About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲೈಂಗಿಕ ದೌರ್ಜನ್ಯ ಪ್ರಕರಣ: ಪತ್ತೆಯಾಗದ ಮಾಜಿ ಸಚಿವೆ ಮಂಜು ವರ್ಮಾ

ದೆಹಲಿ: ಮುಜಾಫರ್‌ಪುರದ ಶೆಲ್ಟರ್ ಹೋಮ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ, ಸದ್ಯ ತಲೆಮರೆಸಿಕೊಂಡಿರುವ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ನ್ಯಾಯಾಲಯಕ್ಕೆೆ ಹಾಜರುಪಡಿಸಲು ವಿಫಲರಾಗಿರುವ ಬಿಹಾರ ಪೋಲಿಸರ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಕ್ಯಾಬಿನೆಟ್ ಸಚಿವರೊಬ್ಬರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದರ ಗಂಭೀರತೆ ಎಂಥದ್ದು, ಎಂದು ನಿಮಗೆ ಗೊತ್ತಿದೆ. ಇದು ಅತಿಯಾಯಿತು’ ಎಂದು ಸುಪ್ರೀಕೋರ್ಟ್‌ನ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಅವರು ಪೋಲಿಸರನ್ನು ತರಾಟೆಗೆ ತೆಗೆದುಕೊಂಡರು.

ಪ್ರಮುಖ ವ್ಯಕ್ತಿಯೊಬ್ಬರನ್ನು ಪತ್ತೆೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆೆ ಪೋಲಿಸ್ ಇಲಾಖೆ ನ್ಯಾಯಾಲಯಕ್ಕೆೆ  ಷ್ಟಿಕರಣ ನೀಡಬೇಕು. ನವಂಬರ್ 27ರ ಮುಂದಿನ ವಿಚಾರಣೆಗೆ ಪೋಲಿಸ್ ಮಹಾನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.

ಪ್ರಕರಣದಲ್ಲಿ ಪತಿಯ ಪಾತ್ರವಿರುವ ಹಿನ್ನೆೆಲೆ ಮಂಜು ವರ್ಮಾ ಕೆಲ ತಿಂಗಳ ಹಿಂದೆ ಸಚಿವ ಸ್ಥಾನಕ್ಕೆೆ ರಾಜೀನಾಮೆ ನೀಡಿದ್ದರು. ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತೆಯಾಗಿದ್ದವು ಆದ ಕಾರಣ ಮಂಜು ವರ್ಮಾ ಅವರನ್ನು ಬಂಧಿಸಿ ಕರೆತರುವಂತೆ ಸುಪ್ರೀಂಕೋರ್ಟ್ ಬಿಹಾರ ಪೋಲಿಸರಿಗೆ ಸೂಚನೆ ನೀಡಿದರು, ಅವರ ಪತ್ತೆಗಾಗಿ ತಿಂಗಳಿಂದ ಪ್ರಯತ್ನಿಸುತ್ತಿರುವ ಪೋಲಿಸರು ಈ ಕಾರ್ಯದಲ್ಲಿ ವಿಫಲರಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close