ಶೇರು ಖರೀದಿಯಲ್ಲಿ ಆಸಕ್ತಿ: ಸೆನ್ಸೆಕ್ಸ್ 57 ಅಂಕ ಮುನ್ನಡೆ

Posted In : ದೇಶ

ಮುಂಬೈ: ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೋರಿದ ಆಸಕ್ತಿಯ ಫಲವಾಗಿ ಮುಂಬೈ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬುಧವಾರ 57 ಅಂಕಗಳ ಮುನ್ನಡೆ ದಾಖಲಿಸಿತು.

ಕಳೆದ ನಾಲ್ಕು ದಿನಗಳ ನಿರಂತರ ವಹಿವಾಟಿ ನಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ 496.69 ಅಂಕಗಳ ಮುನ್ನಡೆ ಸಂಪಾದಿಸಿದ್ದು, ಮುನ್ನಡೆ ಕಾಯ್ದು ಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ತಿಳಿಯಲಾಗಿದೆ. ಸೆನ್ಸೆಕ್ಸ್ 74.50 ಅಂಕ ಗಳ ಮುನ್ನಡೆ ಸಾಧಿಸಿ, 32,233.16 ಅಂಕ ಗಳಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.50 ಅಂಕಗಳ ಏರಿಕೆಯೊಂದಿಗೆ 10,110.50 ಅಂಕಗಳಲ್ಲೂ ವ್ಯವಹಾರ ನಿರತವಾಗಿದ್ದವು.

ಬ್ಯಾಂಕ್ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ 73.30 ಹಾಗೂ ನಿಫ್ಟಿ ಐಟಿ 67.10 ಅಂಕಗಳ ಮುನ್ನಡೆ ದಾಖಲಿಸಿರುವುದು ಗಮ ನಾರ್ಹವೆನಿಸಿತು. ನಿಫ್ಟಿ ಆರಂಭಿಕ ವಹಿವಾಟಿನಲ್ಲಿ 29 ಶೇರುಗಳು ಮುನ್ನಡೆ ಸಾಧಿಸಿದರೆ 22 ಶೇರುಗಳು ಹಿನ್ನಡೆಗೆ ಗುರಿಯಾದವು.

Leave a Reply

Your email address will not be published. Required fields are marked *

2 × three =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top