About Us Advertise with us Be a Reporter E-Paper

ಅಂಕಣಗಳು

ಆಕೆ ಭಾಷಾಪ್ರೀತಿ ಎತ್ತಿಹಿಡಿದು ಹುಡುಗನ ಪ್ರೀತಿ ಧಿಕ್ಕರಿಸಿದಳು!

ಕೆ ದಿನಗಳ ಹಿಂದೆ, ನಮ್ಮ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮೈಸೂರಿನ ಹುಡುಗ, ಬೆಂಗಳೂರಿನ ಹುಡುಗಿಯನ್ನು ಪ್ರೀತಿಸಿದ್ದಾನೆ. ಎಂಟು ತಿಂಗಳು ಇಬ್ಬರೂ ಹಲವು ಪತ್ರಗಳನ್ನು ಬರೆದುಕೊಂಡಿದ್ದಾರೆ. ದಿನವೂ ತಾಸುಗಟ್ಟಲೇ ಚಾಟ್ ಮಾಡಿದ್ದಾರೆ. ಇಬ್ಬರೂ ಸದ್ಯದಲ್ಲಿಯೇ ಮದುವೆಯಾಗುವುದೆಂದು ತೀರ್ಮಾನಿಸಿದ್ದಾರೆ. ಇಬ್ಬರ ಮದುವೆಗೆ ಎರಡೂ ಕಡೆಯವರು ಒಪ್ಪಿದ್ದಾರೆ. ಅದೊಂದು ಸಹಜ ಪ್ರೇಮ ಪ್ರಕರಣ.

ಮದುವೆಗೆ ಇನ್ನು ಎರಡು ತಿಂಗಳು ಇರುವಾಗ ಅದೇನಾಯಿತೋ ಗೊತ್ತಿಲ್ಲ, ಇಬ್ಬರೂ ಪರಸ್ಪರ ಬೇರೆಯಾಗಿದ್ದಾರೆ. ಇಬ್ಬರ ತಂದೆತಾಯಂದಿರು ಹುಡುಗಹುಡುಗಿಯನ್ನು ಕುಳ್ಳಿರಿಸಿ ಬುದ್ಧಿ ಹೇಳಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಅಂತಿಮವಾಗಿ, ಇಬ್ಬರೂ ದೂರವಾಗಲು, ಪರಸ್ಪರರನ್ನು ಮರೆಯಲು ನಿರ್ಧರಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಿಲಕ್ಷಣ ಪ್ರಸಂಗ, ಇಬ್ಬರ ಮನೆ ತಮ್ಮ ಬಂಧುಬಾಂಧವರಿಗೆ, ಆಪ್ತೇಷ್ಟರಿಗೆ ಪ್ರಸಂಗ ಹೇಳಿದರೆ, ಅವರಿಗೆ ನಂಬಲು ಆಗುತ್ತಿಲ್ಲ. ಎಲ್ಲರಿಂದ ಹೀಗೂ ಉಂಟೇ?’ ಎಂಬ ಉದ್ಗಾರ.

ಅವರಿಬ್ಬರ ಪ್ರೀತಿ ಬ್ರೇಕ್ ಆಗಲು ಮುಖ್ಯ ಕಾರಣ, ಭಾಷೆ. ಅಂದರೆ ಅವಳದೇ ಬೇರೆ ಭಾಷೆ ಹಾಗೂ ಇವನದೇ ಬೇರೆ ಭಾಷೆ ಎಂದಲ್ಲ. ಇಬ್ಬರದೂ ಒಂದೇ ಭಾಷೆ. ಇಬ್ಬರದೂ ಮನೆ ಮಾತು ಕನ್ನಡವೇ. ಇಬ್ಬರೂ ಕನ್ನಡಇಂಗ್ಲಿಷ್ ಮೀಡಿಯಮ್‌ದಲ್ಲಿ ಓದಿದವರು. ಆದರೂ ಸಮಸ್ಯೆನಾ?

ಹೌದು, ಹುಡುಗಿ ವಿಪರೀತ ಎನ್ನುವಷ್ಟು ಭಾಷಾ ಮಡಿವಂತೆ. ಭಾಷಾ ಶುದ್ಧತೆಯಲ್ಲಿ ಅಪರಿಮಿತ ವಿಶ್ವಾಸ. ಆಡುವ, ಬರೆಯುವ ಭಾಷೆ ಕರಾರುವಕ್ಕಾಗಿ ಇರಬೇಕು ಎಂದು ನಂಬಿದವಳು. ಒಂದು ತಪ್ಪು ಪದ ಪ್ರಯೋಗ, ತಪ್ಪು ವಾಕ್ಯರಚನೆಯನ್ನೂ ಸಹಿಸುವವಳಲ್ಲ. ಅಲ್ಲಿಯೇ ಸರಿಪಡಿಸುವ ಖಯಾಲಿ.

ಹುಡುಗ ಬರೆದ ಪ್ರೇಮ ಪತ್ರದಲ್ಲಿ ಹತ್ತಾರು ಭಾಷಾ ದೋಷಗಳನ್ನು ಗುರುತು ಮಾಡಿ ವಾಪಸ್ ಅವರಿಗೆ ಕಳಿಸುತ್ತಿದ್ದಳು. ಪ್ರತಿ ತಪ್ಪಿಗೂ ಅಡಿ ಟಿಪ್ಪಣಿ, ಷರಾ ಬೇರೆ. ಚಾಟ್ ಮಾಡುವಾಗಲೂ, ಹುಡುಗನ ಪ್ರತಿ ವಾಕ್ಯದಲ್ಲೂ ತಪ್ಪುಗಳನ್ನು ಹುಡುಕಿ ಹುಡುಕಿ ಅವನಿಗೆ ಕಳಿಸುತ್ತಿದ್ದಳು. ನಡುವೆ ನಡೆಯುತ್ತಿದ್ದುದು ಪ್ರೇಮ ಸಲ್ಲಾಪಕ್ಕಿಂತ ಹೆಚ್ಚಾಗಿ ಭಾಷಾ ಯೋಗದ ತಪ್ಪುಸರಿಯೇ.

ಆರಂಭದಲ್ಲಿ ಇದು ಚೆನ್ನಾಗಿಯೇ ಇತ್ತು. ಆನಂತರ ಆಕೆ ಹೆಜ್ಜೆ ಹೆಜ್ಜೆಗೆ, ವಾಕ್ಯದಿಂದ ವಾಕ್ಯಕ್ಕೆ ತಪ್ಪುಗಳನ್ನೇ ಹುಡುಕಲಾರಂಭಿಸಿದಾಗ, ಅವನಿಗೆ ವಿಪರೀತ ಕಿರಿಕಿರಿಯಾಗಲಾರಂಭಿಸಿತು. ಬಗ್ಗೆ ಆತ ಅವಳ ಮುಂದೆ ತನ್ನ ಅಸಹನೆ, ನೋವನ್ನು ತೋಡಿಕೊಂಡ. ತನಗಾಗುತ್ತಿರುವ ಮುಜುಗರವನ್ನು ಹೇಳಿದ. ಭಾಷಾ ಪ್ರೇಮದ ಬದಲು, ಪ್ರೇಮದ ಭಾಷೆಯಲ್ಲಿ ಮಾತಾಡುವಂತೆ ಪರಿಪರಿಯಾಗಿ ಕೇಳಿಕೊಂಡ. ‘ಪ್ರತಿ ಚಾಟ್‌ನ ವಾಕ್ಯದಲ್ಲಿನ ಭಾವನೆಯನ್ನ ಗ್ರಹಿಸು, ಭಾಷೆಯ ಅಲ್ಲಎಂಬುದನ್ನು ಸಾರಿಸಾರಿ ಹೇಳಿದ. ವಾಕ್ಯದಲ್ಲಿರುವ ತಪ್ಪುಗಳನ್ನೂ ಆಕೆ ಪಟ್ಟಿ ಮಾಡಿ ಕಳುಹಿಸಲಾರಂಭಿಸಿದಳು. ಪದ ಸರಿ ಅಲ್ಲ, ಪ್ರಯೋಗ ತಪ್ಪು, ಪದ ಬಳಕೆ ಸಮಂಜಸ ಅಲ್ಲ, ವ್ಯಾಕರಣ ಸರಿ ಇಲ್ಲ, ಪದವನ್ನು ಹೀಗೆ ಬಳಸಿದರೆ ಅರ್ಥ ಬರುತ್ತದೆ ಎಂದೆಲ್ಲ ಅವಳು ವಾದಿಸುತ್ತಿದ್ದಳು. ಇಬ್ಬರ ನಡುವೆ ವಿಷಯಕ್ಕೆ ಜಗಳವಾಗಲಾರಂಭಿಸಿತು. ಜಗಳದಲ್ಲೂ ಆಕೆ ಭಾಷಾ ಶುದ್ಧತೆಎತ್ತಿ ಹಿಡಿಯುತ್ತಿದ್ದಳು. ಇದು ನುಂಗಲಾರದ ತುತ್ತಾಗಿ ಪರಿಣಮಿಸಿತು.

ತಾನು ವರಿಸಲಿರುವ ಹುಡುಗಿ ತನ್ನನ್ನು ಇಷ್ಟಪಡುತ್ತಾಳೋ ಅಥವಾ ತನ್ನ ಭಾಷೆಯನ್ನೋ, ವ್ಯಾಕರಣ ಜ್ಞಾನವನ್ನೋ ಎಂಬ ಅನುಮಾನ ಅವನನ್ನು ಕಾಡಲಾರಂಭಿಸಿತು. ಅಲ್ಲದೇ, ತಾನು ಪ್ರೀತಿಸಿ, ಮದುವೆಯಾಗಲಿರುವವಳು ಲಿಂಗೋಲೀಲಾಎಂಬುದು ಅವನಿಗೆ ಖಾತ್ರಿಯಾಯಿತು.

ಮದುವೆಯಾದ ನಂತರ, ಇಡೀ ಮನೆ ಭಾಷಾಕ್ಲಾಸ್ ಆದರೆ ನನ್ನ ಗತಿಯೇನು ಎಂದು ಅವನಿಗೆ ಅನಿಸಲಾರಂಭಿಸಿತು. ಆತ ಅವಳ ಸ್ವಭಾವ, ಪ್ರವೃತ್ತಿಗೆ ಮುಖಕ್ಕೆ ಹೊಡೆದಂತೆ ವಿರೋಧ ವ್ಯಕ್ತಪಡಿಸಿದ. ಆಕೆ ಅಲ್ಲೂ ಅವನ ಭಾಷಾ ಹುಡುಕುತ್ತಿದ್ದಳು. ಒಂದು ದಿನ ಆತ Will arrive, I will call you ಎಂಬ ವಾಟ್ಸಪ್ ಸಂದೇಶ ಕಳುಹಿಸಿದ್ದ. ಅದಕ್ಕೆ ಆಕೆ ವಾಕ್ಯ ತಪ್ಪು, When I arrive, I will call you  ಎಂಬುದು ಸರಿ ಎಂದು ಬರೆದಳು. ಆತನಿಗೆ ಪಿತ್ತ ನೆತ್ತಿಗೇರಿತು. I didnot meet nobody  ಎಂದು ಬರೆದರೆ, , I didn’t meet anybody   ಎಂದು ಬರೆಯುತ್ತಿದ್ದಳು. . I promise I call you tomorrow  ಎಂದು ಆತ ಬರೆದರೆ, I promise I will call you tomorrow  ಎಂದು ತಿದ್ದುತ್ತಿದ್ದಳು. ಆತನಿಗೆ ಅವಳ ಜತೆ ವ್ಯವಹರಿಸುವ, ಒಡನಾಡುವ ಆತ್ಮವಿಶ್ವಾಸವೇ ಹೊರಟುಹೋಯಿತು. ಹಾಗೆಂದು ಆಕೆ ಅವನನ್ನು ಹಂಗಿಸುತ್ತಿರಲಿಲ್ಲ. ಆತನಿಗೆ ಸರಿಯಾದ ಭಾಷೆ ಗೊತ್ತಿಲ್ಲವೆಂದು ಅಣಕಿಸುತ್ತಿರಲಿಲ್ಲ ಶುದ್ಧಿಯ ಉತ್ಕೃಷ್ಟತೆಯ ಗೀಳು ಅವಳನ್ನು ಆಳುತ್ತಿತ್ತು. ಬೇರೆ ಯಾರಾದರೂ ಅವಳ ಭಾಷೆಯಲ್ಲಿನ ತಪ್ಪುಗಳನ್ನು ಹುಡುಕಿದರೂ, ಮುಕ್ತವಾಗಿ ಸ್ವೀಕರಿಸುತ್ತಿದ್ದಳು. ಆದರೆ ವಾದ ಮಾಡದೇ, ಪ್ರಶ್ನಿಸದೇ ಸುಲಭಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ಇದು ವ್ಯಸನವಾಗುವಷ್ಟು ವಿಪರೀತವಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ.

ಅವಳು ಯಾವುದೋ ಕಾಯಿಲೆಯಿಂದ ನರಳುತ್ತಿರಬೇಕು ಎಂದು ಆತ ಅನುಮಾನಪಡಲಾರಂಭಿಸಿದ. ಅವಳ ಅತಿಯಾದ ಭಾಷಾ ಪರಿಶುದ್ಧತೆ ಅವನಿಗೆ ಹಿಂಸೆಯಾಗುತ್ತಿತ್ತು. ಇದನ್ನು ಅವಳ ಹತ್ತಿರ ಚರ್ಚಿಸಿದ. ಪ್ರಯೋಜನ ಆಗಲಿಲ್ಲ. ಹಿರಿಯರಿಂದ ಬುದ್ಧಿ ಮಾತು ಹೇಳಿಸಿದ. ಅದೂ ಪ್ರಯೋಜನ ಆಗಲಿಲ್ಲ. ಹಾಗಂತ ಅವಳು ಲಕ್ಷಣವಂತೆ, ಬುದ್ಧಿವಂತೆ. ಅವಳ ಬಗ್ಗೆ ಅವನಿಗೆ ಅಗಾಧ ಪ್ರೀತಿಯಿತ್ತು. ಆದರೆ ಆತನಿಗೆ ಅವಳ ಭಾಷಾಪ್ರೇಮ ಕೀಳರಿಮೆಯಾಗಿ ಕಾಡಲಾರಂಭಿಸಿತು. ಇದು ಅವಳನ್ನೇ ತಿರಸ್ಕರಿಸುವಂತೆ, ದ್ವೇಷಿಸುವಂತೆ ಕೊನೆಗೆ ಅವರು ಪ್ರತ್ಯೇಕವಾದರು.

ಸುದ್ದಿಯನ್ನು ನನಗೆ ಓದಿ ವಿಷಾದವಾಯಿತು, ಆದರೆ ಆಶ್ಚರ್ಯವಾಗಲಿಲ್ಲ. ಒಂದು ಪ್ರೇಮ ಪ್ರಕರಣ ರೀತಿ ಕೊನೆಗಾಣಬಾರದಿತ್ತು ಎಂದು ಬೇಸರವಾಯಿತು. ಆದರೆ ಸೋಜಿಗವೆನಿಸಲಿಲ್ಲ. ಭಾಷೆಯ ಬಗ್ಗೆ ಮಿಲಿಟರಿ ಅಧಿಕಾರಿಗಳಂತೆ, ಶತ ಕರ್ಮಠರಂತೆ ವರ್ತಿಸುವವರನ್ನು ನಾನು ನೋಡಿದ್ದೇನೆ. ರೀತಿಯ ಲಿಂಗೋಲೀಲಾಹಾಗೂ ಲಿಂಗೋಲಾಚಾರ್ಯ ಕೈಯಲ್ಲಿ ನಾನೂ ನರಳಿದ್ದೇನೆ. ‘ಕಾರ, ‘ಕಾರ ಸರಿಯಾಗಿ ಉಚ್ಚರಿಸದವರಿಗೆ ಛಡಿಯೇಟು ಕೊಟ್ಟವರನ್ನು ನೋಡಿದ್ದೇನೆ.

ನಾನು ಏಶಿಯನ್ ಕಾಲೇಜ್ ಆಫ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುವಾಗ ನನಗೊಬ್ಬ ಬಾಸ್ ಇದ್ದರು. ಅವರು ಕಾಲೇಜಿನ ಡೀನ್ ಆಗಿದ್ದರು. ಅವರ ಹೆಸರು ಜ್ಯೋತಿ ಸನ್ಯಾಲ್ (ಬಂಗಾಳಿ ಮತ್ತು ಗಂಡಸು). ಮನುಷ್ಯ ದಿ ಸ್ಟೇಟ್ಸ್ ಮನ್ಪತ್ರಿಕೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದವರು.

ಒಂದು ಸಣ್ಣ ಪುಟ್ಟ ತಪ್ಪನ್ನು ಕೂಡ ಸಹಿಸದವರು. ಅವರನ್ನು ಕಂಡರೆ ಯಾರಿಗೂ ಆಗುತ್ತಿರಲಿಲ್ಲ. ಅಲ್ಪ ವಿರಾಮ, ಪೂರ್ಣ ವಿರಾಮ ಚಿಹ್ನೆ ಸರಿಯಾದ ಇಡದಿದ್ದರೆ ರೇಗುತ್ತಿದ್ದರು. ಪತ್ರಿಕಾಲಯದಲ್ಲಿ ಅವರನ್ನು ಆಧುನಿಕ ಶೇಕ್ಸಪಿಯರ್ ಎಂದು ಎಲ್ಲರೂ ಗೇಲಿ ಮಾಡುತ್ತಿದ್ದರು. ಜ್ಯೋತಿ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಅವರಿಗೆ ಭಾಷಾ ಶುದ್ಧಿಗಿಂತ ಬೇರೆ ಶುದ್ಧಿ ಇದೆಯೆಂಬುದನ್ನು ಅವರು ಒಪ್ಪುತ್ತಿರಲಿಲ್ಲ. ಭಾಷೆಯ ವಿಷಯದಲ್ಲಿ ಮಹಾ ಜಿಗುಟ. ಯಾರಾದರೂ ಮಾತಾಡುವಾಗ ತಪ್ಪು ವ್ಯಾಕರಣ ಪ್ರಯೋಗ ಮಾಡಿದರೆ, ಅದನ್ನು ಅಲ್ಲಿಯೇ ತಿದ್ದುತ್ತಿದ್ದರು. ಇದರಿಂದ ಬೇರೆಯವರಿಗೆ ಮುಜುಗರವಾಗಬಹುದು, ಕಿರಿಕಿರಿಯಾಗಬಹುದು ಎಂಬುದನ್ನು ಸಹ ಲೆಕ್ಕಿಸುತ್ತಿರಲಿಲ್ಲ. ಭಾಷೆಯ ವಿಷಯದಲ್ಲಿ ಅವರು ಯಾವುದೇ ರಾಜಿಗೂ ಸಿದ್ಧರಿರಲಿಲ್ಲ.

ಏಶಿಯನ್ ಕಾಲೇಜಿಗೆ ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿಗಳನ್ನು ಅತಿಥಿ ಉಪನ್ಯಾಸಕ್ಕೆ ಆಹ್ವಾನಿಸಲಾಗಿತ್ತು. ನ್ಯಾಯಮೂರ್ತಿಗಳು ಪಾಠ ಮುಗಿಸಿ ಬಂದು ಜ್ಯೋತಿ ಸನ್ಯಾಲ್ ಅವರ ಜತೆಗೆ ಲೋಕಾಭಿರಾಮ ಮಾತನಾಡುತ್ತಿದ್ದರು. ನ್ಯಾಯಮೂರ್ತಿಗಳು ತಮ್ಮ ಮಾತಿನ ಮಧ್ಯೆ one of my friend ಎಂದು ಹೇಳಿದರು. ಅದಾದ ಬಳಿಕ ಮತ್ತೊಂದು ಸಂದರ್ಭದಲ್ಲಿ one of my book  ಎಂದು ಹೇಳಿದರು. ಜ್ಯೋತಿ ಸನ್ಯಾಲ್ ಅವರಿಗೆ ಏನನಿಸಿತೋ ಏನೋ, ‘ಜಸ್ಟೀಸ್, ನೀವೇ ಥರ ಕ್ಷುಲ್ಲಕ ಮಾಡಿದರೆ ಹೇಗೆ ? one of my friend  ಎಂದು ಹೇಳಬಾರದು, ಅದು ತಪ್ಪು.one of my friends  ಎಂದು ಹೇಳಬೇಕು. ಹಲವು ಸ್ನೇಹಿತರ ಪೈಕಿ ಒಬ್ಬರು ಎಂದರ್ಥ. one of ಎಂಬ ಪ್ರಯೋಗ ಮಾಡಿದಾಗ ಮುಂದಿನ ಪದ ಬಹುವಚನದಲ್ಲಿರಬೇಕುಎಂದು ಸಣ್ಣ ಲೆಕ್ಚರ್ ಕೊಟ್ಟರು.

ಜಡ್‌ಜ್ ಸಾಹೇಬರು ಏನೆಂದುಕೊಳ್ಳಬಹುದು ಎಂಬುದನ್ನೂ ಜ್ಯೋತಿ ಲೆಕ್ಕಿಸಲಿಲ್ಲ. ನ್ಯಾಯಮೂರ್ತಿಗಳ ಮುಖ ಹಳ್ಳಹುಳ್ಳಗಾಗಿತ್ತು. ಪ್ರಾಯಶಃ ಅವರಿಗೆ ಯಾರೂ ರೀತಿ ಪಾಠ ಬೇರೆಯವರಾಗಿದ್ದರೆ ನ್ಯಾಯಮೂರ್ತಿಗಳ ಜತೆ ಯಾಕೆ ವಾದವಿವಾದ ಎಂದು ಯೋಚಿಸುತ್ತಿದ್ದರು. ನ್ಯಾಯಮೂರ್ತಿಗಳ ಭಾಷೆ ಬಗ್ಗೆ ಯಾಕೆ ತೀರ್ಪು ಕೊಡಬೇಕೆಂದು ಸುಮ್ಮನಾಗುತ್ತಿದ್ದರು. ಒಂದು ವೇಳೆ ನ್ಯಾಯಮೂರ್ತಿ ಬದಲು ಮುಖ್ಯಮಂತ್ರಿ ಅಥವಾ ರಾಷ್ಟ್ರಪತಿ ತಪ್ಪು ಮಾಡಿದ್ದರೂ ಜ್ಯೋತಿ ತಪ್ಪನ್ನು ತಿದ್ದದೇ ಬಿಡುತ್ತಿರಲಿಲ್ಲ.

ತನ್ನ ಸ್ವಭಾವದ ಬಗ್ಗೆ ಬೇರೆಯವರು ಏನು ತಿಳಿಯುತ್ತಾರೋ, ತನ್ನ ಪಾಠದಿಂದ ಇತರರಿಗೆ ಮುಜುಗರವಾಗಬಹುದು ಎಂಬುದನ್ನೂ ಅವರನ್ನು ಪರಿಗಣಿಸುತ್ತಿರಲಿಲ್ಲ. ಭಾಷಾ ಶುದ್ಧಿ ಮುಂದೆ ಬೇರೆಲ್ಲವೂ ಅವರಿಗೆ ಗೌಣವಾಗಿತ್ತು. ಯಾರಾದರೂ ಜಗಳಕ್ಕೆ ನಿಂತರೆ ಅವರು ಅದಕ್ಕೂ ಸಿದ್ಧ. ಭಾಷೆಗಾಗಿ ಅಷ್ಟೂ ಮಾಡದಿದ್ದರೆ ಹೇಗೆ?

ಒಮ್ಮೆ ಗಣ್ಯರೊಬ್ಬರು ಜ್ಯೋತಿ ಸನ್ಯಾಲ್ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದರು. ಆಮಂತ್ರಣ ಪತ್ರ ನೀಡಿದರು. ಜ್ಯೋತಿ ಅದನ್ನು ಮೇಲಿನಿಂದ ಕೆಳಕ್ಕೆ ಎರಡು ಸಲ ಓದಿ, ಅವರ ಮುಂದೆಯೇ ಎಡಿಟ್ ಮಾಡಲಾರಂಭಿಸಿದರು. ಕನಿಷ್ಠ ಅದರಲ್ಲಿ ಆರೇಳು ತಪ್ಪುಗಳಿದ್ದವು. ನೋಡಿ, ಇಷ್ಟು ತಪ್ಪುಗಳಿರುವ ಆಮಂತ್ರಣ ಪತ್ರ ನೀಡಿದರೆ, ನಿಮ್ಮ ಬಗ್ಗೆ ಎಂಥ ಭಾವನೆ ಮೂಡಬಹುದು ? ಭಾಷೆ ಅಂದರೆ ನೀರು, ಪರಿಸರದಷ್ಟೇ ಪವಿತ್ರ. ಪರಿಸರವನ್ನು ಕಾಪಾಡಿದಂತೆ ಭಾಷೆಯನ್ನೂ ಕಾಪಾಡಬೇಕು. ಮಾಲಿನ್ಯ ಕೇವಲ ಪರಿಸರಕ್ಕಷ್ಟೇ ಅಲ್ಲ, ಭಾಷೆಗೂ ಅನ್ವಯವಾಗುತ್ತದೆಎಂದು ಅವರ ಮುಖಕ್ಕೆ ಹೊಡೆಯುವಂತೆ ಹೇಳಿದ್ದರು.

ಜ್ಯೋತಿ ಸನ್ಯಾಲ್ ಪ್ರಧಾನಿಯಾಗಿದ್ದರೆ, ಸ್ವಚ್ಛ್ ಭಾರತಬದಲು ಸ್ವಚ್ಛ್ ಭಾಷಾಯೋಜನೆ ಘೋಷಿಸುತ್ತಿದ್ದರೇನೋ ? ಅವರು ಒಬ್ಬ ವ್ಯಕ್ತಿಯನ್ನು ಅಳೆಯುತ್ತಿದ್ದುದೇ ಅವರು ಉಪಯೋಗಿಸುವ ಭಾಷೆಯಿಂದಾಗಿತ್ತು. ಯಾರಾದರೂ ಕೆಟ್ಟ ಇಂಗ್ಲಿಷ್ ಬಳಸಿದರೆ, ಅವರ ವ್ಯಕ್ತಿತ್ವವೂ ಕೆಟ್ಟದ್ದು ಎಂದೇ ಅವರು ಭಾವಿಸುತ್ತಿದ್ದರು. ನನಗೆ ಅವರ ಭಾಷಾ ಬಹಳ ಇಷ್ಟವಾಗುತ್ತಿತ್ತು. ಆದರೆ ಕೆಟ್ಟ ಭಾಷೆ ಪ್ರಯೋಗಿಸುವವರು ಕೆಟ್ಟವರು ಎಂಬುದನ್ನು ನಾನು ಒಪ್ಪುತ್ತಿರಲಿಲ್ಲ. ವಿಷಯದ ಬಗ್ಗೆ ನನಗೆ ಅವರಿಗೆ ಆಗಾಗ ವಾದವಾಗುತ್ತಿತ್ತು. ಆದರೆ ಮನುಷ್ಯ ಜನ್ಮದಲ್ಲಿ ಬದಲಾಗುವುದಿಲ್ಲ ಎಂಬುದು ಖಾತ್ರಿಯಾದ ನಂತರ ನಾನು ಕೈಚೆಲ್ಲಿದೆ.

ಅವರನ್ನು ಬದಲು ಮಾಡಲು ಮಾಡುವುದಿರಲಿ, ನಿಧಾನವಾಗಿ ನಾನೂ ಅವರಂತೆ ಯೋಚಿಸಲಾರಂಭಿಸಿದ್ದೆ. ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೂ, ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅಂದಿನ ಪತ್ರಿಕೆಯಲ್ಲಾದ ದೋಷಗಳ ಪಟ್ಟಿಯನ್ನು ಕನ್ನಡ ಪ್ರಭ ಅಂದಿನ ಸಂಪಾದಕರಾದ ಅವರಿಗೆ ಕೊಡುತ್ತಿದ್ದೆ. ಅದು ಚಟವಾಗಿ ಪರಿಣಮಿಸಿತು.

ಪ್ರೂಫ್ ರೀರ್ಡ ಗಳಿಗೆ ಒಂದು ಬರಹದ ಲಾಲಿತ್ಯ ಸವಿಯಲು ಆಗುವುದೇ ಇಲ್ಲ. ಅವರ ಕಣ್ಣುಗಳು ಬರೀ ಕರಡು ದೋಷಗಳನ್ನೇ ಹುಡುಕುತ್ತಿರುತ್ತವೆ. ನಾನೂ ಅದೇ ರೀತಿ ಎಡಿಟ್ ಮಾಡುತ್ತಾ, ಪ್ರೂಫ್ ರೀಡ್ ಮಾಡುತ್ತಾ ಓದಲಾರಂಭಿಸಿದೆ. ಬರಹದ ಸೊಗಡಿನ ಅನುಭವವನ್ನು ಸವಿಯುವುದಕ್ಕಿಂತ ಭಾಷಾ ಶುದ್ಧಿ ಹಿಂದೆ ಮನಸ್ಸು ಓಡುತ್ತಿತ್ತು. ನಾನೂ ಜ್ಯೋತಿ ಸನ್ಯಾಲ್ ಆಗುತ್ತಿದ್ದೇನೆ ಎಂದು ಅನೇಕ ಸಲ ನನಗೆ ಅನಿಸಿದ್ದುಂಟು. ದಾರಿಯಲ್ಲಿ ಹೋಗುವಾಗ, ಫಲಕಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೂ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಜ್ಯೋತಿ ನನ್ನನ್ನು ಆವರಿಸಿಕೊಂಡಿದ್ದರು. ನಾನು ಇದೇ ಸ್ಪೂರ್ತಿಯಿಂದ ಸರಿಗಮಪದ : ಪದ ಬಳಕೆಗೊಂದು ಹದ ಎಂಬ ಪುಸ್ತಕವನ್ನು ಬರೆದೆ.

ಅಷ್ಟಕ್ಕೂ ಪುಸ್ತಕದ ಹಿಂದಿನ ಮನಸ್ಸು ಮತ್ತು ಪ್ರೇರಣೆ ಜ್ಯೋತಿ ಸನ್ಯಾಲ್ ಅವರೇ ಆಗಿದ್ದರು. ಜ್ಯೋತಿ ಅಂದು ಹೊತ್ತಿಸಿದ ಕಿಡಿ ಇಂದಿಗೂ ನನ್ನಲ್ಲಿ ಅದು ದೀಪವಾಗಿ ಉರಿಯುತ್ತಿದೆ. ಯಾರಾದರೂ ಭಾಷೆಯನ್ನು ವಿರೂಪಗೊಳಿಸಿದರೆ, ಕೆಡಿಸಿದರೆ, ತಪ್ಪು ತಪ್ಪಾಗಿ ಅಸಮರ್ಪಕ ಪ್ರಯೋಗ ಮಾಡಿದರೆ ದೀಪ ಸುಡಬಹುದೇನೋ ಎಂದೆನಿಸುತ್ತದೆ.

ಈಗಲೂ ನನ್ನನ್ನು ಜ್ಯೋತಿ ಆರದಂತೆ ಜಾಗೃತವಾಗಿಟ್ಟಿದೆ ಎಂದೆನಿಸುತ್ತದೆ.

ಭಾಷಾ ವ್ಯಸನವೆಂಬುದು ವಾಸಿಯಾಗದ ಕಾಯಿಲೆಯಿದ್ದಂತೆ. ಅದು ನೀಡುವ ನೋವಿನ ಆನಂದವೇ ಆನಂದ. ನನಗೆ ಬೆಂಗಳೂರು ಹುಡುಗಿ ಪ್ರೀತಿಯ ಬದಲು ಭಾಷಾ ಪ್ರೀತಿಯನ್ನು ಎತ್ತಿ ಹಿಡಿದು, ಮದುವೆಯನ್ನು ಧಿಕ್ಕರಿಸಿದ್ದು ಅಮರ ಪ್ರೇಮದ ಪರಾಕಾಷ್ಠೆಯಂತೆ ಕಾಣುತ್ತದೆ. ಅದು ಭಾಷೆ ಎಂಬ ಕರುಳಬಳ್ಳಿ ನಮ್ಮೊಳಗೇ ಮಲ್ಲಿಗೆಯಾಗುವ ಪರಿ !

ಒಮ್ಮೆ ಗಣ್ಯರೊಬ್ಬರು ಸನ್ಯಾಲ್ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದರು. ಆಮಂತ್ರಣ ಪತ್ರ ನೀಡಿದರು. ಜ್ಯೋತಿ ಅದನ್ನು ಮೇಲಿನಿಂದ ಕೆಳಕ್ಕೆ ಎರಡು ಸಲ ಓದಿ, ಅವರ ಮುಂದೆಯೇ ಎಡಿಟ್ ಮಾಡಲಾರಂಭಿಸಿದರು. ಕನಿಷ್ಠ ಅದರಲ್ಲಿ ಆರೇಳು ತಪ್ಪುಗಳಿದ್ದವು. ‘ನೋಡಿ, ಇಷ್ಟು ತಪ್ಪುಗಳಿರುವ ಆಮಂತ್ರಣ ಪತ್ರ ನೀಡಿದರೆ, ನಿಮ್ಮ ಬಗ್ಗೆ ಎಂಥ ಭಾವನೆ ಮೂಡಬಹುದು? ಭಾಷೆ ಅಂದರೆ ನೀರು, ಗಾಳಿ, ಪರಿಸರದಷ್ಟೇ ಪವಿತ್ರ. ಪರಿಸರವನ್ನು ಕಾಪಾಡಿದಂತೆ ಭಾಷೆಯನ್ನೂ ಕಾಪಾಡಬೇಕು. ಮಾಲಿನ್ಯ ಕೇವಲ ಪರಿಸರಕ್ಕಷ್ಟೇ ಅಲ್ಲ, ಭಾಷೆಗೂ ಅನ್ವಯವಾಗುತ್ತದೆಅವರ ಮುಖಕ್ಕೆ ಹೊಡೆಯುವಂತೆ ಹೇಳಿದ್ದರು.

ಜ್ಯೋತಿ ಸನ್ಯಾಲ್ ಪ್ರಧಾನಿಯಾಗಿದ್ದರೆ, ‘ಸ್ವಚ್‌ಛ್ ಭಾರತಬದಲು ಸ್ವಚ್‌ಛ್ ಭಾಷಾಯೋಜನೆ ಘೋಷಿಸುತ್ತಿದ್ದರೇನೋ? ಅವರು ಒಬ್ಬ ವ್ಯಕ್ತಿಯನ್ನು ಅಳೆಯುತ್ತಿದ್ದುದೇ ಅವರು ಉಪಯೋಗಿಸುವ ಭಾಷೆಯಿಂದಾಗಿತ್ತು. ಯಾರಾದರೂ ಕೆಟ್ಟ ಇಂಗ್ಲಿಷ್ ಬಳಸಿದರೆ, ಅವರ ವ್ಯಕ್ತಿತ್ವವೂ ಕೆಟ್ಟದ್ದು ಎಂದೇ ಅವರು ಭಾವಿಸುತ್ತಿದ್ದರು. ನನಗೆ ಅವರ ಭಾಷಾ ಪ್ರೇಮ ಬಹಳ ಇಷ್ಟವಾಗುತ್ತಿತ್ತು. ಆದರೆ ಕೆಟ್ಟ ಭಾಷೆ ಪ್ರಯೋಗಿಸುವವರು ಕೆಟ್ಟವರು ಎಂಬುದನ್ನು ನಾನು ಒಪ್ಪುತ್ತಿರಲಿಲ್ಲ. ವಿಷಯದ ಬಗ್ಗೆ ಅವರಿಗೆ ಆಗಾಗ ವಾದವಾಗುತ್ತಿತ್ತು. ಆದರೆ ಮನುಷ್ಯ ಜನ್ಮದಲ್ಲಿ ಬದಲಾಗುವುದಿಲ್ಲ ಎಂಬುದು ಖಾತ್ರಿಯಾದ ನಂತರ ನಾನು ಕೈಚೆಲ್ಲಿದೆ.

ಅವರನ್ನು ಬದಲು ಮಾಡಲು ಮಾಡುವುದಿರಲಿ, ನಿಧಾನವಾಗಿ ನಾನೂ ಅವರಂತೆ ಯೋಚಿಸಲಾರಂಭಿಸಿದ್ದೆ. ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೂ, ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅಂದಿನ ಪತ್ರಿಕೆಯಲ್ಲಾದ ದೋಷಗಳ ಪಟ್ಟಿಯನ್ನು ಕನ್ನಡ ಪ್ರಭ ಅಂದಿನ ಸಂಪಾದಕರಾದ ವೈಎನ್ಕೆ ಅವರಿಗೆ ಕೊಡುತ್ತಿದ್ದೆ. ಅದು ಚಟವಾಗಿ ಪರಿಣಮಿಸಿತು.

ಪ್ರೂಫ್ ರೀಡರ್ ಗಳಿಗೆ ಒಂದು ಬರಹದ ಲಾಲಿತ್ಯ ಸವಿಯಲು ಆಗುವುದೇ ಅವರ ಕಣ್ಣುಗಳು ಬರೀ ಕರಡು ದೋಷಗಳನ್ನೇ ಹುಡುಕುತ್ತಿರುತ್ತವೆ. ನಾನೂ ಅದೇ ರೀತಿ ಎಡಿಟ್ ಮಾಡುತ್ತಾ, ಪ್ರೂಫ್ ರೀಡ್ ಮಾಡುತ್ತಾ ಓದಲಾರಂಭಿಸಿದೆ. ಬರಹದ ಸೊಗಡಿನ ಅನುಭವವನ್ನು ಸವಿಯುವುದಕ್ಕಿಂತ ಭಾಷಾ ಶುದ್ಧಿ ಹಿಂದೆ ಮನಸ್ಸು ಓಡುತ್ತಿತ್ತು. ನಾನೂ ಜ್ಯೋತಿ ಸನ್ಯಾಲ್ ಆಗುತ್ತಿದ್ದೇನೆ ಎಂದು ಅನೇಕ ಸಲ ನನಗೆ ಅನಿಸಿದ್ದುಂಟು. ದಾರಿಯಲ್ಲಿ ಹೋಗುವಾಗ, ಬರುವಾಗ ಫಲಕಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೂ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಜ್ಯೋತಿ ನನ್ನನ್ನು ಆವರಿಸಿಕೊಂಡಿದ್ದರು. ನಾನು ಇದೇ ಸ್ಫೂರ್ತಿಯಿಂದ ಸರಿಗಮಪದ : ಪದ ಬಳಕೆಗೊಂದು ಹದಎಂಬ ಪುಸ್ತಕವನ್ನು ಬರೆದೆ.

ಅಷ್ಟಕ್ಕೂ ಪುಸ್ತಕದ ಹಿಂದಿನ ಮನಸ್ಸು ಮತ್ತು ಪ್ರೇರಣೆ ಜ್ಯೋತಿ ಸನ್ಯಾಲ್ ಅವರೇ ಆಗಿದ್ದರು. ಜ್ಯೋತಿ ಅಂದು ಹೊತ್ತಿಸಿದ ಕಿಡಿ ಇಂದಿಗೂ ನನ್ನಲ್ಲಿ ದೀಪವಾಗಿ ಉರಿಯುತ್ತಿದೆ. ಯಾರಾದರೂ ಭಾಷೆಯನ್ನು ವಿರೂಪಗೊಳಿಸಿದರೆ, ಕೆಡಿಸಿದರೆ, ತಪ್ಪು ತಪ್ಪಾಗಿ ಬಳಸಿದರೆ, ಅಸಮರ್ಪಕ ಪ್ರಯೋಗ ಮಾಡಿದರೆ ದೀಪ ಸುಡಬಹುದೇನೋ ಎಂದೆನಿಸುತ್ತದೆ. ಈಗಲೂ ನನ್ನನ್ನು ಜ್ಯೋತಿ ಆರದಂತೆ ಜಾಗೃತವಾಗಿಟ್ಟಿದೆ ಎಂದೆನಿಸುತ್ತದೆ.

ಭಾಷಾ ವ್ಯಸನವೆಂಬುದು ವಾಸಿಯಾಗದ ಕಾಯಿಲೆಯಿದ್ದಂತೆ. ಅದು ನೀಡುವ ನೋವಿನ ಆನಂದವೇ ಆನಂದ. ನನಗೆ ಬೆಂಗಳೂರು ಹುಡುಗಿ ಪ್ರೀತಿಯ ಬದಲು ಭಾಷಾ ಪ್ರೀತಿಯನ್ನು ಎತ್ತಿ ಹಿಡಿದು, ಮದುವೆಯನ್ನು ಧಿಕ್ಕರಿಸಿದ್ದು ಅಮರ ಪ್ರೇಮದ ಪರಾಕಾಷ್ಠೆಯಂತೆ ಕಾಣುತ್ತದೆ. ಅದು ಭಾಷೆ ಎಂಬ ಕರುಳಬಳ್ಳಿ ನಮ್ಮೊಳಗೇ ಮಲ್ಲಿಗೆಯಾಗುವ ಪರಿ!

ಈಗಲೂ ನನ್ನನ್ನು ಜ್ಯೋತಿ ಆರದಂತೆ ಜಾಗೃತವಾಗಿಟ್ಟಿದೆ ಎಂದೆನಿಸುತ್ತದೆ.

ಭಾಷಾ ವ್ಯಸನವೆಂಬುದು ವಾಸಿಯಾಗದ ಕಾಯಿಲೆಯಿದ್ದಂತೆ. ಅದು ನೀಡುವ ನೋವಿನ ಆನಂದವೇ ಆನಂದ. ನನಗೆ ಹುಡುಗಿ ಪ್ರೀತಿಯ ಬದಲು ಭಾಷಾ ಪ್ರೀತಿಯನ್ನು ಎತ್ತಿ ಹಿಡಿದು, ಮದುವೆಯನ್ನು ಧಿಕ್ಕರಿಸಿದ್ದು ಅಮರ ಪ್ರೇಮದ ಪರಾಕಾಷ್ಠೆಯಂತೆ ಕಾಣುತ್ತದೆ. ಅದು ಭಾಷೆ ಎಂಬ ಕರುಳಬಳ್ಳಿ ನಮ್ಮೊಳಗೇ ಮಲ್ಲಿಗೆಯಾಗುವ ಪರಿ !

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close