About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಗ್ಲೂಕೋಸ್ ಬಾಟಲ್ ಬದಲಾಯಿಸಿ ಮಾನವೀಯತೆ ಮೆರೆದಿದ್ದ ಸೆಕ್ಯೂರಿಟಿ ಗಾರ್ಡ್ ವಜಾ

ಚಾಮರಾಜನಗರ: ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಗ್ಲುಕೋಸ್ ಬಾಟಲ್ ಬದಲಿಸಿ ಮಾನವೀಯತೆ ಮೆರೆದಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.

ಸತೀಶ್ ಕೆಲಸ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್. ಜನವರಿ 10ರಂದು ರೋಗಿಯೊಬ್ಬರು ತೊಂದರೆಗೆ ಒಳಗಾಗಿದ್ದರಿಂದ ಅವರಿಗೆ ಗ್ಲೂಕೋಸ್‌ ಬಾಟಲಿಯನ್ನ ಹಾಕಲಾಗಿತ್ತು. ಅದು ಮುಗಿದ ಕೂಡಲೇ ತೆಗೆಯಬೇಕಾಗಿತ್ತು. ಈ ಬಗ್ಗೆ ರೋಗಿಯ ಸಂಬಂಧಿಗಳು ವೈದ್ಯರು ಹಾಗೂ ನರ್ಸ್‌ಗಳಿಗೆ ಕೂಗಿ ಹೇಳಿದರೂ ಯಾರೂ ಸ್ಪಂದಿಸಿರಲಿಲ್ಲ. ಇದರಿಂದಾಗಿ ಆತನ ಸಂಬಂಧಿಗಳು ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಓಡಿ ಬಂದ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್​ ಸತೀಶ್​ ಖಾಲಿಯಾಗಿದ್ದ ಗ್ಲೂಕೋಸ್‌ ಬಾಟಲಿ ತೆಗೆದು ರೋಗಿಯ ಪ್ರಾಣ ಉಳಿಸಿದ್ದರು. ಸತೀಶ್ ಮಾಡಿದ ಕಾರ್ಯಕ್ಕೆ ಜಿಲ್ಲೆಯ ಜನರಿಂದ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು.

ಈ ಪ್ರಕರಣದಲ್ಲಿ ತಪ್ಪು ಮಾಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪಾಯ ತಪ್ಪಿಸಿದ ಸೆಕ್ಯೂರಿಟಿ ಗಾರ್ಡ್​ ಅನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಡೀನ್ ರಾಜೇಂದ್ರ ಅವರನ್ನು ಪ್ರಶ್ನಿಸಿದಾಗ, ಆಸ್ಪತ್ರೆಯಲ್ಲಿ ನಡೆಯುವ ಘಟನೆಯ ಬಗ್ಗೆ ಸ್ಪಷ್ಟನೆ ಕೊಡುವ ಆಗತ್ಯ ಇಲ್ಲ ಎಂದು ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close