ರಾಜ್ಯಸಭಾ ನಾಯಕ ಸ್ಥಾನದಿಂದ ಶರದ್ ಯಾದವ್ ವಜಾ

Posted In : ದೇಶ

ದೆಹಲಿ: ಜೆಡಿಯು ಪಕ್ಷದ ರಾಜ್ಯಸಭೆ ನಾಯಕ ಸ್ಥಾನದಿಂದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ಶನಿವಾರ ವಜಾ ಗೊಳಿಸಲಾಗಿದೆ. ಆರ್‌ಜೆಡಿ ಸಖ್ಯ ತೊರೆದು ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಿದ್ದರಿಂದ ಸಿಎಂ ನಿತೀಶ್ ವಿರುದ್ಧ ಶರದ್ ಯಾದವ್ ಮುನಿಸಿಕೊಂಡಿದ್ದರು. ಅಲ್ಲದೇ ಬಹಿರಂಗವಾಗಿ ಟೀಕಿಸಿದ್ದರು.

ಬಳಿಕ ಜೆಡಿಯುನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಶುಕ್ರವಾರ ನಿತೀಶ್, ಶರದ್ ಯಾದವ್ ಇಚ್ಛಿಸಿದರೆ ತಮ್ಮ ದಾರಿ ನೋಡಿಕೊಳ್ಳಬಹುದು. ಯಾವುದೇ ನಿರ್ಧಾರಕ್ಕೂ ಅವರು ಸ್ವತಂತ್ರರು ಎಂದು ಹೇಳುವ ಮೂಲಕ ಕಲಹವನ್ನು ಬಹಿರಂಗಪಡಿಸಿದ್ದರು.

ಪಕ್ಷದ ಹಿತದೃಷ್ಟಿಯಿಂದಲೇ ತಾವು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ. ರಾಜ್ಯಸಭೆ ಜೆಡಿಯು ನಾಯಕ ಸ್ಥಾನದಿಂದ ಶರದ್ ಯಾದವ್ ಅವರನ್ನು ವಜಾ ಮಾಡಲಾಗಿದ್ದು, ಅವರ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

two × 3 =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top