About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅವಿಶ್ವಾಸ ಮತಯಾಚನೆ: ಶಿವಸೇನಾದ ಚಂಚಲ ನಡೆ

ದೆಹಲಿ: ಅವಿಶ್ವಾಸಮತ ಯಾಚನೆ ಕುರಿತ ತನ್ನ ನಿಲುವಿನಲ್ಲಿ ದಿನಕ್ಕೊಂದು ಬದಲಾವಣೆ ಮಾಡಿಕೊಳ್ಳುತ್ತಿರುವ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷ ಶಿವಸೇನಾ ಇದೀಗ ಈ ಕುರಿತ ಚರ್ಚೆ ಹಾಗು ಮತನೀಡುವ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿದೆ.

ಈ ಮೂಲಕ ಕೇಂದ್ರ ಸರಕಾರದ ತಮ್ಮ ಮಿತ್ರ ಪಕ್ಷ ಬಿಜೆಪಿ ವಿರುದ್ಧ ಮತದಾನ ಮಾಡುವುದರಿಂದ ಶಿವಸೇನಾ ಹಿಂದೆ ಸರಿದಿದೆ.

ಈ ಕುರಿತು ಮಾತನಾಡಿದ ಶಿವಸೇನಾ ಸಂಸದ ಆನಂದ್‌ರಾವ್‌ ಅದ್ಸುಲ್‌, “ಸಂಸತ್ತಿನ ಇಂದಿ ಕಲಾಪವನ್ನೇ ಬಹಿಷ್ಕರಿಸುತ್ತಿರುವ ನಾವು ನಮ್ಮ ಹಾಜರಾತಿ ದಾಖಲೆಗಳಿಗೆ ಸಹಿ ಮಾಡಿಲ್ಲ” ಎಂದಿದ್ದಾರೆ.

ಅವಿಶ್ವಾಸಮತ ಯಾಚನೆ ವೇಳೆ ಶಿವಸೇನಾ ಮಾತ್ರವಲ್ಲದೇ, ಖುದ್ದು ಅತೃಪ್ತ ಎನ್‌ಡಿಎ ಸಂಸದರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಟಿಡಿಪಿ ಹೇಳಿಕೊಂಡಿತ್ತು. ಇಂದು ಬೆಳಿಗ್ಗೆ ದೆಹಲಿಯಲ್ಲಿ ಸಭೆ ಸೇರಿದ್ದ ಸೇನಾ ವರಿಷ್ಠರು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಮ್ಮ ಸಂಸದರಿಗೆ ವಿಪ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಗುರುವಾರಂದು ಸೇನಾ ತನ್ನ ಸಂಸದರಿಗೆ ವಿಪ್‌ ಜಾರಿ ಮಾಡಿತ್ತು. ಆದರೆ, ಎನ್‌ಡಿಎ ಹಾಗು ಬಿಜೆಪಿ ಮೇಲೆ ಸದಾ ವಾಗ್ದಾಳಿ ನಡೆಸುತ್ತಿದ್ದ ಸ್ವಾಭಿಮಾನಿ ಶೆಟ್ಕರಿ ಸಂಘಟನಾ ಸಂಸದರಾದ ರಾಜು ಶೆಟ್ಟಿರನ್ನು ವಿಶ್ವಾಸಕ್ಕೆ ತೆಗೆದುಕೊಂದ ಕೇಂದ್ರ, ಮಹಾರಾಷ್ಟ್ರದಲ್ಲಿ ಹಾಲು ಖರೀದಿ ಮಾಡುವ ದರ ಏರಿಸಲು ಒಪ್ಪಿಕೊಂಡ ಕಾರಣ ಶಿವಸೇನಾ ತನ್ನ ನಿರ್ಧಾರ ಬದಲಿಸಿದೆ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Language
Close