About Us Advertise with us Be a Reporter E-Paper

Breaking Newsರಾಜ್ಯ
Trending

ಶಿರಸಿಯಲ್ಲಿ ದಿ.ರಾಮಕೃಷ್ಣ ಹೆಗಡೆಯವರ ಸಂಸ್ಮರಣೆ ಕಾರ್ಯಕ್ರಮ (ವಿಡಿಯೊ)

ಶಿರಸಿ: ದಿ.ರಾಮಕೃಷ್ಣ ಹೆಗಡೆಯವರ ಸಂಸ್ಮರಣೆ ಕಾರ್ಯಕ್ರಮವನ್ನು ಶಿರಸಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು. ಮಾಜಿ ಸಚಿವ ಎಚ್.ಕೆ.ಪಾಟೀಲ್ ರಾಮಕೃಷ್ಣ ಹೆಗಡೆಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ದಿ.ರಾಮಕೃಷ್ಣ ಹೆಗಡೆಯವರ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಎಚ್.ಕೆ.ಪಾಟೀಲ್, ರಾಜಕಾರಣ ಇರುವವರೆಗೂ ರಾಮಕೃಷ್ಣ ಹೆಗಡೆಯವರು ಇರುತ್ತಾರೆ. ರಾಜಕೀಯವನ್ನು ಮೌಲ್ಯಯುತಗೊಳಿಸಿ, ಮೌಲ್ಯಾಧಾರಿತ ರಾಜಕಾರಣಿಯಾದ ಅವರು ಎಂದೂ ಭಾಷಣದ ವ್ಯಕ್ತಿಯಾಗಿರಲಿಲ್ಲ ಎಂದು ಹೇಳಿದ್ರು. ಹೇಗೆ ಬಂತೊ ಹಾಗೆ ಹೋಗುವ ರಾಜಕೀಯ ನಡೆ ಸರಿಯಲ್ಲ. ರಾಮಕೃಷ್ಣ ಹೆಗಡೆಯವರಂತ ವ್ಯಕ್ತಿಗಳ ರಾಜಕೀಯ ನಡೆಯ ಬಗ್ಗೆ ಚಿಂತನೆ, ಚರ್ಚೆಗಳು ನಡೆಯಬೇಕು. ಇತಿಹಾಸ ಎಂದೂ ಬಚ್ಚಿಡಬಾರದು ಅದಕ್ಕೊಂದು ಹೊಸ ರೂಪ ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಪಿ.ಜಿ.ಆರ್.ಸಿಂಧ್ಯಾ, ಎಂ.ಕೆ.ಭಾಸ್ಕರ್ ರಾವ್, ಪ್ರಮೋದ ಹೆಗಡೆ, ವೆಂಕಟೇಶ ಹೆಗಡೆ ಹೊಸಬಾಳೆ, ಎಂ.ಆರ್.ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close