About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಸೆರೆನಾಗೆ ಆಘಾತಕಾರಿ ಸೋಲು

ವಾಷಿಂಗ್ಟನ್: ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಅಮೆರಿಕಾದ ಅನುಭವಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸನ್ ಅವರು ಸ್ಯಾನ್ ಜೋಸ್, ಯುಎಸ್‌ಎ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರನಡೆದರು.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ಸೆರೆನಾ ಅವರು ಬ್ರಿಟನ್‌ನ ಜೊಹ್ನಾ ಕೊಂಟಾ ಎದುರು 1-6, 0-6 ಅಂತರಗಳ ನೇರಸೆಟ್‌ಗಳಿಂದ ಮಣಿದರು. ವಿಶ್ವಾಸದಿಂದಲೇ ಮೈದಾನಕ್ಕೆ ಆಗಮಿಸಿದ ಸೆರೆನಾ ಮೊದಲ ಸೆಟ್‌ನಲ್ಲಿಯೇ ಕಳಪೆ ಪ್ರದರ್ಶನ ತೋರುವ ಮೂಲಕ ಅಂಕಗಳ ಹಿನ್ನಡೆಯಾದರೆ, ಎರಡನೇ ಸೆಟ್‌ನಲ್ಲಿ ತೀರಾ ನಿರಸ ಆಟವಾಡುವ ಮೂಲಕ ಒಂದು ಅಂಕ ಗಳಿಸಲು ಶಕ್ತವಾಗದೆ ಸೋಲಿಗೆ ಶರಣಾದರು.

ಜೊಹ್ನಾ ಅವರು ಎರಡು ಸೆಟ್‌ಗಳಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು. ಮುಂದಿನ ಪಂದ್ಯದಲ್ಲಿ ಅವರು ಸೋಫಿಯಾ ಕೀನ್ ಅವರನ್ನು ಎದುರಿಸಲಿದ್ದಾರೆ.ಈ ಪಂದ್ಯದಲ್ಲಿ ಸೋಲನುಭವಿಸಿರುವುದಕ್ಕೆ ಬಹಳ ಬೇಸರವಾಗಿದೆ. ಮುಂದಿನ ಟೂರ್ನಿಗಳಲ್ಲಿ ನನ್ನೆಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಉತ್ತಮ ಪ್ರದರ್ಶನ ನೀಡಿ ಸಾಧಿಸುವೆ ಎಂದು ಸೆರೆನಾ ಬೇಸರ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close