Breaking Newsಪಾಲಿಟಿಕ್ಸ್ಪ್ರಚಲಿತ
“ರಾಹುಲರ ಕನಿಷ್ಠ ಆದಾಯ ಖಾತ್ರಿ ಮಾತುಗಳು, ಗರೀಬಿ ಹಠಾವೋನಂತೆ ಮತ್ತೊಂದು ಕೆಟ್ಟ ಜೋಕ್ ಇರಬೇಕು”: ಮಾಯಾವತಿ
ದೇಶಾದ್ಯಂತ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಮಾಡುವ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಪ್ರತಿಕ್ರಿಯಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, “ಗರೀಬಿ ಹಠಾವೋ”., “ಅಚ್ಚೇ ದಿನ್”ನಂತೆ ಇದೂ ಒಂದು ಕೆಟ್ಟ ಜೋಕ್ ಆಗಿದೆ ಎಂದಿದ್ದಾರೆ.
“ಲೋಕಸಭಾ ಚುನಾವಣೆಗೂ ಮುನ್ನ ಕನಿಷ್ಠ ಆದಾಯದ ಖಾತ್ರಿ ಮಾಡುವ ಮಾತುಗಳನ್ನಾಡಿರುವುದು ದೇಶವಾಸಿಗಳಲ್ಲಿ ಸಾಕಷ್ಟು ಅಚ್ಚರಿ ಹಾಗು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ಸಿನ ಗರೀಬಿ ಹಠಾವೋ, ಅಥವಾ ಪ್ರತಿಯೊಬ್ಬರ ಖಾತೆಗೂ 15 ಲಕ್ಷರು ಹಾಕುತ್ತೇವೆಂಬ ಬಿಜೆಪಿಯ ಮಾತಿನ ಹಾಗೋ ಇದೂ ಒಂದು ಕೆಟ್ಟ ಜೋಕ್ ಇರಬೇಕು” ಎಂದು ಮಾಯಾವತಿ ಹೇಳಿದ್ದಾರೆ.
ಈ ರೀತಿ ಮಾತನಾಡುವ ಮುನ್ನ ತಮ್ಮದೇ ಕಾಂಗ್ರೆಸ್ ಆಡಳಿತದಲ್ಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ಪಂಜಾಬ್, ಛತ್ತೀಸ್ಘಡದಂಥ ರಾಜ್ಯಗಳಲ್ಲಿ ಬಡವರ ಕಲ್ಯಾಣದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಜನತೆಯ ಗೌರವಕ್ಕೆ ಪಾತ್ರರಾಗಲಿ ಎಂದು ಮಾಯಾವತಿ ತಿಳಿಸಿದ್ದಾರೆ.