About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ನಾಪತ್ತೆಯಾಗಿದ್ದ ಹಡಗು 9 ವರ್ಷಗಳ ಬಳಿಕ ಪತ್ತೆ..!

ತೈವಾನ್: ಹಿಂದೊಮ್ಮೆ ನಾಪತ್ತೆಯಾಗಿದ್ದ ವಿಮಾನವೊಂದು 56 ವರ್ಷಗಳ ಬಳಿಕ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದನ್ನು ನೀವು ಕೇಳಿರ್ತೀರಾ. ಇದೀಗ ಹಡಗಿನ ಸರದಿ.. ಅರೆ ಇದೇನಪ್ಪಾ ಸ್ಟೋರಿ ಅಂತೀರಾ..? ಮುಂದೆ ಓದಿ..

2009ರಲ್ಲಿ ಹಿಂದೂ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಹಡಗೊಂದು 9 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದೆ. ಸ್ಯಾಮ್ ರಾಟುಲ್ಯಾಂಗಿ PB 1600 ಎಂಬ ಇಂಡೋನೇಷಿಯಾಗೆ ಸೇರಿದ ಸರಕು ಸಾಗಾಣಿಕೆ ಹಡಗು ತೈವಾನ್‍ನ ಹಿಂದೂ ಮಹಾಸಾಗರದಲ್ಲಿ ಕಾಣೆಯಾಗಿತ್ತು. ಈ ಹಡಗಿಗಾಗಿ ಅದೆಷ್ಟೂ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ ಒಂದು ವಾರದ ಹಿಂದೆ ಈ ಹಡಗು ಮಯನ್ಮಾರ್ ಬಳಿ ಕಾಣಿಸಿಕೊಂಡಿದೆ. ಈ ಹಡಗು ಪತ್ತೆ ಮಾಡಿದ ಮೀನುಗಾರರು ಅಚ್ಚರಿಯಿಂದ ಒಳಗೆ ಹೋಗಿ ನೋಡಿದರೆ ಯಾರೂ ಇರಲಿಲ್ವಂತೆ. ಈ ಹಡಗು ಈಗಲೂ ಚಾಲನೆಗೆ ಶಕ್ತವಾಗಿದ್ದು, ಇದು 9 ವರ್ಷಗಳ ಕಾಲ ಎಲ್ಲಿತ್ತು ಎಂಬ ಪ್ರಶ್ನೆ ಸಾಗರ ತಜ್ಞರನ್ನು ಕಾಡುತ್ತಿದೆ. ಹೀಗಾಗಿ ಇದನ್ನು ಜನರು ಗೋಸ್ಟ್ ಶಿಪ್ ಎಂದು ಕರೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close