About Us Advertise with us Be a Reporter E-Paper

Breaking Newsರಾಜ್ಯ

ಸಿದ್ದಗಂಗಾ ಮಠದಿಂದ ಫ್ರೀಡಂ ಪಾರ್ಕ್‌ವರೆಗೆ ಜಾಥಾ…!

ಹೊರಟ್ಟಿ ವರದಿ ಜಾರಿಗೆ ಒತ್ತಾಯಿಸಿ ಜಾಥಾ

ತುಮಕೂರು: ಬಸವರಾಜ ಹೊರಟ್ಟಿ ವರದಿ ಮತ್ತು ಪಿಂಚಣಿ ಯೋಜನೆ ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ, ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಗುರುವಾರ ಜಾಥಾ ಹೊರಟರು.

01-04-2006 ಕ್ಕಿಂತ ಮೊದಲೇ ನೇಮಕ ಹೊಂದಿದ್ದ, ತದನಂತರ ಅನುದಾನಕ್ಕೆ ಒಳಪಟ್ಟಿರುವ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ನಿವೃತ್ತಿ ನಂತರ ನಿವೃತ್ತಿ ವೇತನ ಮಧುಗಿರಿ, ಕೊರಟಗೆರೆ, ರಾಯಚೂರು, ಬಳ್ಳಾರಿ ಹಾಗು ವಿವಿಧ ಕಡೆಯಿಂದ ಬಂದಿದ್ದಂತಹ ಶಿಕ್ಷಕರು ಶ್ರೀ ಸಿದ್ದಲಿಂಗ ಸ್ವಾಮೀಯವರ ಆಶೀರ್ವಾದ ಪಡೆದು ಜಾಥಾ ಹೊರಟರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ್, ಹಿಂದೆ ಇದ್ದಂತಹ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಬಸವರಾಜ ಹೊರಟ್ಟಿ ಅವರು ನೀಡಿರುವ ವರದಿಯನ್ನು ಸರ್ಕಾರ ಜಾರಿಗೆ ತರಬೇಕು. ಪಿಂಚಣಿ ಇಲ್ಲದೆ ನಿವೃತ್ತಿ ನಂತರ ನಾವು ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಪ್ರಾಣವನ್ನು ಬಿಡುತ್ತೇವೆ, ಪಿಂಚಣಿ ಬಿಡುವುದಿಲ್ಲ. ನಮ್ಮ ಬಗ್ಗೆ ಸರ್ಕಾರ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಅನುದಾನಿತ ಶಿಕ್ಷಕರನ್ನು ಮಲತಾಯಿ ಧೋರಣೆಯಿಂದ ಸರ್ಕಾರ ನೋಡುತ್ತಿರುವುದು ಸರಿಯಲ್ಲ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close