About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸಿಂಗಪುರ ಪ್ರಧಾನಿ ಹಾಗೂ ಅಮೆರಿಕ ಉಪಾಧ್ಯಕ್ಷರನ್ನು ಭೇಟಿಯಾದ ಮೋದಿ

ಸಿಂಗಪುರ: ಆಗ್ನೇಯ ಏಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಹ್ಸಿಯೆನ್‌ ಲೂಂಗ್‌ರನ್ನು ಭೇಟಿ ಮಾಡಿದ್ದಾರೆ.

ವಿತ್ತೀಯ ತಂತ್ರಜ್ಞಾನ ಹಾಗು ಪ್ರಾದೇಶಿಕ ಆರ್ಥಿಕ ಸಹಕಾರ ಸೇರಿದಂತೆ ಈ ಸಂದರ್ಭ ಅನೇಕ ವಿಚಾರಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ವಿತ್ತೀಯ ತಂತ್ರಜ್ಞಾನ ಸಂಬಂಧಿತ, ಜಗತ್ತಿನ ಅತಿ ದೊಡ್ಡ ಸಮಾರಂಭದಲ್ಲಿ ಭಾಗವಹಿಸಿರುವ ಪ್ರಧಾನಿ, “ವಿತ್ತೀಯ ತಂತ್ರಜ್ಞಾನ ಹಾಗು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಭಾರತ ಪ್ರಶಸ್ತ ತಾಣವಾಗಿದೆ” ಎಂದು ಜಗತ್ತಿನ ಅಗ್ರ ಉದ್ಯಮಿಗಳಿಗೆ ಪ್ರಧಾನಿ ಮನದಟ್ಟು ಮಾಡಿಕೊಟ್ಟಿದ್ದಾರೆ.

ಪೂರ್ವ ಏಷ್ಯಾ ಶೃಂಗದ ಸಂದರ್ಭ ಲೀರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ ಪ್ರಧಾನಿ, ಇದೇ ವೇಳೆ ಅಮೆರಿಕ  ಉಪಾಧ್ಯಕ್ಷ ಮೈಕ್‌ ಪೆನ್ಸ್‌ರನ್ನೂ ಭೇಟಿ ಮಾಡಿದ್ದು, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ ಹಾಗು ಸ್ವತಂತ್ರ ನೌಕಾಯಾನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ತಮ್ಮ ಪ್ರವಾಸ ಆರಂಭಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ, “ಪೂರ್ವ ಏಷ್ಯಾ, ಆಗ್ನೇಯ ಏಷ್ಯಾಗಳಲ್ಲಿ ನಮ್ಮ ಪ್ರಭಾವ ವೃದ್ಧಿಸಿಕೊಳ್ಳುವ ಮೂಲಕ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಇನ್ನಷ್ಟು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಬೇಕಿದೆ” ಎಂದು ಸೂಚ್ಯವಾಗಿ ತಿಳಿಸಿದ್ದರು.

ಇದೇ ಸಂದರ್ಭ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ಈ ವರ್ಷದ ಗಣತಂತ್ರೋತ್ಸವಕ್ಕೆ ಆಸಿಯಾನ್‌ ಒಕ್ಕೂಟದ ನಾಯಕರನ್ನು ಗಣ್ಯ ಅತಿಥಿಗಳನ್ನಾಗಿ ಪ್ರಧಾನಿ ಆಹ್ವಾನಿಸಿದ್ದರು. ಭಾರತದ Act East ನೀತಿಗೆ ಮತ್ತಷ್ಟು ಬಲ ಸೇರಿಸುವ ನಿಟ್ಟಿನಲ್ಲಿ ಪ್ರಧಾನಿಯ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ.

Tags

Related Articles

Leave a Reply

Your email address will not be published. Required fields are marked *

Language
Close