ಅಧಿಕಾರಿಗಳ ವಿರುದ್ಧ ಸೆಹ್ವಾಗ್ ಕೆಂಡಾಮಂಡಲ

Posted In : ಕ್ರೀಡೆ

ದೆಹಲಿ: ರಾಂಚಿ ಕ್ರೀಡಾಂಗಣದಲ್ಲಿ ಮೃತಪಟ್ಟ ವಿಶಾಲ್ ಕುಮಾರ್ ವರ್ಮಾ ಸಾವಿನ ಕುರಿತು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಶನಿವಾರ ಬೆಳಗ್ಗೆ ಟ್ವಿಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಅವರು, ‘ರಾಂಚಿಯ ಕ್ರೀಡಾಂಗಣವು ನೀರಿನಿಂದ ತುಂಬಿದ್ದು, ವಿದ್ಯುತ್ ಅವಘಡದಿಂದ ವಿಶಾಲ್ ಕುಮಾರ್ ಅವರಂತಹ ರಾಷ್ಟ್ರೀಯ ಮಟ್ಟದ ಕುಸ್ತಿಪಟುವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸಾವಿಗೆ ಅಧಿಕಾರಿಗಳ ಬೆಜವಾಬ್ದಾರಿಯೇ ಕಾರಣ. ತಕ್ಷಣ ಕಟ್ಟಡವನ್ನು ದುರಸ್ತಿಗೊಳಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಳೆದ ಮಂಗಳವಾರ ಕ್ರೀಡಾಂಗಣದ ಶೌಚಾಲಯಕ್ಕೆ ತೆರಳಿದ್ದ ವರ್ಮಾ, ವಿದ್ಯುತ್ ತಂತಿ ತಗುಲಿ ಕುಸಿದು ಬಿದ್ದಿದ್ದರು. ಅವರನ್ನು ಗಮನಿಸಿದ ಕಾರ್ಮಿಕರು ತಕ್ಷಣ ಸ್ಥಳೀಯರ ಸಹಕಾರದಿಂದ ಆಸ್ಪತ್ರೆೆಗೆ ದಾಖಲಿಸಿದ್ದು, ವರ್ಮಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

Leave a Reply

Your email address will not be published. Required fields are marked *

two × 1 =

 
Back To Top