About Us Advertise with us Be a Reporter E-Paper

ಪಾಲಿಟಿಕ್ಸ್

ಬೇರೆಯವರ ತಪ್ಪಿನ ಮುಂದೆ ನನ್ನ ತಪ್ಪು ಏನೂ ಅಲ್ಲ: ಶೀರೂರು ಶ್ರೀ

ನಿಗೂಢವಾಗಿ ಸಾವನ್ನಪ್ಪಿದ ಶೀರೂರು ಸ್ವಾಮೀಜಿ, ಆಪ್ತರಲ್ಲಿ ತನಗಾದ ಅನ್ಯಾಯ, ಅಷ್ಟ ಮಠಗಳಲ್ಲಿ ಹಿಂದೆ ನಡೆದಿದ್ದ ತಪ್ಪುಗಳನ್ನು ಫೋನ್ ಕರೆ ಮಾಡಿ ಹೇಳಿಕೊಂಡಿದ್ದರು. ಲಭ್ಯವಾದ ಈ ವಾಯ್ಸ್ ರೆಕಾರ್ಡರ್ ದಾಖಲೆಯಲ್ಲಿ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸ್ಫೋಟಕ ವಿಚಾರಗಳನ್ನು ಬಿಚ್ಚಿಟ್ಟಿದ್ದು ಹೀಗೆ.

ತಮ್ಮನ್ನು ಹಣಿಯುತ್ತಿರುವ ಉಡುಪಿ ಮಠಗಳ ಸ್ವಾಮೀಜಿಗಳ ವಿರುದ್ಧ ಶೀರೂರು ಶ್ರೀ ಹೇಳಿದ ಮಾತುಗಳೆಂದರೆ, ಮುಖ್ಯವಾಗಿ ಪೇಜಾವರ ಸಾಧನೆ ದೊಡ್ಡದೇನಲ್ಲ, ನಿಜವಾಗಿ ಸಾಧನೆ ಮಾಡಿದ್ದು ಪುತ್ತಿಗೆ ಶ್ರೀಗಳು ಎಂದು ಉಲ್ಲೇಖಿಸುತ್ತಾರೆ. ಜತೆಗೆ ಅಷ್ಟಮಠಗಳಲ್ಲಿ ಸನ್ಯಾಸ ದೀಕ್ಷೆ ಪಡೆದವರು ಭೋಗಿಗಳಾಗಿದ್ದಾರೆ. ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ, ಆದರೆ ರಾಜಕೀಯಕ್ಕೆ ಇಳಿದ ಬಳಿಕ ನನ್ನನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಪ್ತರಲ್ಲಿ ದುಃಖ ತೋಡಿಕೊಂಡಿದ್ದು ಹೀಗೆ:

ಅಷ್ಟಮಠಗಳಲ್ಲಿ ನಿಜವಾಗಿಯೂ ಸಾಧನೆ ಮಾಡಿದವರೆಂದರೆ ಪುತ್ತಿಗೆ ಮಠಾಧೀಶರು. ಪುತ್ತಿಗೆ ಸ್ವಾಮೀಜಿ ಗ್ರೇಟ್. ವಿದೇಶದಲ್ಲಿ ಕ್ರೈಸ್ತ ದೇವಾಲಯವನ್ನು ಖರೀದಿಸಿ ಅಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿ ಕೃಷ್ಣ ದೇವಾಲಯ ಮಾಡಿದವರು. ಮಹತ್ಕಾರ್ಯ ಉಳಿದ ಸ್ವಾಮೀಜಿಗಳ ಹಣೆಬರಹದಲ್ಲಿ ಸಾಧ್ಯ ಇದೆಯಾ? ಅದಕ್ಕೆ ಪುತ್ತಿಗೆ ಸ್ವಾಮೀಜಿ ಮೇಲೆ ಹೊಟ್ಟೆ ಕಿಚ್ಚು. ಹೀಗಾಗಿ ಅವರಿಗೆ ಕೃಷ್ಣ ಪೂಜೆಗೆ ಅವಕಾಶ ನೀಡುತ್ತಿಲ್ಲ.

ಸೋದೆ ಮಠಕ್ಕೆ ಶೀರೂರು ಮಠದ ಕುರಿತು ಅಧಿಕಾರ ಇಲ್ಲ ಎನ್ನುವ ಕುರಿತು ಶೀರೂರು ಶ್ರೀ ಹೇಳಿರುವುದು ಹೀಗೆ:
ದ್ವಂದ್ವ ಮಠ ಹೇಳುವುದಕ್ಕೆ ಆಧಾರವೇ ಇಲ್ಲ. ಇವರಲ್ಲಿ ಅದಕ್ಕೆ ಆಧಾರ ಇದ್ರೆ ಕೊಡಲಿ. (ಸೋದೆ ಮಠದ ಕುರಿತು)

ತನ್ನ ಸನ್ಯಾಸತ್ವದ ಕುರಿತು ಸ್ವಾಮೀಜಿಯೊಬ್ಬರು ಪ್ರಶ್ನೆ ಕುರಿತು ಶೀರೂರು ಶ್ರೀಗಳು ಎಚ್ಚರಿಕೆ ನೀಡಿದ್ದು ಹೀಗೆ:
ಭಾರಿ ಮಾತನಾಡುತ್ತೀರಾ ? ಹೆಚ್ಚು ಮಾತನಾಡಿದರೆ ಎಲ್ಲ ಹೊರಗೆ ಎಳೆಯುತ್ತೇನೆ ಎಂದು ಹೇಳಿದೆ. ನಿಮ್ಮ ಗುರುಗಳ ಎಲ್ಲ ಗುಟ್ಟು ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದೆ. ಏಕೆಂದರೆ ಅವರ ಗುರುಗಳು 6 ಮಕ್ಕಳ ಅಪ್ಪ. ಅವರಿಗೆ 6 ಹೆಣ್ಣುಮಕ್ಕಳು ಮಾರ್ರೆ.

ನಾನು ಒಂದು ತಪ್ಪು ಮಾಡಿದ್ದೇನೆ. ಆದ್ರೆ ಉಳಿದವರ ತಪ್ಪಿನ ಎದುರು ಏನೂ ಅಲ್ಲ. ಅಷ್ಟಮಠದಲ್ಲಿ ಸೆಕ್ಸ್ ಹಿಂದೆಯೂ ಇತ್ತು ಇರಲಿದೆ ಆಯ್ತಲ್ವಾ ?

ತಾನು ಮಾತ್ರ ತಪ್ಪು ಮಾಡಿಲ್ಲ, ಉಳಿದ ಮಠಾಧೀಶರೂ ತಪ್ಪು ಮಾಡಿದ್ದಾರೆ ಎಂದು ಶೀರೂರು ಶ್ರೀಗಳು ಉಲ್ಲೇಖಿಸುವುದು ಹೀಗೆ:

ಉಡುಪಿಯ – ಮಠವೊಂದರಲ್ಲಿ ನಡೆದ ಕತೆ ಇದು. ಹಿಂದಿನ ಗುರುಗಳ ಗುರುಗಳ (ಗುಗ್ಗುರು) ಕತೆ ಇದು. ಮಠದಲ್ಲಿ ಪರಿಚಾರಿಕೆಗೆ ಅಕ್ಕಯ್ಯ ಎಂಬ ಹೆಂಗಸು ಇದ್ದರು. ಅವರಿಗೆ ಮಗು ಆಯಿತು. ಆ ಮಗುವಿಗೆ ಸ್ವಾಮೀಜಿ ದೀಕ್ಷೆ ಕೊಟ್ಟರು. ಇದನ್ನು ವಿರೋಧಿಸಿ ಉಳಿದ 7 ಸ್ವಾಮಿಗಳು ಮದ್ರಾಸ್ ಹೈಕೋರ್ಟ್‌ಗೆ ಆ ರೆಕಾರ್ಡ್ ನಮ್ಮ ಹತ್ತಿರ ಇದೆ. ಅವರು ಹೈಕೋರ್ಟಿಗೆ ಹೋಗಿ ಗೆದ್ದು ಬಂದದ್ದಲ್ಲ ಮಾರಾಯ್ರೆ.
ಅಕ್ಕಯ್ಯರ ಮಗ ಸ್ವಾಮೀಜಿಯಾಗಿ, ಪೀಠಾಧಿಪತಿಯಾಗಿ ಪೂಜೆ ಮಾಡಿ ಕಾಲವಾದರು. ಉಡುಪಿ ಸ್ವಾಮಿಗಳ ಸಾಲಿನಲ್ಲಿಯೇ ಅವರ ವೃಂದಾವನ ಮಾಡಿದರು. ಆದೇ ಸಣ್ಣ ವೃಂದಾವನ ಇರುವುದೇ ಆ ಸ್ವಾಮಿಗಳದ್ದು.

ಇನ್ನು ಮಠದ ಅಜ್ಜಯ್ಯರಿಗೆ ಮೂವರು ಮಕ್ಕಳು. ಮಕ್ಕಳ ಬಳಿ ನಾನು ಮಾತನಾಡಿದ್ದೇನೆ. ಆಗ ಅವರು ನನ್ನದು ಡಿಎನ್ಎ ಟೆಸ್ಟ್ ಮಾಡಿಸಲು ಸಿದ್ಧ ಎಂದು ಹೇಳಿದ್ದರು. ಸ್ವಾಮೀಜಿ ಡ್ಯಾಮೇಜ್ ಆದಾಗ ನಾನು ಬರುತ್ತೇನೆ ಎಂದು ಭರವಸೆ ಕೂಡಾ ಕೊಟ್ಟಿದ್ದರು. ಪಾಪ ಅವರ ಕುಟುಂಬದವರಿಗೆ ಉಡುಪಿ ಮಠಕ್ಕೆ ಪ್ರವೇಶ ಇಲ್ಲ.

ಆ – ಮಠದ ಸ್ವಾಮೀಜಿ ಇದ್ದಾರಲ್ಲ, ದೊಡ್ಡವರು. ಅವರ ಗುರುಗಳಿಗೆ ಕೊಂಕಣಿ ಹೆಂಗಸಿನ ಸಹವಾಸ ಇತ್ತು. ಅವರಿಗೆ ಎರಡು ಕೊಂಕಣಿ ಮಕ್ಕಳು. ಅವರ ಗುರುಗಳಿಗೂ ಒಂದು — ಇತ್ತು. ಅದು ಯಾರು ಗೊತ್ತಾ ರಾಜವಾಣಿ ಅಂತ. ಅವರ ಹಿಂದಿನವರು ಅವರನ್ನು ಕೊಲೆ ಮಾಡಿದ್ದರು. ಅವರಿಗೆ ಹೆಣ್ಣು ಹುಚ್ಚು

ಇದು ಸುಳ್ಳು ಎಂದು ಉಳಿದ ಮಠಾಧಿಪತಿಗಳು ಮುಖ್ಯ ಪ್ರಾಣ ದೇವರ ಸನ್ನಿಧಿ ಮುಂದೆ ಬಂದು ಹೇಳಲಿ. ಇದು ಸತ್ಯ ಎಂದು ಹೇಳಲು ನಾನು ಸಿದ್ಧನಿದ್ದೇನೆ.

ತಾನು ಸುಳ್ಳು ಹೇಳುವುದಿಲ್ಲ ಎನ್ನುವುದಕ್ಕೆ ಶೀರೂರು ಶ್ರೀ ಉದಾಹರಣೆ ನೀಡುವುದು ಹೀಗೆ:

ಅಶ್ವಾರೂಢಂ ಯತಿಂ ದೃಷ್ಟ್ವಾ ಸಚೇತ ಸ್ನಾನ ಮಾಚರೇತ್
ಸ್ವಾಮೀಜಿಗಳು ಕುದುರೆ ಮೇಲೆ ಕೂತಿದ್ದನ್ನು ಯಾರಾದರೂ ಕಂಡರೆ, ನೋಡಿದವರು ಅಂಗಿ-ಪ್ಯಾಂಟ್ ಸಮೇತವಾಗಿ ನೀರಲ್ಲಿ ಇಳಿದು ಸ್ನಾನ ಮಾಡಬೇಕು. ಗೊತ್ತಲ್ವಾ ? ಒಂದು ಬೆಣ್ಣೆ , ಇನ್ನೊಂದು ಕಣ್ಣಿಗೆ ಸುಣ್ಣ ಅಂತ ಮಾಡಬಹುದಾ? ಇದು ಸರಿಯಾ? ಇದು ವಿಶ್ವಾಸಘಾತಕ. ಸನ್ಯಾಸ ಬಿಡಬೇಕು ಹೇಳಲು ಇವರು ಯಾರು ?

ತನ್ನನ್ನು ಮಠಾಧೀಶರು ಮೂಲೆ ಗುಂಪು ಮಾಡುತ್ತಿರುವ ಕುರಿತು ಶೀರೂರು ಶ್ರೀ ಆಕ್ರೋಶ ಪಡಿಸುತ್ತಿರುವುದು ಹೀಗೆ:
ಒಂದು ವಿಚಾರ ನೆನಪಿಟ್ಟುಕೊಳ್ಳಿ. ದಾಖಲೆ ಬೇಕಾದರೆ ತೆಗೆಯಿರಿ. 47 ವರ್ಷಗಳ ಕಾಲ ಸತತ ಶ್ರೀಕೃಷ್ಣನ ಪೂಜೆ ಮಾಡಿದ್ದು ಯಾರು ಎಂದರೆ ಅದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ. ವಿಶ್ವೇಶ ಕೂಡಾ ಅಷ್ಟು ವರ್ಷ ಸತತವಾಗಿ ಪೂಜೆ ಮಾಡಿಲ್ಲ. ನಾನು ಈಗ ದೂರವಾದೆನಾ ? ಚುನಾವಣೆಗೆ ಸ್ಪರ್ಧೆ ಮಾಡಿದ ತಕ್ಷಣ ನಾನು ಬೇಡವಾಗಿ ಬಿಟ್ಟೆ.
ನನ್ನ ವಿರುದ್ಧ ಪ್ರಸಾರ ಸುದ್ದಿ ಮಾಡಿದ ಚಾನೆಲ್ನವರಿಗೆ ಅಷ್ಟು ಹಣ ಕೊಟ್ಟರಲ್ಲ. ಹಿಂದೆ ಪ್ರತಿ ಕೆಲಸಕ್ಕೂ ನಾನು ಬೇಕಾಗಿದ್ದವ.

ಅನಾಥೋದೈವ ರಕ್ಷಕಃ. ನಾನು ಈಗ ಅನಾಥ. ಹಗೆ ಸಾಧಿಸುತ್ತಿದ್ದಾರೆ. ಯಾವ ರೀತಿ ಅಂದ್ರೆ. ನಾವು ಪ್ರೀತಿಯಿಂದ ಇರಬೇಕು. ಅಷ್ಟ ಮಠ, ಇಷ್ಟ ಮಠ ಎಲ್ಲರೂ ಹಾಗೆ ಒಟ್ಟಾಗಿರಬೇಕು. ಆದರೆ ಅವರು ಯಾರಿಗೂ ಆ ಮನೋಭಾವವೇ ಇಲ್ಲ.

ಸ್ವಾಮೀಜಿಗಳನ್ನು ಪೀಠ ತ್ಯಾಗ ಮಾಡಿಸುತ್ತಿರುವ ಕುರಿತು ಶೀರೂರು ಶ್ರೀಗಳು ಒಂದೊಂದೇ ಉದಾಹರಣೆ ನೀಡುತ್ತಾ ಪೇಜಾವರ ಶ್ರೀಗಳ ಕುರಿತು ಆಕ್ರೋಶ ವ್ಯಕ್ತಪಡಿಸುವುದು ಹೀಗೆ:

ಪಲಿಮಾರು ಮಠದಲ್ಲಿದ್ದ ರಘುವಲ್ಲಭರನ್ನು ಕೆಳಗೆ ಇಳಿಸಿದರು. ಅವರು ಯಾರು ಎಂದರೆ ನನ್ನ ಅಣ್ಣನ ಪತ್ನಿಯ ಅಣ್ಣ. 1970ರಲ್ಲಿ ಅವರ ಕೈಗೆ 5 ಲಕ್ಷ ರು. ನೀಡಿ ಪೀಠ ಬಿಡು ಎಂದು ಎಬ್ಬಿಸಿ ಕಳುಹಿಸಿದರು. ಆ ಭಂಡಾರಕೇರಿಯ ವಿದ್ಯಾಮಾನ್ಯರನ್ನು ಕರೆತಂದು ಕೂರಿಸಿದರು. ತನ್ನ ವಿದ್ಯಾಗುರುವಿಗೆ ಇದು ಗುರುದಕ್ಷಿಣೆ ಎಂದು ಹೇಳಿದರು. ಮೊದಲ ಜೀವಂತ ಹತ್ಯೆ ಇದು. ರಘುವಲ್ಲಭರು ಪಾಪ ಏನು ಮಾಡಿದರು. ಅವರನ್ನು ಅಮೆರಿಕಕ್ಕೆ ಕಳುಹಿಸಲಾಯಿತು. ಅಲ್ಲಿ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.

ಇನ್ನೊಂದು ಜೀವಂತ ಹತ್ಯೆ ವಿಶ್ವವಿಜಯರು (ಪೀಠ ಪರಿತ್ಯಕ್ತರು). ಅವರು ಅಮೆರಿಕದಿಂದ ವಿದ್ಯಾಪೀಠಕ್ಕೆ ಬಂದು ಅಲ್ಲಿಂದಲೇ ಚೆನ್ನೈಗೆ ಹೋಗಬೇಕಿತ್ತು. ಉಡುಪಿಗೆ ಬರುವ ಹಾಗೆಯೇ ಇರಲಿಲ್ಲ.

ಮೂರನೇ ಜೀವಂತ ಹತ್ಯೆ 1996ರಲ್ಲಿ ಪುತ್ತಿಗೆ ಶ್ರೀ , ಕರ್ನಾಟಕದ ಪ್ರಮುಖ ಮಠದ ಸ್ವಾಮಿಗಳನ್ನು ಪೀಠ ಬಿಡುವಂತೆ ಮಾಡಿ ಜೀವಂತ ಕೊಂದುಬಿಟ್ಟರು, ಪಾಪ, ಮಾರಾಯರೆ, ಅವರು ಮನೆ ಮನೆಗೆ ಹೋಗಿ ಪ್ರವಚನ ಮಾಡಿಕೊಂಡು ಬದುಕುವ ಪರಿಸ್ಥಿತಿ ಇದೆ.
ಇವರು ವ್ಯಾಸರಾಯರ ಮಠಕ್ಕೆ ತಲೆ ಹಾಕಿದರು. ಆ ಸ್ವಾಮೀಜಿಗಳ ಪೀಠದಿಂದ ಕಿತ್ತು ಹಾಕಿದರು. ಅಲ್ಲಿಗೆ ಪುಷ್ಕರ ಆಚಾರ್ಯರನ್ನು ನೇಮಕ ಮಾಡಿದರು. ಮತ್ತೆ ಅವರನ್ನು ತೆಗೆದು ಇನ್ನೊಬ್ಬ ಆಚಾರ್ಯರಿಗೆ ಪೀಠ ಕೊಟ್ಟರು. ಒಂದೇ ಮಠದಲ್ಲಿ ಎರಡು ಸನ್ಯಾಸಿಗಳ ಜೀವಂತ ಹತ್ಯೆ ಮಾಡಿದರು.
ಮಾಡಿ, ಇವರು ಹೇಳುವುದೆಲ್ಲ ಸತ್ಯ ಅಂತೆ, ಇವರದೆಲ್ಲ ಹೊರಗೆ ಹಾಕಿ ಬಿಟ್ಟರೆ ಉಂಟಲ್ಲಾ …

ಇಲ್ಲಿಗೆ ವಾಯ್ಸ್ ರೆಕಾರ್ಡ್ ಮುಗಿಯುತ್ತದೆ.

ಶೀರೂರು ಶ್ರೀ ತನ್ನ ಆಪ್ತರಿಗೆ ಕಳುಹಿಸಿದ ವಾಟ್ಸಾಪ್ ವಾಯ್ಸ್ ನೋಟ್‌ನಲ್ಲಿ ಪಟ್ಟದ ದೇವರನ್ನು ವಾಪಸ್ ನೀಡಲು ಸ್ವಾಮೀಜಿಗಳು ಹಣ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅವರು ತುಳುವಿನಲ್ಲಿ ಮಾತನಾಡಿದ್ದಾರೆ. ಮಾತುಗಳು ಹೀಗಿದೆ:

1 ಕೋಟಿ ಕೊಟ್ಟರೆ ಮ್ಯಾಟರ್ ಫಿನಿಶ್ !

ಆಗ ನಿನ್ನ ವಾಟ್ಸಪ್ ನೋಡಿದೆ. ಖುಷಿ ಆಯ್ತು.
ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
ಅವರಿಗೆ ಒಂದು ಕೋಟಿ ಕೊಡಬೇಕಂತೆ.
ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
ಐವತ್ತು ಲಕ್ಷ ಅವರಿಗೆ ಬೇಕಂತೆ.
ಆಮೇಲೆ ಈ ಮ್ಯಾಟರ್ ಫಿನಿಷ್ ಅಂತೆ.

ಆಮೇಲೆ ಏನೂಂತ ಅಂದ್ರೆ. ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳ್ಢ್ದಿಣರೆ. ಅದನ್ನು ಇವರು ಬೇಡುತ್‌ಇದ್ದಾರೆ
ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ…

Tags

Related Articles

Leave a Reply

Your email address will not be published. Required fields are marked *

Language
Close