ಸಚಿವರನ್ನು ಬಡಿದೆಬ್ಬಿಸಲಿ

Posted In : ಸಂಪಾದಕೀಯ-1

ಬೆಂಗಳೂರಲ್ಲಿ ವಾರದಲ್ಲಿ ಮೂರು ಮಂದಿ ಬಲಿ ಪಡೆದ ರಸ್ತೆಗುಂಡಿಗಳನ್ನು ಮುಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಆದೇಶ ನೀಡಿದ್ದಾರೆ. ಹದಿನೈದು ದಿನದಲ್ಲಿ ಗುಂಡಿಗಳನ್ನು ಮುಚ್ಚದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೆಲ್ಲ ಸರಿ. ಆದರೆ ಮೇಲಿಂದ ಮೇಲೆ ಬಲಿ ಪಡೆದ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಬರುವವರೆಗೂ ಕಾಯ್ದುಕೊಂಡು ಕುಳಿತಿದ್ದು ಮಾತ್ರ ಆಡಳಿತ ವ್ಯವಸ್ಥೆಯಲ್ಲಿನ ಲೋಪಕ್ಕೆ ಹಿಡಿದ ಕೈಗನ್ನಡಿಯೇ ಸರಿ.

ಏಕೆಂದರೆ ಬೆಂಗಳೂರಲ್ಲಿ ಮಳೆ ಜತೆ ಅನಾಹುತಗಳ ಸಾಲು ಆರಂಭವಾದಾಗ ನಗರಾಭಿವೃದ್ಧಿ ಸಚಿವ ಜಾರ್ಜ್, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಅವರು ಇದೇ ರೀತಿ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರ ಕ್ರಮಗಳಿಗೆ ಇದೇ ರೀತಿ ಆದೇಶಗಳನ್ನು ಕೊಟ್ಟಿದ್ದರು. ಆದರೆ ಫಲ ಮಾತ್ರ ಶೂನ್ಯವಾಗಿತ್ತು. ಅಧಿಕಾರಿಗಳು ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ವಾಗಿ ಮೂವರು ಅಮಾ ಯಕರು ತಮ್ಮದಲ್ಲದ ತಪ್ಪಿಗೆ ರಸ್ತೆಗುಂಡಿಗೆ ಬಲಿಯಾಗಬೇಕಾಯಿತು. ಮುಖ್ಯಮಂತ್ರಿಗಳ ಆದೇಶವನ್ನು ಹೇಗೆ ತೆಗೆದುಕೊಳ್ಳುತ್ತಾರೋ ನೋಡಬೇಕು. ಇದು ರಾಜಧಾನಿ ಬೆಂಗಳೂರಿನ ಕತೆಯಾಯಿತು. ರಾಜ್ಯಾಡಳಿತ ಕೇಂದ್ರ ಪ್ರದೇಶ ವಾದ್ದರಿಂದ ನೊಂದವರ ಕೂಗು ಹತ್ತಿರದಲ್ಲೇ ಇದ್ದ ಮುಖ್ಯಮಂತ್ರಿ ಕಿವಿಗೆ ಬಿದ್ದು ಕ್ರಮ ತೆಗೆದುಕೊಂಡರು. ಇದು ಸ್ವಾಗತಾ ರ್ಹವೇ. ಆದರೆ ರಾಜ್ಯದ ಇತರೆಡೆ ಅನೇಕ ನಗರಗಳು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿಯೂ ಇದೇ ರೀತಿ ರಸ್ತೆಗಳು ಬರೀ ಮಳೆಯೊಂದೇ ಅಲ್ಲ ನಾನಾ ಕಾರಣಗಳಿಂದ ಕಿತ್ತೆದ್ದು ಹೋಗಿವೆ.

ಕೆಲವು ಜಿಲ್ಲಾಡಳಿತ ಕೇಂದ್ರಗಳಲ್ಲಂತೂ ರಸ್ತೆಗಳು ಕುರುಹೂ ಇಲ್ಲದಂತೆ ಹಾಳಾಗಿವೆ. ರಾಯಚೂರು ನಗರದ ಮುಖ್ಯರಸ್ತೆ ದುರಸ್ತಿ ಎರಡು ವರ್ಷ ಕಳೆದರೂ ಮುಗಿದಿಲ್ಲ. ಬೆಂಗಳೂರು ಬಿಟ್ಟು ಉಳಿದ ಕಡೆ ಜನರ ಗೋಳು ಕೇಳುವವರು ಯಾರು? ಜಿಲ್ಲಾಾ ಉಸ್ತುವಾರಿ ಸಚಿವರುಗಳು ಹೆಸರಿಗೆ ಮಾತ್ರ ಇದ್ದವರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರಲ್ಲೇ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಬರಬೇಕು ಎನ್ನುವುದಾದರೆ ಉಳಿದ ಕಡೆ ಪರಿಸ್ಥಿತಿಯನ್ನು ವಿವರಿಸುವುದೇ ಬೇಡ. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡುವುದರ ಜತೆಗೆ ಸಂಬಂಧಪಟ್ಟ ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನು ಬಡಿದೆಬ್ಬಿಸಿ, ಸಮಸ್ಯೆ ಸ್ಥಳಕ್ಕೆ ಅಟ್ಟಿ, ಪರಿಹಾರ ಕಲ್ಪಿಸು ವುದು ಸೂಕ್ತ.

ಲಂಪಟನಿಗೆ ತಕ್ಕ ಶಿಕ್ಷೆ

ಉಗ್ರ ಸಂಘಟನೆ ಜೈಶೆ ಮೊಹಮ್ಮದ್ ಕಾರ್ಯಾಚರಣೆ ಮುಖ್ಯಸ್ಥ ಖಾಲಿದ್‌ ನನ್ನು ಭಾರತೀಯ ಭದ್ರತಾ ಪಡೆಗಳು ಸೋಮವಾರ ಹೊಡೆದುರುಳಿಸಿವೆ. ಯೋಧರಿಗೇ ಚಳ್ಳೆಹಣ್ಣು ತಿನ್ನಿಸುತ್ತ, ಪಾಕಿಸ್ತಾನಿ ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದ ಖಾಲಿದ್ ಪ್ರಾಣಕ್ಕೆ ಎರವಾಗಿದ್ದು ಒಬ್ಬಳು ಕಾಶ್ಮೀರಿ ತರುಣಿ ಎಂದರೆ ನಂಬಲೇಬೇಕು. ಹಾಗೆಯೇ ಹೆಣ್ಣೊಬ್ಬಳು ಮುನಿದರೆ ಏನೂ ಮಾಡಿಯಾಳು ಎನ್ನುವುದನ್ನೂ ಈ ಘಟನೆ ಮತ್ತೊಮ್ಮೆ ನಿರೂಪಿಸಿದೆ. ಯುವತಿ ಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಖಾಲಿದ್, ವರ್ಷದ ಹಿಂದೆ ಆಕೆ ಗರ್ಭಿಣಿ ಎನ್ನುವುದನ್ನು ತಿಳಿದಾಗ ನಿರ್ದಾಕ್ಷ್ಯಿಣ್ಯವಾಗಿ ಗರ್ಭಪಾತ ಮಾಡಿಸಿದ್ದಲ್ಲದೇ; ಆಕೆ ಯನ್ನೂ ದೂರ ತಳ್ಳಿದ್ದ. ಅಂದಿನಿಂದಲೂ ಆತನ ಸಾವಿನ ಸಂಕಲ್ಪ ಮಾಡಿದ್ದ ಸಂತ್ರಸ್ತ ಯುವತಿಯು ಖಾಲಿದ್ ಇರುವಿನ ಬಗ್ಗೆ ಭದ್ರತಾ ಪಡೆಗಳಿಗೆ ಆಗಾಗ ಮಾಹಿತಿ ನೀಡುತ್ತಲೇ ಇದ್ದಳು. ಆತ ಕೈ ಕೊಡದೇ ಇದ್ದರೆ ಹಾಗೆ ಮಾಡುತ್ತಿದ್ದಳೋ, ಇಲ್ಲವೋ ಎಂಬುದು ಬೇರೆ ಪ್ರಶ್ನೆ. ಆದರೆ ಕೆಲವು ಸಲ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದ ಖಾಲಿದ್ ನನ್ನು ಈ ಸಲ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಭಾರತಕ್ಕೆ ದೊಡ್ಡದೊಂದು ತಲೆನೋವು ನಿವಾರಣೆಯಾಯಿತು ನಿಜ, ಇದರ ಶ್ರೇಯ ಮಾತ್ರ ಸಂತ್ರಸ್ತ ಯುವತಿಗೇ ಸಲ್ಲಬೇಕು.

One thought on “ಸಚಿವರನ್ನು ಬಡಿದೆಬ್ಬಿಸಲಿ

  1. dhummikkuva nadi sagara dadagalallu nirina arbhata nodutteve andare adindu KOTI JANARIRUVA bengalurigarannu nidde gediside!!
    2. repairgagi bhageetaratha prayatnave mukhya!!

Leave a Reply

Your email address will not be published. Required fields are marked *

9 + 16 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top