About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ನಾಳೆ ಬರ ಪೀಡಿತ ಜಿಲ್ಲೆ, ತಾಲೂಕುಗಳ ಘೋಷಣೆ: ಕೃಷಿ ಸಚಿವ ಶಿವಶಂಕರರೆಡ್ಡಿ

ಬೆಂಗಳೂರು: 13 ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿಯಿದೆ. ಮೂರು ಜಿಲ್ಲೆಗಳಲ್ಲಿ‌ ಹೆಚ್ಚು ಮಳೆಯಿಂದ ಹಾನಿಯಾಗಿದೆ. ಹೀಗಾಗಿ ಮಳೆಹಾನಿಗೆ ಸರಕಾರ 200 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದರು.

ಸುದ್ದಿಗೋಷ್ಠಿ ಮಾತನಾಡಿ, ಬಾರಿ ಮಳೆಯಿಂದಾಗಿ ಕೊಡಗಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಸರಕಾರ ಕೊಡಗಿಗೆ 85 ಕೋಟಿ ಹಣ ಬಿಡುಗಡೆ ಮಾಡಿದೆ. ಮಳೆ ಕೊರತೆಯಿಂದ 13 ಜಿಲ್ಲೆ 88 ತಾಲೂಕಿನಲ್ಲಿ ಬೆಳೆ ನಷ್ಟವಾಗಿದೆ. ಬರ ಪೀಡಿತ ಜಿಲ್ಲೆ,ತಾಲೂಕುಗಳ ಘೋಷಣೆಯನ್ನ ನಾಳೆ ಮಾಡ್ತೇವೆ ಎಂದರು.

ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ಆಂಧ್ರದಲ್ಲಿ ಅಧ್ಯಯನವನ್ನ ಮಾಡಿದ್ದೇವೆ. ರಾಸಾಯನಿಕ ಬಳಸದೆ ಬೆಳೆ ಬೆಳೆಯಲು ಚಿಂತನೆ ನಡೆಸಲಾಗಿದ್ದು, ಚಿತ್ರದುರ್ಗ,ತುಮಕೂರು,ಕೋಲಾರ,ಕೊಪ್ಪಳಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಹೇಳಿದರು.

ಸಿಎಂ ಬದಲಾವಣೆ ಕುರಿತಂತೆ ಉಲ್ಟಾ ಹೊಡೆದ ಕೃಷಿ ಸಚಿವ ಶಿವಶಂಕರರೆಡ್ಡಿ. ಸಧ್ಯದ ಪರಿಸ್ಥಿತಿ ಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಸಿಎಂ, ಪರಮೇಶ್ವರ ಡಿಸಿಎಂ ಆಗೇ ಮುಂದುವರಿಯುತ್ತಾರೆ. ಸಮನ್ವಯ ಸಮಿತಿ ಇರೋದು ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಸಿ ಸುಗಮ ಸರಕಾರಕ್ಕೆ ಅನುಕೂಲ ಮಾಡಿಕೊಡಲು ಮಾತ್ರ. ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರ ಸೇರ್ಪಡೆ ಒತ್ತಾಯದ ಬಗ್ಗೆಯೂ ತಮಗೆ ಮಾಹಿತಿ ಇಲ್ಲ ಪಕ್ಷದ ಮಟ್ಟದಲ್ಲಿ ಅದರ ಬಗ್ಗೆ ನಿರ್ಧಾರಗಳಾಗುತ್ತವೆ ಎಂದು ಜಾರಿಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close