About Us Advertise with us Be a Reporter E-Paper

ಅಂಕಣಗಳು

ಸೀಗಲ್ ಪಕ್ಷಿಗಳಿಗೆ ಸಮಾರಾಧನೆ!

ಸೀಗಲ್ ಪಕ್ಷಿಗಳಿಗೆ ಸಮಾರಾಧನೆಯೇ? ಎಲ್ಲಿ, ಏಕೆ, ಮುಂತಾದ ಪ್ರಶ್ನೆಗಳಿಗೆ ಇಲ್ಲಿರುವ ನಿಜಜೀವನದ ಪ್ರಸಂಗ ಉತ್ತರ ನೀಡುತ್ತದೆ. 1955ರಲ್ಲಿ ಅಮೆರಿಕದ ಫ್ಲೋರಿಡಾದ ಸಮುದ್ರ ತೀರಕ್ಕೆ ಪ್ರತಿ ಶುಕ್ರವಾರ ಸಂಜೆ ವೃದ್ಧಾಪ್ಯದಿಂದಾಗಿ ಬೆನ್ನು ಬಾಗಿದ್ದ ವೃದ್ಧರೊಬ್ಬರು ಬರುತ್ತಿದ್ದರು. ಅವರ ಎಡಗೈಯ್ಯಲ್ಲಿ ಮೀನುಗಳಿಂದ ತುಂಬಿದ್ದ  ಅವರು ಸಮುದ್ರ ತೀರದಲ್ಲಿರುತ್ತಿದ್ದ ಸೀಗಲ್ ಪಕ್ಷಿಗಳಿಗೆ ಬಕೇಟಿನಿಂದ ಸಣ್ಣಸಣ್ಣ ಮೀನುಗಳನ್ನು ತೆಗೆದು ಎಸೆಯುತ್ತಿದ್ದರು. ಅವರ ಹಿಂದೆ ಪಕ್ಷಿಗಳ ದೊಡ್ಡ ಹಿಂಡೇ ಇರುತ್ತಿತ್ತು. ಬಕೇಟ್ ಖಾಲಿಯಾದ ನಂತರ ಅವರು ಹಿಂತಿರುಗುತ್ತಿದ್ದರು. ಇದನ್ನು ಗಮನಿಸಿದವರೊಬ್ಬರು ಕುತೂಹಲದಿಂದ ಸೀಗಲ್ ಪಕ್ಷಿಗಳಿಗೇಕೆ ಈ ಸಮಾರಾಧನೆ? ಎಂದು ಕೇಳಿದರು.

ಅವರು ಒಮ್ಮೆ ಸೀಗಲ್ ಪಕ್ಷಿಯೊಂದು ತನ್ನ ಪ್ರಾಣವನ್ನೇ ತ್ಯಾಗ ಮಾಡಿ ನನ್ನ ಪ್ರಾಣವನ್ನು ಉಳಿಸಿತ್ತು. ಅದಕ್ಕೆ ಕೃತಜ್ಞತೆ ತೋರಿಸಲೋಸುಗ ಸಮಾರಾಧನೆಯನ್ನು ನಡೆಸುತ್ತೇನೆ. ನನ್ನ ಹೆಸರು ಕ್ಯಾಪ್ಟನ್  ರಿಕನ್ ಬೇಕರ್. ಮೋಟರ್ ಮೆಕ್ಯಾನಿಕ್ಕಾಗಿ ಜೀವನ ಪ್ರಾರಂಭಿಸಿದ ನಾನು ರೇಸ್ ಕಾರುಗಳ ಚಾಲಕ, ಯುದ್ಧ ವಿಮಾನಗಳ ಪೈಲಟ್, ಈಸ್ಟರ್ನ್ ಏರ್‌ಲೈನ್ಸಿನ ಮುಖ್ಯಾಧಿಕಾರಿ, ಸರಕಾರೀ ಸಲಹೆಗಾರ ಮುಂತಾದ ಅನೇಕ ಉದ್ಯೋಗಗಳನ್ನು ಮಾಡಿದ್ದೇನೆ. ಎರಡನೆಯ ವಿಶ್ವಯುದ್ಧದಲ್ಲಿ ಯುದ್ಧ ವಿಮಾನಗಳನ್ನು ಓಡಿಸುತ್ತಿದ್ದೆ. 1942ರ ನವೆಂಬರಿನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನನ್ನ ವಿಮಾನ ದಿಕ್ಕುತಪ್ಪಿ ಎಲ್ಲೆಲ್ಲೋ ಹೊರಟುಹೋಯಿತು. ಕೊನೆಗೆ ಅಪಘಾತಕ್ಕೀಡಾಗಿ ಪೆಸಿಫಿಕ್ ಸಾಗರದ ಮಧ್ಯೆ ಬಿತ್ತು. ವಿಮಾನ ಚೂರುಚೂರಾಯಿತು. ನಾನು ಮತ್ತು ಏಳು ಜನ ಸಂಗಡಿಗರು  ಹಲಗೆಯೊಂದರ ಮೇಲೆ ತೇಲುತ್ತ ಪ್ರಾಣವನ್ನುಳಿಸಿಕೊಂಡೆವು. ಆದರೆ ತಿನ್ನಲು ಆಹಾರವಿಲ್ಲ. ಕುಡಿಯಲು ಸಿಹಿನೀರಿಲ್ಲ. ತೆಪ್ಪದ ಮೇಲೆ ತೇಲುತ್ತಿದ್ದೆವು. ಅಪಾಯಕಾರಿ ತಿಮಿಂಗಿಲಗಳನ್ನು ರಬ್ಬರ್ ಹಲಗೆಯ ಮೇಲೆ ಪಟಪಟ ಬಡಿಯುವ ಶಬ್ದದಿಂದ ದೂರ ಓಡಿಸುತ್ತಿದ್ದೆವು.

ಸಮುದ್ರದಲ್ಲಿನ ಮೀನುಗಳೇ ನಮಗೆ ಆಹಾರ. ಆಗಾಗ ಸುರಿಯುವ ಮಳೆಯಿಂದ ಕುಡಿಯುವ ನೀರು. ಆದರೆ ಬದುಕಲೇಬೇಕೆಂಬ ಬಯಕೆ, ದೇವರು ಕಾಪಾಡುತ್ತಾನೆಂಬ ನಂಬಿಕೆಯಲ್ಲಿ ಇಪ್ಪತ್ತೊಂದು ದಿನಕ್ಕೂ ಹೆಚ್ಚುಕಾಲ ಸಮುದ್ರದಲ್ಲೇ ತೇಲುತ್ತಿದ್ದೆವು. ಆದರೆ ದಿನಗಳೆದಂತೆ ಎಲ್ಲರೂ ಬಹಳ ಬಳಲಿದ್ದೆವು. ಗುಟುಕು ಪ್ರಾಣವನ್ನು  ಇನ್ನೇನು ಕೊನೆಗಾಲ ಸಮೀಪಿಸುತ್ತಿದೆ ಎನಿಸಿತು. ಅಂತಿಮ ಪ್ರಾರ್ಥನೆಗಳನ್ನು ಹೇಳಿ ಪ್ರಾಣವನ್ನು ದೇವರಿಗೊಪ್ಪಿಸಿ ತೆಪ್ಪದ ಮೇಲೆ ಬಿದ್ದುಕೊಂಡೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ನನ್ನ ತಲೆಯ ಮೇಲೆ ಹಕ್ಕಿಯೊಂದು ಬಂದು ಕೂತಂತಾಯಿತು. ನನಗರಿವಿಲ್ಲದಂತೆಯೇ ಚಾಚಿದ ಕೈಗೊಂದು ಸೀಗಲ್ ಪಕ್ಷಿ ಸಿಕ್ಕಿತು. ಸಮುದ್ರ ತೀರದಿಂದ ನೂರಾರು ಮೈಲಿಗಳ ದೂರದಲ್ಲಿರುವ ನಮ್ಮ ಬಳಿಗೆ ಆ ಪಕ್ಷಿ ಹೇಗೆ ಬಂದಿತೋ ಗೊತ್ತಿಲ್ಲ. ಆದರೆ ನಮ್ಮ ಹಸಿವನ್ನು ತಣಿಸಲು ದೇವರೇ ಪಕ್ಷಿಯನ್ನು ಕರುಣಿಸಿದ್ದಾನೆಂದು ಭಾವಿಸಿ ನಿರ್ದಾಕ್ಷಿಣ್ಯವಾಗಿ ಹಕ್ಕಿಯನ್ನು ಕೊಂದು ನಾವೆಲ್ಲ  ತಿಂದೆವು. ಹೊಟ್ಟೆಗೊಂದಷ್ಟು ಆಹಾರ ಸಿಕ್ಕಿದುದರಿಂದ ಹೋಗುತ್ತಿದ್ದ ಜೀವ ಮತ್ತೆ ಬಂದಂತಾಯಿತು. ಅದಾದ ಮುಂದಿನ 24 ಗಂಟೆಗಳಲ್ಲಿ ರಬ್ಬರ್ ತೆಪ್ಪ ತೇಲುತ್ತ ನೆಲವೊಂದನ್ನು ತಲುಪಿತು. ಅಲ್ಲೊಂದಷ್ಟು ಆಹಾರ ಸಿಕ್ಕಿತು. ಒಂದೆರಡು ದಿನಗಳಲ್ಲಿ ನಾವು ಸುರಕ್ಷಿತವಾಗಿ ತಾಯ್ನಾಡನ್ನು ತಲುಪಿದೆವು.

ಸಮುದ್ರದ ಮಧ್ಯೆ ಹಸಿವಿನಿಂದ ಸಾಯುತ್ತಿದ್ದ ನಮ್ಮನ್ನು ಎಲ್ಲಿಂದಲೋ ಬಂದ ಸೀಗಲ್ ಪಕ್ಷಿಯೊಂದು, ತನ್ನ ಪ್ರಾಣತ್ಯಾಗ ಮಾಡಿ ನಮ್ಮ ಪ್ರಾಣವನ್ನುಳಿಸಿದ್ದನ್ನು ನಾನು ಮರೆಯುವುದು ಹೇಗೆ? ಹಾಗಾಗಿ ನಾನು ಇಂದಿಗೂ ಪ್ರತಿ ಶುಕ್ರವಾರ ಸಂಜೆ  ಪಕ್ಷಿ ಸಂಕುಲಕ್ಕೆ ಆಹಾರವನ್ನಿತ್ತು ಕೃತಜ್ಞತೆಯನ್ನು ತೋರಿಸುತ್ತೇನೆ ಎಂದು ಹೇಳಿ ಮಾತು ಮುಗಿಸಿದರಂತೆ.

ಬದುಕಲೇಬೇಕೆಂಬ ಬಯಕೆ, ದೇವರು ಕಾಪಾಡುತ್ತಾನೆಂಬ ನಂಬಿಕೆ, ಮತ್ತು ಪ್ರಾಣ ಉಳಿಸಿದವರಿಗೆ ಕೃತಜ್ಞತೆಗಳೆಂಬ ಬೇಕರ್ ಅವರ ಮೂರು ಸೂತ್ರಗಳು ಚೆನ್ನಾಗಿವೆಯಲ್ಲವೇ? ನಮಗೂ ಯಾರಾದರೂ ಸಹಾಯ ಮಾಡಿದ್ದರೆ, ಅವರ ಉಪಕಾರವನ್ನು ತೀರಿಸುವ ವಿಧಾನವನ್ನು ನಾವೂ ಯೋಚಿಸಬಹುದಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close