About Us Advertise with us Be a Reporter E-Paper

ಸಿನಿಮಾಸ್

‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಮುಹೂರ್ತ

ಕಳೆದ ವರ್ಷ ಕನ್ನಡ ಸಿನಿ ರಸಿಕರಿಗೆ ‘ಗುಳ್ಟು’ ಎಂಬ ಸದಭಿರುಚಿಯ ಚಿತ್ರ ನೀಡಿದ್ದ ತಂಡವೀಗ ಮತ್ತೊಂದು ಪ್ರಾಜೆಕ್‌ಟ್ಗೆ ಕೈ ಹಾಕಿದೆ. ‘ಸಾರ್ವಜನಿಕರಿಗೆ ಸುವರ್ಣಾಕಾಶ’ ಎಂಬ ವಿಶಿಷ್ಟ ಟೈಟಲ್ ಇಟ್ಟು ಈಗಿನಿಂದಲೇ ಪ್ರೇಕ್ಷಕರ ಕುತೂಹಲಕ್ಕೆ ನಾಂದಿ ಹಾಡಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ನಿರ್ದೇಶಕ ಶಶಾಂಕ್ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ಪ್ರಶಾಂತ್ ರೆಡ್ಡಿಯವರ ತಂದೆ-ತಾಯಿ ಮಾಡುವ ಮೂಲಕ ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡಿದರು.

ಸಿನಿಮಾದ ನಾಯಕನಾಗಿ ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ಎಂಬ ಕನ್ನಡತಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲಾಗುತ್ತಿದೆ. ಧನ್ಯಾ ಈಗಾಗಲೇ ತಮಿಳು, ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದು, ಕನ್ನಡದಲ್ಲಿ ಇದು ಅವರಿಗೆ ಮೊದಲ ಚಿತ್ರವಾಗಿದೆ. ಇದರಲ್ಲಿ ನಟಿ ಧನ್ಯಾ, ಕಾಲೇಜ್ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಧನ್ಯಾ, ‘ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಈ ಮೂಲಕ ಅದು ಈಡೇರಿದೆ. ನನ್ನ ಕನ್ನಡ ಸಿನಿ ಕೆರಿಯರ್‌ಗೆ ಇದೊಂದು ಸುವರ್ಣಾವಕಾಶ’ ಎಂದು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ನಾಯಕಿಯ ತಾಯಿಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ‘ಪಾಪ ಪಾಂಡು’ ಖ್ಯಾತಿಯ ಶಾಲಿನಿ ಬಣ್ಣ ಹಚ್ಚಿದ್ದಾರೆ. ನಿರ್ಮಾಪಕರಾದ ದೇವರಾಜ್, ಜನಾರ್ಧನ್ ಚಿಕ್ಕಣ್ಣ, ಮಿದುನ್ ಮುಕುಂದನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close