ವಿಶ್ವವಾಣಿ

ಯುಎಸ್ ಓಪನ್: ಫೈನಲ್‌ಗೆ ಲಗ್ಗೆಯಿಟ್ಟ ಸೆರೆನಾ ವಿಲಿಯಮ್ಸ್

September 6, 2018 - Serena Williams in action against Anastasija Sevastova during the 2018 US Open.

ನ್ಯೂಯಾರ್ಕ್: ಸೆರೆನಾ ವಿಲಿಯಮ್ಸ್ ಅವರು ಯುಎಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು. ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಅವರು ಅನಸ್ತಾಸಿಜಾ ಸೆವಸ್ಟೋವಾ ಅವರನ್ನು 6-3, 6-0 ನೇರಸೆಟ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು.

ವಿಶ್ವಾಸದಿಂದಲೇ ಮೈದಾನಕ್ಕೆ ಆಗಮಿಸಿದ ಸೆರೆನಾ ಮೊದಲ ಸೆಟ್‌ನಲ್ಲಿ ಮೂರು ಅಂಕಗಳ ಮುನ್ನಡೆಯಾದರೆ, ಎರಡನೇ ಸೆಟ್‌ನಲ್ಲಿ ಅಮೋಘ ಆಟವಾಡಿ ಎದುರಾಳಿಯನ್ನು ತಮ್ಮ ಬಲಿಷ್ಠ ಹೊಡೆತಗಳ ಮೂಲಕ ಎಲ್ಲ ಅಂಕಗಳನ್ನು ತಾವೇ ಪಡೆಯುವಲ್ಲಿ ಯಶಸ್ವಿಯಾದರು. ಸೆವಸ್ಟೋವಾ ಮೊದಲ ಸೆಟ್‌ನಲ್ಲಿ ಕೊಂಚ ನೀಡಿದರೆ, ಎರಡನೇ ಸೆಟ್‌ನಲ್ಲಿ ಕಳಪೆ ಪ್ರದರ್ಶನದಿಂದ ಒಂದು ಅಂಕ ಗಳಿಸಲು ವಿಫಲವಾಗಿ ತಮ್ಮ ಸೋಲಿಗೆ ತಾವೇ ಕಾರಣರಾದರು.

ಸೆರೆನಾ ಅಂತಿಮ ಸುತ್ತಿನಲ್ಲಿ ಜಪಾನ್‌ನ ನವೋಮಿ ಓಸಾಕಾ ಅವರನ್ನು ಎದುರಿಸಿ ಜಯಶಾಲಿಯಾಗುವ ವಿಶ್ವಾಸದಲ್ಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಆರು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದಿರುವ ಅವರು ಪ್ರಸಕ್ತ ಆವೃತ್ತಿಯಲ್ಲಿ ಗೆಲುವು ಸಾಧಿಸುವ ತವಕದಲ್ಲಿದ್ದಾರೆ.

ಸೆಮಿಫೈನಲ್‌ನಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿರುವುದಕ್ಕೆ ಸಂತಸವಾಗಿದೆ. ಮುಂದಿನ ಪಂದ್ಯಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆಲ್ಲುವೆ ಎಂದು ಸೆರೆನಾ ವಿಶ್ವಾಸ ವ್ಯಕ್ತಪಡಿಸಿದರು. ಟೂರ್ನಿಯ ಆರಂಭಿಕ ಪಂದ್ಯದಿಂದಲೂ ಅತ್ಯುತ್ತಮ ಆಟವಾಡುವಲ್ಲಿ ಯಶಸ್ವಿಯಾಗಿದ್ದ, ಸೆವಸ್ಟೋವಾ ಉಪಾಂತ್ಯದಲ್ಲಿ ಕಳಪೆ ಆಟವಾಡುವ ಮೂಲಕ ಸೋಲನುಭವಿಸಿ ಟೂರ್ನಿಯಿಂದ ಹೊರನಡೆದರು.

ಸೆರೆನಾ ಒಟ್ಟು 23 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಡಬಲ್ಸ್, ಮಿಶ್ರ ಹಾಗೂ ಗುಂಪು ವಿಭಾಗಗಳಲ್ಲಿ ಹಲವಾರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.