About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸಿಕ್ಕಿಂ​​ನ ಪ್ರಥಮ ವಿಮಾನ ನಿಲ್ದಾಣ ಲೋಕಾರ್ಪಣೆ

ಗ್ಯಾಂಗ್​ಟಾಕ್​​​: ಸಿಕ್ಕಿಂ​​ನ ಪ್ರಥಮ ವಿಮಾನ ನಿಲ್ದಾಣ ಸೋಮವಾರ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಗ್ಯಾಂಗ್‍ಟಾಕ್‍ನಲ್ಲಿ ಪಕ್ಯಾಂಗ್ ನ್ಯೂ  ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟಿಸಿದರು.

ಏರ್‌ಪೋರ್ಟ್‌ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಭಾನುವಾರದಂದು ಸಿಕ್ಕಿಂ​ ರಾಜಧಾನಿ ಗ್ಯಾಂಗ್​ಟಾಕ್​​ಗೆ ತೆರಳಿದ್ದರು. ಈವರೆಗೆ ಸಿಕ್ಕಿಂ​​​, ದೇಶದಲ್ಲಿ ಕಾರ್ಯನಿರತ ಏರ್‌ಪೋರ್ಟ್‌ ಇಲ್ಲದ ಏಕೈಕ ರಾಜ್ಯವಾಗಿತ್ತು. ಈಗ ಇಲ್ಲಿ ಏರ್‌ಪೋರ್ಟ್‌ ನಿರ್ಮಾಣವಾಗಿರೋದ್ರಿಂದ ಸಿಕ್ಕಿಂ​​  ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. 605 ಕೋಟಿ ರೂ. ವೆಚ್ಚದಲ್ಲಿ ಈ ವಿಮಾನ ನಿಲ್ದಾಣ​ ನಿರ್ಮಾಣ ಮಾಡಲಾಗಿದೆ. ಪಕ್ಯಾಂಗ್​ ಗ್ರಾಮದಿಂದ 2 ಕಿ.ಮೀ ಎತ್ತರದಲ್ಲಿರುವ ಬೆಟ್ಟದ ಮೇಲೆ ನಿರ್ಮಿಸಲಾಗಿರೋ ಈ ವಿಮಾನ ನಿಲ್ದಾಣ​ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ.

ಸಿಕ್ಕಿಂ ರಾಜ್ಯಕ್ಕೆ  ಯಾವುದೇ ರೈಲು ಸಂಪರ್ಕವಿಲ್ಲ, ಪಶ್ಚಿಮ ಬಂಗಾಳದ  ಬಾಗ್ದೋದ್ರಾ ವಿಮಾನ ನಿಲ್ದಾಣ 125 ಕಿಮೀ ದೂರದಲ್ಲಿದೆ. ಇದೀಗ ಸಿಕ್ಕಿಂನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದ್ದು, ಅಕ್ಟೋಬರ್ 4 ರಿಂದ ಕಮರ್ಷಿಯಲ್ ವಿಮಾನಗಳು ಹಾರಾಟ ನಡೆಸಲಿವೆ.

Tags

Related Articles

Leave a Reply

Your email address will not be published. Required fields are marked *

Language
Close