About Us Advertise with us Be a Reporter E-Paper

ಪ್ರಚಲಿತರಾಜ್ಯ

ನಾಳೆಯಿಂದ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

ಕಾಮಗಾರಿ ನಡೆದ ಬಳಿಕ ಶಿರಾಟಿ ಘಟಿ ರಸ್ತೆಯ ನೋಟ

ಮಂಗಳೂರು: ಕಾಮಗಾರಿ ನಿಮಿತ್ತ ಆರು ತಿಂಗಳು ಬಂದ್ ಆಗಿದ್ದ ಬೆಂಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ನಾಳೆಯಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಶಿರಾಡಿ ಘಾಟಿಯಲ್ಲಿ ಎರಡನೇ ಹಂತದ ಕಾಂಕ್ರಿಟೀಕರಣ ಕಾಮಗಾರಿ ಮುಕ್ತಾಯವಾಗಿದ್ದು, ನಾಳೆ ಸಚಿವ ರೇವಣ್ಣ ಉದ್ಘಾಟನೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ 11.30ಕ್ಕೆ ಉದ್ಘಾಟನೆ ನಡೆಯಲಿದ್ದು ನಗರಾಭಿವರದ್ಧಿ, ವಸತಿ ಹಾಘೂ ದಕ್ಷಿಣ ಕನ್ನಡ ಜಿಲ್ಲಾ ಉದ್ತುವಾರಿ ಸಚಿವ ಯು.ಟಿ ಖಾದರ್‌, ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್‌ ಕಟೀಲ್, ಬೆಳ್ತಂಗಡಿ ಶಾಸಕ ಹರಿಶ್ ಪೂಂಜಾ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬೆಂಗಳೂರು ಹಾಗೂ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಕಾಮಗಾರಿ ನಿಮಿತ್ತ ಆರು ತಿಂಗಳು ಬಂದ್ ಮಾಡಲಾಗಿದ್ದು. ಎರಡನೇ ಹಂತದ ಕಾಮಗಾರಿಯಲ್ಲಿ ಕೆಂಪು ಹೊಳೆಯಿಂದ ಅಡ್ಡಹೊಳೆ ತನಕ 12.38 ಕಿಮಿ ಉದ್ದ ಹಾಘೂ 8.50 ಮೀಟರ್‌ ಅಗಲದ ಕಾಂಕ್ರಿಟ್ ಕಾಮಗಾರಿ ನಡೆಸಲಾಗಿದ್ದು, ಒಟ್ಟು 74 ಕೋಟಿ ಹಣ ಮಂಜೂರು ಮಾಡಲಾಗಿದ್ದು.

Tags

Related Articles

Leave a Reply

Your email address will not be published. Required fields are marked *

Language
Close