About Us Advertise with us Be a Reporter E-Paper

ರಾಜ್ಯ

ಎಸ್‌.ಎಸ್‌. ಎಫ್‌ ಬೆಂಗಳೂರು ಜಿಲ್ಲಾ ವತಿಯಿಂದ ವಿಚಾರ ಗೋಷ್ಠಿ

ಬೆಂಗಳೂರು:  ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ದಿನಾಂಕ 12-08-2018 ರ ಭಾನುವಾರ ದಂದು ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ತಾಜುದ್ದೀನ್ ಫಾಳಿಲಿ ಹೇಳಿದರು.

ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರಕ್ಕೆ ಸ್ವತಂತ್ರ ಬಂದು ಏಳು ದಶಕಗಳಾದರೂ ಹಲವು ಸಮಸ್ಯೆಗಳು ಇಂದಿಗೂ ಭಾರತದ ಪ್ರಗತಿಗೆ ತಡೆಯಾಗಿವೆ. ಹಾಗಾಗಿ “ಪ್ರಜಾಪ್ರಭುತ್ವ ಭಾರತ ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಾನುವಾರದ ಸಂಜೆ  4.00 ಗಂಟೆಗೆ ನಗರದ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಅದಿಯಾ ಎಜ್ಯುಕೇಶನ್ ಫೌಂಡೇಶನ್ ಬೆಂಗಳೂರು  ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಮುಹಮ್ಮದ್ ಶಾಫಿ ಸಅದಿ ಉದ್ಘಾಟನೆ ಮಾಡಲಿದ್ದು, ಎಸ್.ಎಸ್.ಎಫ್  ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ  ಫಾರೂಖ್ ಭಾಗವಹಿಸಲಿದ್ದಾರೆ.

ವಿಚಾರಗೋಷ್ಠಿಯಲ್ಲಿ ಸಾಹಿತಿ ಹಾಗೂ ಇತಿಹಾಸ ಸಂಶೋಧಕರಾದ  ತಲಕಾಡು ಚಿಕ್ಕರಂಗೇಗೌಡ, ಅಂಕಣಕಾರರಾದ  ಚಕ್ರವರ್ತಿ ಸೂಲಿಬೆಲೆ, ಪತ್ರಕರ್ತ ಬಿ.ಎಂ ಹನೀಫ್, ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಖ್, ಅಖಿಲ ಭಾರತ ಇಸ್ಲಾಮಿಕ್ ಶೈಕ್ಷಣಿಕ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಎ ಖಾದರ್ ಹಾಜಿ ವಿಚಾರ ಮಂಡನೆ ಮಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್.ಎಫ್ ಬೆಂಗಳೂರು ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಫಾಳಿಲಿ, ಉಪಾಧ್ಯಕ್ಷರಾದ ಮುಹಮ್ಮದ್ ಶಾಫಿ ಸಅದಿ ಮೆಜೆಸ್ಟಿಕ್ ಹಾಗೂ ಅನ್ವರ್ ಮುಸ್ಲಿಯಾರ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ನುಫೈಲ್ ಉಪಸ್ಥಿತರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close