ವಿಶ್ವವಾಣಿ

ಶೂಟಿಂಗ್ ಸ್ಪರ್ಧೆಯಲ್ಲಿ ಸೌರಭ್‍ಗೆ ವಿಶ್ವ ಚಾಂಪಿಯನ್ ಪಟ್ಟ

ಚಾಂಗ್ವನ್: ಐಎಸ್‍ಎಸ್‍ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 245.5 ಅಂಕಗಳೊಂದಿಗೆ 16 ವರ್ಷದ ಸೌರಭ್ ಚಿನ್ನದ ಪದಕ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇತ್ತೀಚೆಗೆ ನಡೆದ 2018ರ ಏಷ್ಯನ್ ಗೇಮ್ಸ್ ನಲ್ಲೂ ಸೌರಭ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. ಇದೇ ಪಂದ್ಯದಲ್ಲಿ ಭಾರತದ ಅರ್ಜುನ್ ಸಿಂಗ್ ಚೀಮಾ ಕಂಚಿನ ಪದಕ ಪಡೆದ್ರೆ, ಕೊರಿಯಾದ ಹೋಜಿನ್ ಲಿಮ್ ಬೆಳ್ಳಿ ಪದಕ ಪಡೆದಿದ್ದಾರೆ.