About Us Advertise with us Be a Reporter E-Paper

Breaking Newsವಿದೇಶ

ಶ್ರೀಲಂಕಾ ಸಂಸತ್‌ ವಿಸರ್ಜಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ

ಕೊಲಂಬೊ: ಮಹತ್ವದ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಶ್ರೀಲಂಕಾ ಸಂಸತ್‌ಅನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಿಸರ್ಜನೆ ಮಾಡಿದ್ದಾರೆ.

ಸಂಸತ್ತಿನಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆೆ ಬಹುಮತ ಸಾಬಿತುಪಡಿಸಲು ವಿಫಲರಾದ ನಂತರ ಅಧ್ಯಕ್ಷ ಸಿರಿಸೇನ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಜತೆಗೆ 2019ರ ಜನವರಿ 5ಕ್ಕೆೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದೂ ತಿಳಿಸಿದ್ದಾರೆ. ಸಂಸತ್ತಿನ ಅವಧಿ 2021ಕ್ಕೆೆ ಪೂರ್ಣಗೊಳ್ಳಬೇಕಿತ್ತು. ಆದರೆ ಎರಡು ವರ್ಷ ಮೊದಲೇ ಚುನಾವಣೆ ನಡೆಯಲಿದೆ.

ಪ್ರಧಾನಿ ಪಟ್ಟಕ್ಕೆೆ ಪೈಪೋಟಿ ನಡೆಯುತ್ತಿದ್ದರಿಂದ ಅತಂತ್ರ ಸಂಸತ್ ನಿರ್ಮಾಣವಾಗಿದೆ. 2015ರಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಬೆಂಬಲಿಸಿದ್ದರು. ಪ್ರಧಾನಿ ರನಿಲ್ ಅವರನ್ನು ಅಕ್ಟೋಬರ್ 22ರಂದು ಪದಚ್ಯುತಗೊಳಿಸಿ ಪ್ರಧಾನಿ ಹುದ್ದೆೆಗೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷೆೆ ಅವರನ್ನು ನೇಮಿಸಲಾಗಿತ್ತು. ಅಧ್ಯಕ್ಷರ ಈ ನಡೆ ತೀವ್ರ ವಿರೋಧಕ್ಕೆೆ ಕಾರಣವಾಗಿತ್ತು. ಸಂಸತ್ತನ್ನು ಅಮಾನತಿನಲ್ಲಿಟ್ಟ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದ ಸ್ಪೀಕರ್ ಈ ಸಂಪ್ರದಾಯ ಅಪಾಯಕಾರಿ ಬೆಳವಣಿಗೆ ಎಂದು ಟೀಕಿಸಿದ್ದರು.

ಬಹುಮತ ಸಾಬೀತುಪಡಿಸುವಂತೆ ವಿಕ್ರಮಸಿಂಘೆ ಒತ್ತಾಯಿಸಿದ್ದರಿಂದ ನವಂಬರ್ 9ರಂದು ಮಹಿಂದ ರಾಜಪಕ್ಸೆೆ ವಿಶ್ವಾಸ ಮತಯಾಚಿಸಿದ್ದರು. ಆದರೆ ಬಹುಮತ ಸಾಬೀತುಪಡಿಸುವಲ್ಲಿ ಅವರು ವಿಫಲರಾದರು. ವಿಕ್ರಮಸಿಂಘೆ ಅವರಿಗೆ 120 ಸದಸ್ಯರು ಮತ್ತು ರಾಜಪಕ್ಸೆೆಗೆ 104 ಸದಸ್ಯರ ಬೆಂಬಲ ವ್ಯಕ್ತವಾಯಿತು. ಸ್ಪೀಕರ್ ಯಾವುದೇ ಪಕ್ಷದ ಪರವಾಗಿ ನಿಲ್ಲುವಂತಿಲ್ಲ. ಶ್ರೀಲಂಕಾ ಸಂಸತ್ 225 ಸದಸ್ಯರ ಬಲ ಹೊಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close