About Us Advertise with us Be a Reporter E-Paper

ಗುರು

ಅಹಂನ್ನೇ ಭಸ್ಮಗೊಳಿಸಬಲ್ಲ ಶಿವ ತಾಂಡವ ನೃತ್ಯ

- ಫಣೀಂದ್ರ ಸುಬ್ರಹ್ಮಣ್ಯಮ್

ಶಿವ ಹಾಗೂ ಶಕ್ತಿಯ ಆರಾಧಕರು ಈ ಲಯಕಾರನ ರೌದ್ರ ತಾಂಡವದ ಮೂಲಕ ಶಿವ ಮಾತ್ರನಲ್ಲ ಅವನೊಂದಿಗೆ ಪ್ರಪಂಚದ ಜೀವಿಗಳು ಬಂಧ ಮುಕ್ತವಾಗುತ್ತಾರೆ ಎಂದು ನಂಬುತ್ತಾರೆ. ಸ್ಮಶಾನವನ್ನೇ ನೃತ್ಯಕ್ಕೆ ರಂಗಭೂಮಿಯಾಗಿಸಿಕೊಂಡ ಶಿವ ಜೀವಿಯ ನಾನೂ,ನನ್ನದು, ನನ್ನಿಂದಲೇ ಎಂಬ ಅಹಂನ್ನು ತುಳಿದು ಬೂದಿಯಾಗಿಸುತ್ತಾನೆ.

ಶಿವ ಎಂದರೆ ಎಲ್ಲವನ್ನೂ ತೊರೆದವ ಎಂದರ್ಥ. ಇಂತಹ ಮಹಾದೇವನು ವಿಶಿಷ್ಟವಾಗಿ ಸ್ಥಿತಿ ಹಾಗೂ ತಾಂಡವ ಅಥವಾ ಲಾಸ್ಯ(ನೃತ್ಯ) ಹೀಗೇ ಎರಡು ರೂಪದಲ್ಲಿರುತ್ತಾನೆ ಎಂಬುದು ಭಕ್ತರ ನಂಬಿಕೆ. ಸಮಾಧಿ ಸ್ಥಿತಿ ಅವನ ನಿರ್ಗುಣ ರೂಪವನ್ನೂ ಹಾಗೂ ತಾಂಡವ ಅವನ ಸಗುಣ ರೂಪವನ್ನ ಪ್ರತಿನಿಧಿಸುತ್ತವೆ. ಒಂದು ದೇಹದ ಅಂಗಾಂಗದ ಚಲನೆಯ ಮೂಲಕ ಒಂದು ವಿಷಯವನ್ನೋ ಅಥವಾ ಪರಿಸ್ಥಿತಿಯನ್ನೋ ಬಂಗಿಗಳ ಮೂಲಕ ವರ್ಣಿಸುವ ದೈವಕಲೆಗೆ ನಾಟ್ಯ ಅಥವಾ ನಟನ ಎಂದು ಹೆಸರು. ಈ ಕಲೆಯನ್ನು ಪ್ರತಿನಿಧಿಸುವವನೇ ನಟನ್ ಅಥವಾ ನಟ. ನೃತ್ಯದ ಕರ್ತೃ ನಟರಾಜನೇ ಪರಂಪಾರಗತವಾಗಿ ಬಂದ ನಂಬಿಕೆ. ಸರ್ವಶಕ್ತನಾದ ಶಿವನ ಅಂಶವೇ ನಟರಾಜ ಅರ್ಥಾತ್ ಸಾಕ್ಷಾತ್ ಶಿವನ ಮತ್ತೊಂದು ರೂಪ ನಟರಾಜ.

ಇಡೀ ವಿಶ್ವವೇ ಶಿವನ ನೃತ್ಯ ಶಾಲೆ, ಭೂಮಿ ಅವನ ಆಟದ ಮೈದಾನ. ಆತ ಕೇವನ ನಾಟ್ಯಗಾರನಲ್ಲ. ಜತೆಗೆ ನಮ್ಮೆಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುವ ಪ್ರೇಕ್ಷಕನೂ ಹೌದು. ವಿಶ್ವದ ಝೇಂಕಾರದಿಂದ ಆರಂಭವಾಗುವ ನೃತ್ಯ ಗೋಚರ, ಅಗೋಚರ ಶಕ್ತಿಗಳು ಅವನಲ್ಲೆ ಲೀನವಾಗಿ ಅವನೊಬ್ಬನೇ ಅನಂತನಾಗಿ, ಆನಂದದಲ್ಲಿ ನತ್ಯವನ್ನು ಕೊನೆಮಾಡುತ್ತಾನೆ. ನಿಸ್ಸಂಶಯವಾಗಿ ನಟರಾಜ ಎಲ್ಲಾ ಧರ್ಮಕಾರ್ಯಗಳ ಮೂರ್ತಿಯೇ ಸರೀ.

ನಟರಾಜನ ನೃತ್ಯ ಪ್ರಪಂಚ ಹಾಗೂ ದೈವದ ನಡುವಿನ ಮುಖ್ಯ ಕ್ರಿಯೆಯನ್ನ ಬಿಂಬಿಸುತ್ತದೆ. ಅರ್ಥಾತ್ ಸೃಷ್ಟಿ(ಪ್ರಾರಂಭ), ಸ್ಥಿತಿ(ನಿರ್ವಹಣೆ), ಲಯ(ಅಂತ್ಯ). ಬದುಕಿನ ಜಂಜಾಟದಲ್ಲಿ ಭ್ರಮೆಯಲ್ಲೆ ಮುಳುಗಿ ಹೋದವರಿಗೆ ಬಂಧಮುಕ್ತವಾಗುವ ಅನುಗ್ರಹ ನೀಡುವ ಸಾಕಾರ ಮೂರ್ತಿಯೇ ಈಶ್ವರ(ಶಿವ).

ಹಿಂದೊಮ್ಮೆ ಭರತಮುನಿ ಎಂಬ ಶಿವಭಕ್ತನ ಮುಂದೆ ಶಿವನು ಉದ್ದಾತ ನೃತ್ಯ ಮಾಡಿದ್ದನ್ನು ಅದ ನೆನಪಿಗೆ ತಂದು ಸದಾ ಅವನೊಂದಿಗೆ ಇರುವ ಮುಖಾಂತರ ಈ ನೃತ್ಯ ‘ತಂಡು’ ಎಂದಾಯಿತು. ಗಿರಿಜೆಯೂ ಕೂಡ ಶಿವನೊಂದಿಗೆ ಸಂತೋಷದಿಂದ ನೃತ್ಯ ಮಾಡಿದಳು. ಸ್ತ್ರೀಯರು ಬರಿಗೈಯಲ್ಲಿ ನೃತ್ಯ ಮಾಡುವುದಕ್ಕೆ ‘ಲಾಸ್ಯ’ ಎಂದು ಹೆಸರು. ತಂಡು ಪ್ರದರ್ಶಿಸಿದ ನೃತ್ಯವೇ ತಾಂಡವ ಎಂದಾಯಿತು. ಮುಂದೆ ಭರತ ಮುನಿಯೂ ಈ ನಾಟ್ಯ ಕಲೆಯನ್ನು ಮನುಕುಲಕ್ಕೆ ಕಲಿಸಿದರು.

ನೃತ್ಯ ಮಾಡುವ ಸಮಯದಲ್ಲಿ ದೇಹದ ಪ್ರತಿ ಅಂಗಾಂಗದಿಂದಲೂ, ಅಣು ಅಣುವಿನಲ್ಲೂ ಶಿವತತ್ವ ಜಾಗ್ರತವಾಗುತ್ತ ಶಬ್ದದ ಮೂಲಕ ಹೊರಹೊಮ್ಮವುದು. ಈ ಶಬ್ದ ಶಿವ ತತ್ವದ ಪ್ರಭಾವವಾದರಿಂದ ಇದು ತಾಂಡವ ನೃತ್ಯ ಎಂದೂ ರೂಢಿಗೆ ಬಂತು.

ತಾಂಡವ ನೃತ್ಯ ತಾಂಡವವಾಗಿ ಪ್ರತ್ಯಕಿಸಲ್ಪಟ್ಟಿವೆ.
1. ಆನಂದ ತಾಂಡವ
2. ಸಂಧ್ಯಾ ತಾಂಡವ(ಪ್ರದೋಷ ನೃತ್ಯ)
3. ಕಾಳಿಕ ತಾಂಡವ
4. ತ್ರಿಪುರ ತಾಂಡವ
5. ಗೌರಿ ತಾಂಡವ
6. ಸರ್ನ್ಹ ತಾಂಡವ
7. ಉಮ ತಾಂಡವ
ಮೇಲಿನ ತಾಂಡವ ಪ್ರಕಾರಗಳಲ್ಲಿ ಶಿವಪ್ರದೋಷ ಶ್ಲೋಕವನ್ನ ಸಂದ್ಯಾ ತಾಂಡವ ವಿಶ್ಲೇಷಿಸುತ್ತದೆ. ತಾಂಡವವನ್ನ ಶಿವನು ತ್ರಿ ಸಂಧ್ಯಾ (ಮುಸ್ಸಂಜೆ) ಸಮಯಲ್ಲಿ ನರ್ತಿಸುವ ಮೂಲಕ ಅರ್ಪಿಸಿದನಂತೆ. ಶಿವನನೃತ್ಯಕ್ಕೆ ಕೇವಲ ಶಿವನ ಲೋಕವಲ್ಲದೆ ಇಡೀ ದೇವಲೋಕವೇ ಪಾಲ್ಗೊಳ್ಳುವುದು. ಸರಸ್ವತಿ ವೀಣೆ ನುಡಿಸುತ(ಒಂದು ಬಗೆಯ ತಂತಿ ವಾದ್ಯ), ದೇವರಾಜ ಇಂದ್ರ ಕೊಳಲನೂತುತ, ಬ್ರಹ್ಮ ಸ್ವರಬದ್ದವಾಗಿ ತಾಳ ಹಾಕುತ್ತ, ಲಕ್ಷ್ಮೀ ದೇವಿಯೂ ಗಾಯನ ಮಾಡುತ್ತ ಹಾಗೂ ವಿಷ್ಣುವೂ ಮೃದಂಗ ಬಾರಿಸುತ ತಲ್ಲೀನರಾಗಿ ಶಿವನ ನಾಟ್ಯಕ್ಕೆ ಪ್ರೋತ್ಸಾಹ ನೀಡುವರು. ಮಿಕ್ಕೆಲ್ಲ ದೇವತೆಗಳು ಸುತ್ತ ನೆರೆದು ಆನಂದದಿಂದ ನೋಡುತ್ತ ಆನಂದದಲ್ಲಿ ಮೈ ಮರೆಯುತ್ತಾರೆ.

ಗೌರಿ ತಾಂಡವ ಹಾಗೂ ಉಮ ತಾಂಡವಗಳು ಹಿಂಜರಿಕೆಯ ವರ್ಣನೆ ಮಾಡುತ್ತವೆ. ಶಿವನು ಭೈರವನ ರೂಪದಲ್ಲಿ ಅಥವಾ ವೀರಭದ್ರನ ರೂಪದಲ್ಲಿ ಗೌರಿಯ ಪ್ರೇತವ ಸುಡುವ ಸ್ಮಶಾನದಲ್ಲಿ ಈ ನೃತ್ಯ ಮಾಡಿದ ಎಂಬುದು ನಂಬಿಕೆ. ನಟರಾಜನ ಸಾತ್ವಿಕ ನೃತ್ಯ ಶೈಲಿಯಲ್ಲಿ (ಸಂಧ್ಯಾ ತಾಂಡವೂ ಸೇರೀ) ನದಾಂತ ನೃತ್ಯವೂ ಪ್ರಖ್ಯಾತವಾಗಿದೆ. ಚಿದಂಬರಂನಲ್ಲಿರುವ ಜಗದ್ವಿಖ್ಯಾತ ನಟರಾಜನು ಇದೇ ಭಂಗಿಯಲ್ಲಿರುವುದು ವಿಶೇಷ.

ಶಿವ ಹಾಗೂ ಶಕ್ತಿಯ ಆರಾಧಕರು ಈ ಲಯಕಾರನ ರೌದ್ರ ತಾಂಡವದ ಮೂಲಕ ಶಿವ ಮಾತ್ರನಲ್ಲ ಅವನೊಂದಿಗೆ ಪ್ರಪಂಚದ ಜೀವಿಗಳು ಬಂಧ ಮುಕ್ತವಾಗುತ್ತಾರೆ ಎಂದು ನಂಬುತ್ತಾರೆ. ಸ್ಮಶಾನವನ್ನೇ ನೃತ್ಯಕ್ಕೆ ರಂಗಭೂಮಿಯಾಗಿಸಿಕೊಂಡ ಶಿವ ಜೀವಿಯ ನಾನೂ,ನನ್ನದು, ನನ್ನಿಂದಲೇ ಅಹಂನ್ನು ತುಳಿದು ಬೂದಿಯಾಗಿಸುತ್ತಾನೆ. ಇಂತಹ ಪ್ರಳಯ ಭಯಂಕರನ ತಾಂಡವದ ವೇಳೆ ಕೇವಲ ದೇವತೆಗಳಲ್ಲ ಜತೆಗೆ ಶಿವಗಣ ಭೂತಗಣಗಳು ಒಟ್ಟಾಗಿ ಉತ್ಸಾಹದಿಂದ ತಲ್ಲೀನರಾಗಿ ನೃತ್ಯ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close