About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಪರಾರಿ

ಕಲಬುರಗಿ: 12 ವರ್ಷದ ಬಾಲಕನ ಮೇಲೆ 32 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಸೇಡಂ ತಾಲೂಕಿನ ಸಮೀಪದ ಸ್ಟೇಷನ್ ತಾಂಡಾದಲ್ಲಿ ಬುಧವಾರ ನಡೆದಿದೆ.

ಸೇಡಂ ತಾಲೂಕಿನ ಮಳಖೇಡ್ ಸಮೀಪದ ಸ್ಟೇಷನ್ ತಾಂಡಾದ ಪಾಶುಮಿಯಾ (32) ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾತ. ಐಸ್ ಕ್ರಿಮ್ ಕೊಡಿಸುವ ಆಮಿಷವೊಡ್ಡಿ ಬಾಲಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಷಯ ಪಾಲಕರ ಬಂದಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಬಾಲಕನನ್ನು ಸೇಡಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿದ ದೌರ್ಜನ್ಯ ಎಸಗಿದ ವ್ಯಕ್ತಿ ಪಾರಾರಿಯಾಗಿದ್ದಾನೆ.

ಸುದ್ದಿ ತಿಳಿದು ಚಿಂಚೋಳಿ ಉಪ ವಿಭಾಗದ ಎ.ಎಸ್.ಪಿ ಅಕ್ಷಯ್, ಸೇಡಂ ಸಿಪಿಐ ಶಂಕರಗೌಡ ಪಾಟೀಲ, ಮಳಖೇಡ ಪಿಎಸ್‌ಐ ಶ್ರೀಶೈಲ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆರೋಪಿ ವಿರುದ್ಧ ಅಟ್ರಾಸಿಟ್ ಕೇಸ್ ಮತ್ತು ಫೋಕ್ಸೋ ಕಾಯ್ದೆಯಡಿ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close