ವಿಶ್ವವಾಣಿ

ನಿಫ್ಟಿ, ಸೆನ್ಸೆಕ್ಸ್ ನಾಗಾಲೋಟ!

ಮುಂಬೈ: ಮುಂಬೈ ಸ್ಟಾಕ್ ಮಾರು ಕಟ್ಟೆ ಹಾಗೂ ರಾಷ್ಟ್ರೀಯ ಮಾರುಕಟ್ಟೆ ಸಂವೇದಿ ಸೂಚ್ಯಂಕಗಳ ಏರಿಕೆ ಮುಂದುವರಿದಿದ್ದು, ಬಾಂಬೆ ಸ್ಟಾಕ್‌ ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇಂದು ಬೆಳಿಗ್ಗೆ 308.27  ಅಂಕಗಳಷ್ಟು ಏರಿಕೆ ಕಂಡಿದ್ದು, ದಾಖಲೆಯ 37,292.91 ಅಂಕಗಳನ್ನು ತಲುಪಿದೆ.

ಇನ್ನು ರಾಷ್ಟ್ರೀಯ ಸ್ಟಾಕ್‌ ಮಾರುಕಟ್ಟೆಯಲ್ಲೂ ಸಂವೇದಿ ಸೂಚ್ಯಂಕ ನಿಫ್ಟಿಯಲ್ಲಿ ಕೂಡ ಏರಿಕೆಯಾಗಿದ್ದು 78.95 ಅಂಕ ಹೆಚ್ಚಳಗೊಂಡು 11,246.25 ಅಂಕಗಳನ್ನು ದಾಖಲಿಸಿ ವಹಿವಾಟು ಪೂರ್ಣಗೊಳಿಸಿದೆ. ಡಾಲರ್‌ ಎದರು ರುಪಾಯಿ ಮೌಲ್ಯ ಕೂಡ ವೃದ್ಧಿಸಿದ್ದು, ಎಷ್ಯಾದ ದೇಶಗಳ ಕರೆನ್ಸಿಗಳ ಪೈಕಿ ಹೆಚ್ಚು ಬಲವರ್ಧನೆಯಾಗಿದೆ.

ಇಂದಿನ ಆರಂಭದ ವಹಿವಾಟಿನಲ್ಲಿ ಐಡಿಸಿ, ಟಾಟಾ ಸ್ಟೀಲ್‌, ಹೀರೋ ಮೋಟೋಕಾರ್ಪ್‌, ಬಜಾಜ್‌ ಆಟೋ ಹಾಗೂ ಐಸಿಸಿ ಬ್ಯಾಂಕ್‌ಗಳ ಶೇರುಗಳು ಹೆಚ್ಚಿನ ಲಾಭ ದಾಖಲಿಸಿವೆ.