About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ: ಸುಬ್ರಮಣಿಯನ್‌ ಸ್ವಾಮಿ

ದೆಹಲಿ:  ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿ, ಐಪಿಸಿ ಸೆಕ್ಷನ್ 377ರ ವಿಧಿಗೆ ಯಾವುದೇ ತರ್ಕವಿಲ್ಲ ಎಂದಿರುವುಕ್ಕೆ  ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್‌ ಸ್ವಾಮಿ, ಸಲಿಂಗಕಾಮಕ್ಕೆ ಅಂತ್ಯ ಹಾಡಿರುವ ನ್ಯಾಯಾಲಯ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ವಿಚಾರವನ್ನು ಯಾಕೆ ಚರ್ಚಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ತೀರ್ಮಾನ ಅಂತಿಮ ಎಂದು ಪರಿಭಾವಿಸಲು ಸಾಧ್ಯವಿಲ್ಲ. ಇಂಥದ್ದೊಂದು ತೀರ್ಪು ಸಮಾಜದ ಸ್ವಾಸ್ಥ್ಯ ಕದಡಿ ಲೈಂಗಿಕ ರೋಗಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಲಿಂಗ ಕಾಮ ಎನ್ನುವುದು ಒಂದು ನ್ಯೂನತೆ. ಇದೊಂದು ಕೆಟ್ಟ ಮಾನಸಿಕ ಸ್ಥಿತಿ, ಒಂದು ಪೀಳಿಗೆಯನ್ನೇ ಆತಂಕಕ್ಕೆ ದೂಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ 2015 ರಲ್ಲಿ ಟ್ವೀಟ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದು ಇದೀಗ ದೇಶದ ತುಂಬಾ ಚರ್ಚೆ ಹುಟ್ಟುಹಾಕಿದೆ.

Tags

Related Articles

Leave a Reply

Your email address will not be published. Required fields are marked *

Language
Close