About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಶಿರೂರು ಮಠ ಬಾರ್ & ರೆಸ್ಟೋರೆಂಟ್ ಅಲ್ಲ..!

ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ಅಸಮಾಧಾನ

ಅಂಕೋಲಾ: ಉಡುಪಿಯ ಶಿರೂರು ಶ್ರೀಗಳು ಮೃತಪಟ್ಟು ಐದು ದಿನಗಳಲ್ಲಿ ಮಠದಲ್ಲಿ ನಾಲ್ಕೂವರೆ ಲಕ್ಷ ರು.ಮೌಲ್ಯದ ಮದ್ಯ  ಸಿಕ್ಕಿದೆ ಎಂಬುದು ಅಸಂಬದ್ಧ. ನಾಲ್ಕೂವರೇ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ ಎಂದು ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಂಕೋಲದ ಬಾಸ್ಗೋಡಿನಲ್ಲಿ ಪಹರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಡುಪಿಯ ಶಿರೂರು ಶ್ರೀ ವಿಧಿವಶರಾದ ಮೇಲೆ ಅವರ ಮೇಲೆ ಇರುವ ಹಗೆತನ ಕಡಿಮೆಯಾಗಿಲ್ಲ. ಶ್ರೀಗಳು ಸತ್ತಮೇಲೂ ಆರೋಪ ನಡೆಯುತ್ತಿದೆ ಎಂದು ಆರೋಪಿಸಿದರು.

ರಮ್ಯ ಶೆಟ್ಟಿಯನ್ನು ಅಪರಾಧಿ ಎಂದು ಬಿಂಬಿಸಲಾಗಿದೆ. ಆಕೆ ಒಂದು ಹೆಣ್ಣುಮಗಳಾಗಿ ಹೇಳಬೇಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕುತ್ತಿಗೆ ಕೊಯ್ದು ಹಾಕುವಷ್ಟು ದಡ್ಡಿಯಲ್ಲ. ಮಠದಲ್ಲಿ ತುಳಸಿದಳ ಬೀಳಿಸುವುದಕ್ಕಿಂತ ಹೆಚ್ಚಾಗಿ ಬಾಟಲಿ ಬೀಳಿಸಿದ್ದು, ಅವರನ್ನು ದೂಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಧರ್ಮದ ಮೇಲೆ ಬಿದ್ದಿರುವ ಆಘಾತ ಎಂದು ಟೀಕಿಸಿದರು.

ಪೇಜಾವರ ಶ್ರೀ ವಿರುದ್ಧ ಕಿಡಿ

ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಸ್ವಾಮಿಗಳೇ ಅಲ್ಲ ಎಂದಿದ್ದಾರೆ. ಮೊನ್ನೆ ನಡೆದ ಪರ್ಯಾಯದಲ್ಲಿ ಅವರನ್ನು  ಯಾಕೆ ಕೂರಿಸಿದ್ದರು ? 43 ವರ್ಷ ಪೀಠದಲ್ಲಿ ಶಿರೂರು ಶ್ರೀಗಳಿದ್ದರು ಇಲ್ಲಿವರೆಗೆ ಯಾಕೆ ಪೇಜಾವರ ಶ್ರೀಗಳು ಹೇಳಲಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಪ್ಪು ಮಾಡಿರಬಹುದು. ಆದರೆ, ವಿಧಿವಶರಾದ ಮೇಲೆ ಎತ್ತಿ ಆಡುವುದು ಸೌಜನ್ಯವಲ್ಲ. ಶಿರೂರು ಶ್ರೀಗಳನ್ನು ಮುಂಚೆಯೇ ಪೀಠದಿಂದ ಇಳಿಸಬೇಕಿತ್ತು. ಒತ್ತಡ ಹೇರಬೇಕಿತ್ತು. ಆಜ್ಞೆ ಹೊರಡಿಸಬಹುದಿತ್ತು. ಆದರೆ, ಈಗ ಸನ್ಯಾಸಿಯಲ್ಲ ಎನ್ನುವುದು ಸರಿಯಲ್ಲ ಅಂದು ಪೇಜಾವರ ಶ್ರೀ ವಿರುದ್ಧ ಕಿಡಿಕಾರಿದರು.

ಕುಡುಕ ಅಂದ ಇತಿಹಾಸವೇ ಇಲ್ಲ

ಇಲ್ಲಿಯವರೆಗೆ ಅವರು ಬದುಕಿದ್ದಾಗ ಶಿರೂರು ಶ್ರೀ ಕುಡುಕ ಎಂದು ಹೇಳಿದ ಇತಿಹಾಸ ಉಡುಪಿಯಲ್ಲಿಲ್ಲ. ಶಿರೂರು ಶ್ರೀಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟದ ದೇವರನ್ನು ಬೇರೊಬ್ಬ ಸ್ವಾಮೀಜಿಗೆ ಕೊಟ್ಟದ್ದು ನಿಜ. ಆದರೆ, ಮರಳಿ ನೀಡದ್ದಕ್ಕೆ ವಕೀಲ ರವಿ ಕಿರಣ್ ಮುರಡೇಶ್ವ ರನ್ನು ಮಾಡಿ ಕೇಸ್ ಹಾಕಲು ತೀರ್ಮಾನ ಆಗಿತ್ತು. ಅದು ಮಠಾಧೀಶರಿಗೆ ಸರಿಬರಲಿಲ್ಲ ಅಂತ ಹೇಳಿದ ಅವರು, ಶಿರೂರು ಮಠಕ್ಕೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಮಾಡುವ ಬದಲು ವಯಸ್ಕರನ್ನು ಪೀಠಾಧಿಪತಿ ಮಾಡುವ ಕುರಿತು ಪೇಜಾವರ ಶ್ರೀಗಳ ಮಾತಿಗೆ ಸಹಮತ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close