About Us Advertise with us Be a Reporter E-Paper

ಅಂಕಣಗಳು

ಹೊರೆಯಾಗಬಹುದು ಸೆಸ್!

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಸಿದ್ದರ ಪರಿಣಾಮ ಈಗ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಸರಕಾರ ಒಂದೆಡೆ ಇಂಧನ ಬೆಲೆ ಹೆಚ್ಚಿಸಿ ನಮ್ಮಿಂದ ಹಣ ವಸೂಲಿ ಮಾಡುತ್ತಿದೆ ಹಾಗೆಯೇ ಬಸ್ ಪ್ರಯಾಣ ದರ, ಸರಕು ಸಾಗಣೆ ಸೇರಿದಂತೆ ಎಲ್ಲ ಸಂಚಾರವನ್ನೂ ಮತ್ತೆ ಹಣ ಪಡೆಯುತ್ತಿದೆ. ಎರಡೆರಡು ವಸೂಲಿ ಏಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಎನ್ನುವ ವಾದ ಮುಂದಿಟ್ಟುಕೊಂಡು ಜನರ ನಿತ್ಯ ಜೀವನದ ಮೇಲೆ ಹೊರೆ ಹೊರಿಸಬಾರದು ಎನ್ನುತ್ತಿದ್ದಾರೆ ಜನ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿದಾಗಲೇ ಎಲ್ಲರೂ ಪಕ್ಷ ಭೇದ ಮರೆತು ವಿರೋಧಿಸಿದ್ದರು. ಈಗ ಬಸ್ ಪ್ರಯಾಣ ಹೆಚ್ಚಾದರೆ ಜನ ಮತ್ತಷ್ಟು ಆಕ್ರೋಶಗೊಳ್ಳುವ ಸಾಧ್ಯತೆಯೇ ಹೆಚ್ಚು. ಕೇಂದ್ರ ಸರಕಾರ ಹತ್ತು ರೂಪಾಯಿ ಮಾಡಿದರೂ ಸುಮ್ಮನಿರುವ ನೀವು ಈಗ ಒಂದು ರೂಪಾಯಿ ಹೆಚ್ಚು ಮಾಡಿದರೆ ಯಾಕೆ ಹೀಗೆಲ್ಲ ಪ್ರಶ್ನೆ ಮಾಡುತ್ತೀರಿ ಎಂದು ಮುಖ್ಯಮಂತ್ರಿ ಕೇಳಿದ್ದಾರೆ. ಪ್ರಶ್ನೆ ಅದಲ್ಲ, ನಿತ್ಯ ಜೀವನದ ಮೇಲೆ ಯಾರೇ ಬರೆ ಎಳೆದರೂ ಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಾರೆ ಎನ್ನುವುದನ್ನು ಕೇಂದ್ರ, ರಾಜ್ಯಎರಡೂ ಸರಕಾರಗಳು ಮರೆಯಬಾರದು. ಹಾಗೆಯೇ ಅವರ ಮೇಲೆ ಇವರು, ಇವರ ಮೇಲೆ ಅವರು ಜಿದ್ದಿಗೆ ಬಿದ್ದವರಂತೆ ಬೆಲೆ ಹೆಚ್ಚಳ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಇಂಥ ಕೆಲಸ ಯಾರು ಮಾಡಿದರೂ ತಪ್ಪು. ಬೆಲೆ ಹೆಚ್ಚಳ ಎನ್ನುವುದು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಬಜೆಟ್‌ನಲ್ಲಿ ಹೆಚ್ಚಾದ ಸೆಸ್ ಭಾರವನ್ನು ಈಗ ಜನ ಹೊರಬೇಕಾಗಿ ಬಂದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್, ಓಲಾ, ಊಬರ್, ಮತ್ತಿತರ ಟ್ಯಾಕ್ಸಿ ಪ್ರಯಾಣ ದುಬಾರಿಯಾಗಲಿದೆ. ಖಾಸಗಿ ಪ್ರವಾಸಿ ಟ್ಯಾಕ್ಸಿ ಮಾಲೀಕರೂ ಪ್ರಯಾಣ ದರ ಏರಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ ಈಗ ತೈಲ ಬೆಲೆ ಪ್ರತಿನಿತ್ಯ ಪರಿಷ್ಕರಣೆಯಾಗುತ್ತಿದೆ. ಜತೆಗೆ ಕರ್ನಾಟಕದಲ್ಲಿ ಲೀಟರ್ ಇಂಧನಕ್ಕೆ ಒಂದು ರು. ಹೊರೆ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಲಿದೆ. ದುಬಾರಿ ದುನಿಯಾಕ್ಕೆ ಹೊರೆಯಾಗಬಹುದು ಸೆಸ್.

Tags

Related Articles

Leave a Reply

Your email address will not be published. Required fields are marked *

Language
Close