Breaking Newsದೇಶಪ್ರಚಲಿತ
ತರೂರ್ ಸೂಟು-ಬೂಟು ಧರಿಸಿದ ವೇಯ್ಟರ್ರಂತೆ ಕಾಣುತ್ತಾರೆ: ಸ್ವಾಮಿ ವ್ಯಂಗ್ಯ (ವಿಡಿಯೋ)
ದೆಹಲಿ: ತಮ್ಮ ನೇರಾನೇರ ಅಪಾದನೆ ಹಾಗು ವ್ಯಂಗ್ಯಗಳ ಮೂಲಕ ದೇಶದ ದೊಡ್ಡ ರಾಜಕೀಯ ನಾಯಕರ ಕಾಲೆಳೆಯುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಬಾರಿ ಕಾಂಗ್ರೆಸ್ ನಾಯಕ್ ಶಶಿ ತರೂರ್ಗೆ ಅಟಕಾಯಿಸಿಕೊಂಡಿದ್ದಾರೆ!
ಎಲ್ಲವನ್ನೂ ಧರಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಸ್ಲಿಂ ಟೋಪಿಯನ್ನು ಮಾತ್ರ ಧರಿಸುವುದಿಲ್ಲ ಎಂದಿದ್ದ ಶಶಿ ತರೂರ್ಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ.
“ನಿಮ್ಮ ಸೂಟು ಬೂಟು ಸಹ ನಮಗೆ ಹೊಸದೇನಲ್ಲ. ಸೂಟು ಬೂಟಿನಲ್ಲಿರುವ ವೇಯ್ಟರ್ ಥರ ಕಾಣುತ್ತೀರಿ” ಎಂದು ತರೂರ್ರನ್ನು ಸ್ವಾಮಿ ಬಹಿರಂಗವಾಗಿಯೇ ವ್ಯಂಗ್ಯವಾಡಿದ್ದಾರೆ.
#WATCH: Subramanian Swamy reacts on Shashi Tharoor's remark 'why does PM refuse to wear a Muslim skull cap? Have seen him in hilarious Naga head dress&various extraordinary outfits', says 'tumhara suit-boot ajeeb nahi hai hamare liye? Suit-boot pehen ke tum waiter jaise lagte ho' pic.twitter.com/F1CT5B6FyZ
— ANI (@ANI) August 7, 2018
ಸ್ವಾಮಿಗೂ ಮುನ್ನ, ಕೇಂದ್ರ ಸಚಿವ ಕಿರಣ್ ರಿಜಿಜು ಕೂಡಾ ತರೂರ್ ವಿರುದ್ಧ ವಾಗ್ದಾಳಿ ನಡೆಸಿ, “ಕಾಂಗ್ರೆಸ್ ಹಾಗು ತರೂರ್ಜೀ ದಯವಿಟ್ಟು ವಿವರಿಸಿ. ಔಟ್ಲ್ಯಾಂಡಿಷ್ ಹಾಗು ಹಿಲಾರಿಯಸ್ ಹೆಡ್ಗೇರ್ ಎಂಬುದರ ಅರ್ಥವೇನು? ಈಶಾನ್ಯದ ನಾಗಾ ಬುಡಕಟ್ಟು ಜನಾಂಗವನ್ನು ಅವಮಾನಿಸಿ ನೀವು ತಪ್ಪಿಸಿಕೊಳ್ಳಲಾರಿರಿ” ಎಂದು ಹೇಳಿ, ತಮ್ಮ ಹೇಳಿಕೆಗೆ ತರೂರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Congress Party & Shashi Tharoor ji please explain what's the English meaning of outlandish & hilarious headgear?
You can't get away after insulting the Tribal & North East people. https://t.co/8nQ22AyNHA— Kiren Rijiju (@KirenRijiju) August 6, 2018
“ಶಶಿ ತರೂರ್ ಈಶಾನ್ಯದ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನೇ ಅವಮಾನಿಸಿದ್ದಾರೆ. ಜನರೆಡೆಗೆ ದುರಹಂಕಾರ ತೋರುವ ಈ ಪ್ರವೃತ್ತಿ ಕಾಂಗ್ರೆಸ್ನ ಲಕ್ಷಣವಾಗಿದೆ” ಎಂದು ಕೇಂದ್ರದ ಮತ್ತೊಬ್ಬ ಸಚಿವ ರಾಜ್ಯವರ್ಧನ್ ಸಿಂಗ್ ರಾಥೊರ್ ಹೇಳಿದ್ದಾರೆ.
Shashi Tharoor insults the proud cultural heritage of the people of North-East.
This condescension & arrogance towards the people of India have become hallmarks of @INCIndia. pic.twitter.com/vul4SOtpVN
— Rajyavardhan Rathore (@Ra_THORe) August 6, 2018
ತಿರುವನಂತಪುರಂನಲ್ಲಿ ನಡೆಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತರೂರ್, “ನಗು ತರಿಸುವ ರೀತಿಯ ನಾಗಾ ಧಿರಿಸಿನಲ್ಲಿ ಪ್ರಧಾನ ಮಂತ್ರಿಯನ್ನು ನೋಡಿದ್ದೀರಿ. ನಾನಾ ರೀತಿಯ ಪೋಷಾಕಿನಲ್ಲಿ ಮೋದಿಯನ್ನು ನೋಡಿದ್ದೀರಿ. ಆದರೆ ಮುಸ್ಲಿಮರ ಟೋಪಿಯನ್ನಾಗಲೀ ಪ್ರಧಾನಿ ಹಸಿರು ಬಣ್ಣದ ಧಿರಿಸಿನಲ್ಲಿ ಇರುವುದನ್ನು ಕಂಡಿದ್ದೀರಾ?” ಎಂದು ಹೇಳಿದ್ದರು.