About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ಅತ್ಯಾಚಾರ ಕಾನೂನಿನಲ್ಲಿ ಲಿಂಗ ಭೇಧ ಬೇಡ: ಅರ್ಜಿ ತಿರಸ್ಕರಿಸಿದ ಸುಪ್ರೀಂ

ದೆಹಲಿ: ಭಾರತೀಯ ಅಪರಾಧ ದಂಡ ಸಂಹಿತೆ 375ರ ಪ್ರಕಾರ ರಚನೆಗೊಂಡಿರುವ ಅತ್ಯಾಚಾರ ಕಾನೂನು ಲಿಂಗ ತಟಸ್ಥ ಅಲ್ಲ. ಅದರ ತಿದ್ದುಪಡಿ ಆಗಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಈ ಅರ್ಜಿ ವಿಚಾರಣೆ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಒಳಪಡುವುದರಿಂದ ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸೂಕ್ತ ಸಂದರ್ಭವೂ ಅಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರ ಪೀಠ, ಪುರುಷನ ಮೇಲೆ ಅತ್ಯಾಚಾರ ಎಸಗಿದ ಮಹಿಳೆಯನ್ನು ಅಥವಾ ಪುರುಷನ ಮೇಲೆ ಮತ್ತೊಬ್ಬ ಪುರುಷ ಅತ್ಯಾಚಾರ ಎಸಗಿದರೆ ಆತನನ್ನು ಏಕೆ ಆರೋಪಿ ಎಂದು ಪರಿಗಣಿಸಬಾರದು, ಎಂದು ಪ್ರಶ್ನಿಸಿತು.

2013ರಲ್ಲಿ ತಿದ್ದುಪಡಿಗೊಂಡ ಲೈಂಗಿಕ ದೌರ್ಜನ್ಯ ಕಾಯ್ದೆಯು ಅತ್ಯಾಚಾರದ ವ್ಯಾಪ್ತಿಯನ್ನು ವಿಸ್ತರಿಸಿತು. ಆದರೆ ಪುರುಷರು ಅಥವಾ ಲಿಂಗ ಪರಿವರ್ತಿತರನ್ನು ಸಂತ್ರಸ್ಥರು ಪರಿಗಣಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪುರುಷನಿಂದ ಮಹಿಳೆಯ ಮೇಲಾಗುವ ಅತ್ಯಾಚಾರ ಮಾತ್ರ ಭಾರತೀಯ ಅಪರಾಧ ಸಂಹಿತೆಯ ಐಪಿಸಿ ಸೆಕ್ಷನ್ 375ರ ಅನ್ವಯ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close