About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೆಳ ಜಾತಿಯವರಿಂದ ಅಡಿಗೆ: ಮಧ್ಯಾಹ್ನದ ಊಟ ನಿರಾಕರಿಸಿದ ಶಾಲಾ ಮಕ್ಕಳು

ಉತ್ತರ ಪ್ರದೇಶ: ಇಲ್ಲಿಯ ಪ್ರಾಥಮಿಕ  ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ನಿರಾಕರಿಸಿದ್ದಾರೆ. ಕೆಳ ಜಾತಿಗೆ ಸೇರಿದ ಅಡುಗೆ ಸಿಬ್ಬಂದಿಯವರು ಅಡುಗೆ ಮಾಡಿದರು ಎಂಬ ಕಾರಣಕ್ಕೆ ಭೋಜನವನ್ನು ತಿರಸ್ಕರಿಸಿದ್ದಾರೆ.

ಸೀತಾಪುರ ಜಿಲ್ಲೆಯ ಪಳಹರಿಯಾ ಗ್ರಾಮದ ಪಿಸವಾನ್‌‌ ಬ್ಲಾಕ್‌‌ನಲ್ಲಿ ಘಟನೆ ನಡೆದಿದೆ.  ಈ ಮೊದಲು ಇದ್ದ ಅಡುಗೆ ಸಿಬ್ಬಂದಿಯು ಯಾದವರಾಗಿದ್ದರು. ಆದರೆ ಕಾರಣಾಂತರದಿಂದ ಅವರ ಬದಲಿಗೆ ಬೇರೆ ಅಡುಗೆ ಸಿಬ್ಬಂದಿಯನ್ನು ಸೇರಿಸಿ ಕೊಳ್ಳಲಾಗಿದೆ. ಆದರೆ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಅವರು ಮಾಡಿದ ಅಡುಗೆಯನ್ನು ಮಕ್ಕಳು ತಿರಸ್ಕರಿಸಿದ್ದಾರೆ. ಇದರಿಂದ ಶಾಲೆಯ ಒಟ್ಟು 76 ಮಕ್ಕಳಲ್ಲಿ ಆರು ಮಕ್ಕಳು ಮಾತ್ರ ಊಟ ಮಾಡಿದ್ದು, ಮಿಕ್ಕ ಊಟವನ್ನು ಎಸೆಯಲಾಗಿದೆ.

ಯಾದರು ಮತ್ತು ಬ್ರಾಹ್ಮಣರೇ ಹೆಚ್ಚಾಗಿರುವ ಕಾರಣ ಕೀಳು ಜಾತಿಯವರು ಮಾಡಿದ ಅಡುಗೆಯನ್ನು ಮೇಜ್ಜಾತಿಯ ಮಕ್ಕಳ ತಿನ್ನುವುದಿಲ್ಲ ಎಂದು ಮಕ್ಕಳ ಪೋಷಕರು ಶಾಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರಲ್ಲದೆ ಮಕ್ಕಳಿಗೆ ಊಟ ಮಾಡಲು ಬಿಡದೆ ತಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close