About Us Advertise with us Be a Reporter E-Paper

ಗೆಜೆಟಿಯರ್

ಸ್ಕೂಟರ್ ಪ್ರಿಯರೇ ಸ್ವಲ್ಪ ಕಾಯಿರಿ

ಆದಿತ್ಯ ಹೆಚ್.ಎಸ್ ಹಾಲ್ಮುತ್ತೂರು

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಕೂಟರ್‌ಗಳು ಹೆಚ್ಚು ಯುವಕ, ಯುವತಿಯರನ್ನು, ಮಹಿಳೆಯರನ್ನು ಆಕರ್ಷಿಸಿವೆ. ಹೀಗಾಗಿ ಸ್ಕೂಟರ್ ಪ್ರಿಯರಿಗೆ ಜಾದೂ ಮಾಡಲು ಸಿದ್ಧವಾಗುತ್ತಿವೆ ದ್ವಿಚಕ್ರವಾಹನ ತಯಾರಿಕಾ ಕಂಪೆನಿಗಳು.

Hero Dare

ಹೀರೊ ಕಂಪೆನಿ ತನ್ನ ಗ್ರಾಹಕರಿಗೆ ಹೊಸ ಹೀರೋ ಡೇರ್ ಸ್ಕೂಟರ್ ಪರಿಚಯಿಸುತ್ತಿದ್ದು, ಇದು 124.6 ಸಿಸಿ, ಏರ್‌ಕೂಲ್‌ಡ್ ಎಂಜಿನ್ ಹೊಂದಿದ್ದು, ಸ್ಕೂಟರ್ ರೆಡ್ ಮತ್ತು ಬ್ಲಾಕ್ ಶೇಡ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಸ್ಟಾರ್‌ಟ್ ಮಾತ್ರವೇ ಇದ್ದು, 6 ಲೀಟರ್ ಪೆಟ್ರೋಲ್ ಟ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಟಾಪ್ ಸ್ಪೀಡ್ 110 ಕಿ.ಮೀ ಆಗಿದೆ. ಡಿಜಿಟಲ್ ಸ್ಪೀಡೋ ಮೀಟರ್, ಡಿಜಿಟಲ್ ಟ್ರಿಪ್‌ಮೀಟರ್, ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಇದು ಅಲಾಯ್ ವ್ಹೀಲ್, ಫ್ರೆಂಟ್ ಡಿಸ್‌ಕ್ ಬ್ರೇಕ್ ಅನ್ನು ಹೊಂದಿದ್ದು ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಆಗಿದೆ. ಇದು ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ಇದರ ಎಕ್‌ಸ್ ಶೋ ರೂಮ್ ಬೆಲೆ 56000 ಆಗಿದ್ದು, ಸ್ಕೂಟರ್ ಇತರೆ ಸ್ಕೂಟರ್‌ಗಳಿಗೆ ಬೆಲೆಯಲ್ಲಿ ಪೈಪೋಟಿ ನಿಉವ ಸಾಧ್ಯತೆ ಇದ್ದು, ಹೋಂಡಾ ಆಕ್ಟಿವಾ 125, ಸುಜುಕಿ ಸ್ವಿಶ್ 125 ಗೆ ಪೈಪೋಟಿ ನೀಡಲಿದೆ.

Vespa GTS Super 125

ಸ್ಕೂಟರ್ 125 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್‌ಡ್ ಆಗಿದೆ. ಅನಲಾಗ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್ ಹೊಂದಿದೆ. ಹಾಲೊಜೆನ್ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್ ಹೊಂದಿರಲಿದೆ. ನೋಡಲು ಆಕರ್ಷಕವಾಗಿದ್ದು ಮತ್ತು ಸೆಲ್‌ಫ್ ಸ್ಟಾರ್‌ಟ್ ಮಾತ್ರವೇ ಇರಲಿದೆ. ಟಯರ್, ಅಲಾಯ್ ವ್ಹೀಲ್ ಹೊಂದಿದ್ದು, ಫ್ರೆಂಟ್ 220ಎಮ್‌ಎಮ್, ಬ್ಯಾಕ್ ಡಿಸ್‌ಕ್ ಬ್ರೇಕ್ ಹೊಂದಿದ್ದು, ಎಬಿಎಸ್ ಆಯ್ಕೆಯನ್ನು ನೀಡಿದೆ. ಇದು ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, 90000 ಎಕ್‌ಸ್ ಶೋ ರೂಮ್ ಬೆಲೆ ಇರಲಿದ್ದು, ಇದು ಸುಜುಕಿ, ಹೊಂಡಾ ಕಂಪನಿಯ ಬೈಕ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

Aprilia Storm 125

ಸ್ಕೂಟರ್ 124.49 ಸಿಸಿ, ಏರ್‌ಕೂಲ್‌ಡ್ ಎಂಜಿನ್ ಹೊಂದಿದ್ದು, ಕಿಕ್ ಮತ್ತು ಸೆಲ್‌ಫ್ ಸ್ಟಾರ್‌ಟ್ ಸೌಲಭ್ಯವನ್ನು ಅನಾಲಾಗ್, ಡಿಜಿಟಲ್ ಸ್ಪೀಡೋಮೀಟರ್ ಹೊಂದಿದೆ. ಹಾಲೋಜೆನ್ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, ಎಲ್‌ಇಡಿ ಟರ್‌ನ್ ಸಿಗ್ನಲ್ ಲ್ಯಾಂಪ್ ಹೊಂದಿದೆ. ಟ್ಯೂಬ್‌ಲೆಸ್ ಟಯರ್, ಫ್ರೆಂಟ್ ಡಿಸ್‌ಕ್ ಮತ್ತು ಬ್ಯಾಕ್ ಡ್ರಮ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. 6.5 ಲೀಟರ್ ಸಾಮರ್ಥ್ಯದ ದೊಡ್ಡ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದು ಡಿಸೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಎಕ್‌ಸ್ ಶೋ ರೂಮ್ ಬೆಲೆ 65000 ರು. ಇರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close