About Us Advertise with us Be a Reporter E-Paper

ಸಿನಿಮಾಸ್

‘ಸೀತಾರಾಮ ಕಲ್ಯಾಣ’ ಶೂಟಿಂಗ್ ಕಂಪ್ಲೀಟ್

ಜಾಗ್ವಾರ್ ಸಿನಿಮಾದ ಬಳಿಕ ನಿಖಿಲ್ ಕುಮಾರಸ್ವಾಮಿ ‘ಸೀತಾರಾಮ ಕಲ್ಯಾಣ’ ಅನ್ನೋ ಅಪ್ಪಟ ಸ್ವಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಚಿತ್ರವನ್ನು ಎ ಹರ್ಷ ನಿರ್ದೇಶನ ಮಾಡುತ್ತಿರುವುದು ವಿಶೇಷ. ಖ್ಯಾತ ನಿರ್ಮಾಣ ಸಂಸ್ಥೆ ಚೆನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ‘ಸೀತಾರಾಮ ಕಲ್ಯಾಣ’ದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಸುಮಾರು ದಿನಗಳ ಕಾಲ ಬೆಂಗಳೂರು, ಮೈಸೂರು, ಊಟಿ, ಬಳ್ಳಾರಿ ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆಸಿದ್ದ ‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸುನೀಲ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.ಅನೂಪ್ ರುಬೆನ್‌ಸ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ವಾಮಿ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ ಹಾಗೂ ರಾಮ್ ಲಕ್ಷ್ಮಣ್ ಸಾಹಸ, ರಘು ನಿಡುವಳ್ಳಿ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ನಾಯಕಿಯಾಗಿ ನಟಿಸಿದ್ದು, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೊಕೇಶ್,್ ಚಿಕ್ಕಣ್ಣ, ಆದಿತ್ಯ ಮೆನನ್, ಜ್ಯೋತಿ ರೈ, ನಯನ, ಶಿವರಾಜ್ ಕೆ.ಆರ್.ಪೇಟೆ, ಜೀವನ್, ವೀಣಾ ಪೊನ್ನಪ್ಪ, ರವಿ ಭಟ್, ಸವಿತಾ, ಗಿರೀಶ್ ಜತ್ತಿ, ಹರೀಶ್, ಸಂಜು ಬಸಯ್ಯ ಮುಂತಾದ ಕಲಾವಿದರು ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಅಭಿನಯಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್.

Tags

Related Articles

Leave a Reply

Your email address will not be published. Required fields are marked *

Language
Close