನು ಭೇಟಿ ಮಾಡುತ್ತಿದ್ದರು. ಆ ಹಿರಿ ಜೀವಗಳ ನೋವು, ಅಸಹಾಯಕತೆ ಮತ್ತು ಜೀವನದ ಇಳಿವಯಸ್ಸಿನಲ್ಲಿ ಅನುಭವಿಸುತ್ತಿದ್ದ ಕಷ್ಟವನ್ನು ಕಂಡು ಗಾಂಽವಾದಿಯೂ ಆಗಿದ್ದ ಇವರ ಮನಸ್ಸು ಮರುಗುತ್ತಿತ್ತು. ಇಂತವರಿಗೋಸ್ಕರ ಏನನ್ನಾದರೂ ಮಾಡಬೇಕು ಎಂಬ ಹಂಬಲದಿಂದ ತಮ್ಮ ಪುತ್ರ ಮುರಳಿಯವರ ಬಳಿ ಈ ಬಗ್ಗೆ ಚರ್ಚಿಸುತ್ತಿದ್ದರು. ಇದಕ್ಕಾಗಿ ಅವರು ವಿದೇಶದಲ್ಲಿರುವ ಓಲ್ಡ್ ಏಜ್ ಹೋಮ್(ವೃದ್ದಾಶ್ರಮ)ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿ ದರು. ಮುಂದೆ ಆಸರೆಯನ್ನು ನಿರೀಕ್ಷಿಸುತ್ತಿದ್ದ ಹಿರಿ ಜೀವಗಳಿಗೆ ಒಂದು ಸಂಸ್ಥೆಯನ್ನು ಕಟ್ಟಲು ನಿರ್ಧರಿಸಿದರು.

 ಮುರಳೀಸ್ ಓಲ್ಡ್ ಏಜ್ ಹೋಮ್ಸ್ ಕಟ್ಟುವ ಹಾದಿ ಅಷ್ಟೇನು ಸುಲಭವಾಗಿರಲಿಲ್ಲ. ಪ್ರತಿ ಹಂತದಲ್ಲೂ ನಿರಾಸೆ, ನೋವು, ಸ್ನೇಹಿತರ ಮತ್ತು ಕುಟುಂಬದವರ ನಕರಾತ್ಮಕ ಪ್ರತಿಕ್ರಿಯೆಗಳು ಎದುರಾದವು. ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಎಂಬಂತೆ ಯಾವ ಬ್ಯಾಂಕ್‌ಗಳು ಸಾಲ ಕೊಡಲು ಸಿದ್ಧವಿಲ್ಲದ ಕಾರಣ ಹಣದ ಅಡಚಣೆಯೂ ಎದುರಾಯಿತು. ಮುರಳಿಯವರು ಧೃತಿಗೆಡದೆ ತಮ್ಮ ಸ್ವಂತ ಆಸ್ತಿಯ ಮೇಲೆ ವೈಯಕ್ತಿಕ ಸಾಲವನ್ನು ಪಡೆದು ಈ ಸಂಸ್ಥೆಯನ್ನು ಸ್ಥಾಪಿಸಿದರು. ಎಲ್ಲಾ ಸವಾಲುಗಳನ್ನು ಎದುರಿಸಿ ಆರಂಭವಾದ ಮುರಳೀಸ್ ಓಲ್ಡ್ ಏಜ್ ಹೋಮ್ಸ್ ಇಂದು ಸುಮಾರು ೪೫ ಹಿರಿ ಜೀವಗಳಿಗೆ ಆಸರೆಯಾಗಿದೆ. ಎಲ್ಲಾ ಮೂಲ ಭೂತ ಸೌಕರ್ಯಗಳೊಂದಿಗೆ ಒಂಟಿತನದ ಭಾವನೆಯಿಲ್ಲದೆ, ಸಂತೋಷವಾಗಿ ತಮ್ಮ ಇಳಿವಯಸ್ಸಿನ ದಿನಗಳನ್ನು ಕಳೆಯುತ್ತಿದ್ದಾರೆ.   ವ್ಯವಸ್ಥಿತ ಕೋಣೆ, ಸ್ನಾನಗೃಹ, ಉತ್ತಮ ಆಹಾರ, ಆಸ್ಪತ್ರೆ ವ್ಯವಸ್ಥೆ, ವಾಯು ವಿಹಾರಕ್ಕೆ ಹೋಗಲು ಅನುಕೂಲಕರ ವಾತಾವರಣ, ಈಜುಕೋಳ ಹೀಗೆ ಹಲವಾರು ಸೌಕರ್ಯಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಭರಿಸುತ್ತಿದ್ದಾರೆ.

 ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿಗೆ  ‘http://www.muralisoldage.com ಅಥವಾ  9845027770/ 9845943270ನ್ನು ಸಂಪರ್ಕಿಸ ಬಹುದು.

Tags

Related Articles

Leave a Reply

Your email address will not be published. Required fields are marked *

Language
Close