ವಿಶ್ವವಾಣಿ

ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಸಿದ್ಧ: ಸಿದ್ಧರಾಮಯ್ಯ

ಹಾಸನ: ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಮನದಾಳದ ಇಂಗಿತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,”ಜನತೆಯ ಆಶೀರ್ವಾದ ನನ್ನ ಮೇಲಿದ್ದರೆ ಇನ್ನೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ” ಎಂದಿದ್ದಾರೆ.

ಮೇನಲ್ಲಿ ನಡೆದ ವಿಧಾನ ಸಭಾ ಚುನಾವಣೆ ಬಳಿಕ ತಮ್ಮ ರಾಜಕೀಯ ವೈರಿಗಳು ಕೈಜೋಡಿಸಿದ ಪರಿಣಾಮ ತಾವು ಇನ್ನೊಂದು ಅವಧಿಗೆ ಮುಖ್ಯಮಂತ್ರಿಯಾಗಲಿಲ್ಲ ಎಂದ  ಸಿದ್ಧರಾಮಯ್ಯ, “ಕಾಲ ಚಕ್ರ ಎಂಬುದೊಂದಿದೆ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ  ಹೋಗಲೇಬೇಕು” ಎಂದು ಹೊಳೆನರಸೀಪುರ ತಾಲ್ಲೂಕಿನ ದೇವಸ್ಥಾನವೊಂದರಲ್ಲಿ  ಸಿದ್ಧರಾಮಯ್ಯ ಹೇಳಿದ್ದಾರೆ.

“ರಾಜಕೀಯ ಎಂಬುದು ಹರಿಯುವ ನೀರು, ಇಲ್ಲಿ ಯಾವುದೂ ಸ್ಥಿರವಲ್ಲ. ಬದಲಾವಣೆಯೊಂದು ಆಗಬೇಕು. ಹಿನ್ನಡೆಯಾಗಿದೆ ಎಂದು ಸುಮ್ಮನೇ ಕೂರುವ ಆಸಾಮಿ ನಾನಲ್ಲ, ನಾನು ಮರಳಿ ಬರಲಿದ್ದೇನೆ” ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.