About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ದಸರಾದಲ್ಲಿ ಶಿವಕುಮಾರ ಸ್ವಾಮೀಜಿ ಕುರಿತ ಸ್ತಬ್ಧಚಿತ್ರ ಪ್ರದರ್ಶನ

ತುಮಕೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಜಿಲ್ಲಾ ಪಂಚಾಯಿತಿ ವತಿಯಿಂದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಶತಮಾನ ಕಂಡ ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕುರಿತ ಸ್ತಬ್ಧಚಿತ್ರ ನಿರ್ಮಿಸಿ, ಅಕ್ಟೋಬರ್ 19 ರಂದು ಮೈಸೂರಿನಲ್ಲಿ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ.

ಎರಡು ಬಾರಿ ಜಿಲ್ಲೆಗೆ ವಿಭಾಗ ಮಟ್ಟದ ಪ್ರಶಸ್ತಿ ತಂದು ಕೊಟ್ಟ, ಕಲಾವಿದ ತಿಪಟೂರುಕೃಷ್ಣ ಮತ್ತು ಅವರ ತಂಡವೇ ಈ ಬಾರಿಯೂ ಸ್ತಬ್ಧಚಿತ್ರ ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಇದೇ ತಂಡ ಕಳೆದ ಬಾರಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯವರ ಸ್ತಬ್ಧಚಿತ್ರ ನಿರ್ಮಿಸಿ, ಯಶಸ್ವಿ ಪ್ರದರ್ಶನದ ಜೊತೆಗೆ ವಿಭಾಗದ ಬಹುಮಾನ ಪಡೆದಿದ್ದರು.

ಸ್ತಬ್ಧಚಿತ್ರ ಸುಮಾರು 34 ಅಡಿಗಳಷ್ಟು ಉದ್ದ, 14 ಅಡಿಗಳಷ್ಟು ಅಗಲ ಹಾಗೂ 14 ಅಡಿಗಳಷ್ಟು ಎತ್ತರ ಇರುತ್ತದೆ. ಶ್ರೀಗಳ ಸಾಧನೆ, ತ್ರಿವಿಧ ದಾಸೋಹ, ಸರ್ವ ಜನರ ಜ್ಞಾನ ದೇಗುಲ ಎಂಬುದನ್ನು ಹೇಳುವ ಜೊತೆಗೆ ಜಗತ್ತಿಗೆ ಸೌಹಾರ್ಧತೆ ಮತ್ತು ಶಾಂತಿಯ ಸಂದೇಶ ಸಾರುವ ಮೂಲ ಉದ್ದೇಶ ಈ ಸ್ತಬ್ಧಚಿತ್ರ ಹೊಂದಿದೆ.

ವಿನ್ಯಾಸ ಮತ್ತು ನಿರ್ಮಾಣದ ಜವಾಬ್ಧಾರಿ ತಿಪಟೂರುಕೃಷ್ಣ ವಹಿಸಿದ್ದು, ಉಳಿದಂತೆ ಜಿಲ್ಲೆಯ ಕಲಾವಿದರಾದ ಶ್ರೀನಿವಾಸ್ ಶ್ರೀಗಂಧ ಆಟ್‌ಸ್, ಮತ್ತಿಘಟ್ಟ, ಟಿ.ಆರ್.ಜಿತೇಂದ್ರ ಶಿಲ್ಪಾ ಆಟ್‌ಸ್, ಯೋಗಿಶ್ ಕುಮಾರ್, ಹನುಮಂತ, ಗಿರಿಶ್ ಮಾತೃಶ್ರೀ ಡಿಜಿಟಲ್ ಪ್ರಿಂಟ್, ಜೀನೇಂದ್ರ, ಹರ್ಷ, ಶೆಟ್ಟಪ್ಪ, ಮಂಜುನಾಥ್ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಜನ ಕಲಾವಿದರು ಸುಮಾರು 15ದಿನದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಿಸಿದ್ದಾರೆ.

ಸ್ತಬ್ಧಚಿತ್ರ ವಿನ್ಯಾಸ ಮತ್ತು ನಿರ್ಮಾಣ:
ತಿಪಟೂರುಕೃಷ್ಣ ಮತ್ತು ತಂಡ, ಕಲಾಕೃತಿ, ತಿಪಟೂರು.
9448416550

Tags

Related Articles

Leave a Reply

Your email address will not be published. Required fields are marked *

Language
Close