About Us Advertise with us Be a Reporter E-Paper

Breaking Newsರಾಜ್ಯ

ಬಿಎಂಟಿಸಿ ಬಸ್‍‍ಗಳಲ್ಲಿ ಸೆನ್ಸಾರ್‍‍ ವ್ಯವಸ್ಥೆ!

ಆದಾಯ ಸೋರಿಕೆ ತಡೆಗೆ ಈ ವ್ಯವಸ್ಥೆ ಜಾರಿಗೆ ಚಿಂತನೆ: ಇದು ದೇಶದ ಮೊಟ್ಟ ಮೊದಲ ಪ್ರಯೋಗ

ಬೆಂಗಳೂರು: ಟಿಕೆಟ್‌ ಇಲ್ಲದೆ ಪ್ರಯಾಣದಿಂದ ಆಗುತ್ತಿರುವ ಆದಾಯ ಸೋರಿಕೆ ತಡೆಗೆ ಬಿಎಂಟಿಸಿ ಬಸ್‌ಗಳಲ್ಲಿ ಸೆನ್ಸರ್‌ ಆಧಾರಿತ ಪ್ರಯಾಣಿಕರ ಗಣತಿ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದ್ದು, ದೇಶದಲ್ಲಿ ಮೊಟ್ಟಮೊದಲ ಬಾರಿ ಈ ಪ್ರಯೋಗ ನಡೆಯುತ್ತಿದೆ.

ಬಸ್‌ಗಳ ಪ್ರವೇಶ ದ್ವಾರಗಳಲ್ಲಿ ಈ ಸೆನ್ಸರ್‌ ಆಧಾರಿತ ಗಣತಿ ಯಂತ್ರವನ್ನು ಅಳವಡಿಸಿ, ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಲೆಕ್ಕವನ್ನು ದಾಖಲಿಸಲಾಗುವುದು. ಈ ಮೂಲಕ ಉದ್ದೇಶಿತ ಬಸ್‌ನಲ್ಲಿ ಇಡೀ ದಿನ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಹಾಗೂ ನಿರ್ವಾಹಕರ ಬಳಿ ಸಂಗ್ರಹವಾದ ಮೊತ್ತವನ್ನು ತಾಳೆ ಹಾಕಲಾಗುವುದು. ಇದನ್ನು ಆಧರಿಸಿ ಟಿಕೆಟ್‌ ನೀಡದೆ, ಸಂಸ್ಥೆಗೆ ನಷ್ಟ ಉಂಟುಮಾಡುವ ನಿರ್ವಾಹಕರ ವಿರುದ್ಧ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ.

ಪ್ರಸ್ತುತ ದೂರುಗಳನ್ನು ಆಧರಿಸಿ ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ಗಳು ಆಯ್ದ ಬಸ್‌ಗಳನ್ನು ತಪಾಸಣೆ ಮಾಡಿ, ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿ, ಆಯಾ ಬಸ್‌ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದರಿಂದ ಸಂಪೂರ್ಣವಾಗಿ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಕೆಲವೇ ಬಸ್‌ಗಳನ್ನು ‘ಟಾರ್ಗೆಟ್‌’ ಮಾಡಲಾಗುತ್ತದೆ ಎಂಬ ಅಪಸ್ವರ ಕೇಳಿಬರುತ್ತಿತ್ತುದೆ. ಈಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಆದಾಯ ಸೋರಿಕೆಗೆ ಸಂಪೂರ್ಣ ಬ್ರೇಕ್‌ ಹಾಕಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close