About Us Advertise with us Be a Reporter E-Paper

Breaking Newsಪ್ರಚಲಿತಲೈಫ್ ಸ್ಟೈಲ್ವಿದೇಶ
Trending

ರೋಡ್‍ನಲ್ಲಿ ಸಿಂಹಗಳದ್ದೇ ಕಾರುಬಾರು, ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಕಾಡಿನ ರಾಜ..! (ವಿಡಿಯೊ)

ಕಾಡಿನ ರಾಜ ಸಿಂಹದ ಗತ್ತೇ ಬೇರೆ.. ಅದು ನಡೆಯೋ ಸ್ಟೈಲು, ನೋಡುವ ಸ್ಟೈಲು ಎಲ್ಲ ಥೇಟ್ ರಾಜನಂತೆಯೇ.. ಅದಕ್ಕೆ ಇರಬೇಕು ಸಿಂಹವನ್ನು ಕಾಡಿನ ರಾಜ ಎಂದು ಕರೆದಿರೋದು.

ದಕ್ಷಿಣ ಆಫ್ರಿಕಾದ ಕ್ರೂಗರ್​ ನ್ಯಾಷನಲ್​ ಪಾರ್ಕ್​ನಲ್ಲಿ ನಾಲ್ಕು ಸಿಂಹಗಳು ರಸ್ತೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿವೆ. ರಸ್ತೆಯಲ್ಲಿ ಹಿಂದೆ ಕಾರುಗಳು ಬರುತ್ತಿದ್ದರೂ ಅದನ್ನು ಲೆಕ್ಕಿಸದೆ ತಮ್ಮ ಪಾಡಿಗೆ ತಾವು ಸಿಂಹಗಳು ವಾಕಿಂಗ್ ಮಾಡಿವೆ. ಸಿಂಹಗಳು ಮನುಷ್ಯರತ್ತ ಮುಖವನ್ನೇ ತಿರುಗಿಸದೆ ಗತ್ತಿನಲ್ಲಿ ತಮ್ಮ ಪಾಡಿಗೆ ತಾವು ಗಂಭೀರ ನಡಿಗೆಯನ್ನು ಹಾಕುತ್ತ ಸಾಗುತ್ತಿದ್ದರೆ, ಕಾರಿನ ಕಿಟಕಿ ಗಾಜುಗಳನ್ನು ಪೂರ್ತಿ ಮೇಲೇರಿಸಿ ಪ್ರಯಾಣಿಕರು ಮೊಬೈಲ್‌ ಕ್ಯಾಮರಾಗಳಲ್ಲಿ ಫೊಟೊ, ವಿಡಿಯೊ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ವಿಡಿಯೊವನ್ನು ಫೇಸ್​​ಬುಕ್​ ಪೇಜ್​​​ವೊಂದರಲ್ಲಿ ಅಪ್​ಲೋಡ್​ ಮಾಡಿದ ಅರ್ಧ ಗಂಟೆಯಲ್ಲೇ ಬರೋಬ್ಬರಿ 20 ಲಕ್ಷ ಬಾರಿ ವೀಕ್ಷಣೆಯಾಗಿದೆ.

💖💖💖 @ The Kruger National Park #SA.

Mel Siba Page ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜನವರಿ 10, 2019

 

Tags

Related Articles

Leave a Reply

Your email address will not be published. Required fields are marked *

Language
Close