About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಸಿದ್ದಗಂಗಾ ಶ್ರೀಗಳಿಗೆ ಕೃತಕ ಉಸಿರಾಟ ಮುಂದುವರಿಕೆ ಅವಶ್ಯ: ಡಾ.ಮಂಜುನಾಥ್

ತುಮಕೂರು: ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ನೇತೃತ್ವದಲ್ಲಿ ಶುಕ್ರವಾರ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಲಾಯಿತು.

ರಾಜೀವಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸಿಸಸ್ನ ನಿರ್ದೇಶಕ ಡಾ.ನಾಗರಾಜ್, ಜಯದೇವ ಆಸ್ಪತ್ರೆ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಎನ್. ಮಂಜುನಾಥ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಡಾ. ರವಿ ಅರ್ಜುನ್ ಅವರ ತಂಡ ಶ್ರೀಗಳ ತಪಾಸಣೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಂಜುನಾಥ್, ”ಶ್ರೀಗಳಿಗೆ ಸ್ವಂತ ಉಸಿರಾಟ ಶಕ್ತಿ ಕಡಿಮೆ ಇದೆ. ಕೃತಕ ಉಸಿರಾಟ ಮುಂದುವರಿಸುವ ಅವಶ್ಯಕತೆ ಇದೆ. ಹೃದಯಬಡಿತ, ನಾಡಿಮಿಡಿತ, ರಕ್ತದೊತ್ತಡ ಸ್ಥಿರವಾಗಿದೆ. ಆದಷ್ಟು ಬೇಗ ಗುಣಮುಖರಾಗುವ ಆಶಾಭಾವನೆ‌ ಇದೆ‌” ಎಂದು ಹೇಳಿದ್ರು.

ಇನ್ನು  ”ಬಿಜಿಎಸ್ ಹಾಗೂ ರೇಲಾ ವೈದ್ಯರು ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಶ್ರೀಗಳನ್ನ ಬೇರೆ ಕಡೆ  ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಪ್ರೋಟೀನ್ ಅಂಶ ಏರಿಕೆಯಾಗಿದೆ‌, ಸೋಂಕು ಸಹ ಕಡಿಮೆಯಾಗಿದೆ‌.  ಉಸಿರಾಟದ ಶಕ್ತಿ ಕಡಿಮೆಯಾಗಿರುವುದರಿಂದ ಅವರಿಗೆ ಇನ್ನು ಹೆಚ್ಚು ದಿನಗಳ ಕಾಲ  ಚಿಕಿತ್ಸೆ ಅವಶ್ಯಕತೆ‌ ಇದೆ. ಶ್ರೀಗಳ ಚಿಕಿತ್ಸೆ ಬಗ್ಗೆ ಕಾಲವೇ ನಿರ್ಧರಿಸುತ್ತೆ‌. ಅವ್ರ ಬೆನ್ನು ಬಾಗಿರೋದ್ರಿಂದ ಲಂಗ್ಸ್ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಡಾ. ಮಂಜುನಾಥ್​ ಮಾಹಿತಿ ನೀಡಿದ್ರು.

Tags

Related Articles

Leave a Reply

Your email address will not be published. Required fields are marked *

Language
Close