ಜಯನಗರ ಗೆಲುವು ಕಾಂಗ್ರೆಸ್ ಪಕ್ಷದ ಜಯ

Posted In : ಮೈಸೂರು, ರಾಜ್ಯ

ಮೈಸೂರು: ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಗೆಲುವು ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಗೆಲುವಲ್ಲ. ಈ ಫಲಿತಾಂಶವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಮೈಸೂರಿನಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಚುನಾವಣೆ ನಡೆದಿದ್ದರೆನಾವೇ ಈಗಲೂ ನಾವೇ ಗೆದ್ದಿದ್ದೇವೆ. ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಗೆಲುವಾಗಿದೆ ಎಂದರು. ಬಿಜೆಪಿಯ ಅಭ್ಯರ್ಥಿಗಿಂತ ನಮ್ಮ ಪಕ್ಷದ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರು ತುಂಬಾ ಕ್ರೀಯಶೀಲರಾಗಿದ್ದು, ಒಳ್ಳೆಯ ಕೆಲಸ ಮಾಡುತ್ತಾ ತುಂಬಾಚುುರುಕಾಗಿ ಓಡಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇದು ನಿರೀಕ್ಷಿತ ಫಲಿತಾಂಶವಾಗಿದೆ. ಗೆಲ್ಲುವ ವಿಶ್ವಾಸ ಮೊದಲೇ ಲಭಿಸಿತ್ತು ಎಂದು ಹೇಳಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 78 ಸ್ಥಾನ ಬಂದಿರುವುದರಿಂದ ರಾಜ್ಯದ ಜನತೆಯ ಅನುಕಂಪ ಕಾಂಗ್ರೆಸ್ ಪಕ್ಷದ ಮೇಲೆ ಇದೆಯೇ ಹೊರತು, ಪಕ್ಷದ ಮೇಲೆ ಇಲ್ಲ. ಅಧಿಕಾರಕ್ಕಾಗಿ ಬಿಜೆಪಿ ಅಡ್ಡದಾರಿ ಹಿಡಿಯುವ ಪ್ರಯತ್ನ ಮಾಡಿತು. ನಮ್ಮ ಇಬ್ಬರು ಶಾಸಕರನ್ನು ಸಹ ಬುಕ್ ಮಾಡಿತ್ತು. ಆದರೆ, ಬಹುಮತ ಸಿಗದ ಕಾರಣ ಅವರನ್ನು ವಾಪಸ್ಸು ಕಳುಹಿಸಿತು. ನಿಜವಾಗಿ ಜನರ ಅನುಕಂಪ ಇರುವುದು ನಮ್ಮ ಪಕ್ಷದ ಮೇಲೆ ಎಂದು ಹೇಳಿದರು.

Leave a Reply

Your email address will not be published. Required fields are marked *

11 + 9 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top