ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯ ವೇಳೆ ಸ್ಮಾರ್ಟ್ ಫೋನ್ ಬಳಕೆಗೆ ನಿಷೇಧ

Posted In : ದೇಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಉಪಕರಣಗಳ ಕಳವು ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಕಾರಣಕ್ಕೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಸ್ಮಾರ್ಟ್ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಪೊಲೀಸರು ತಮ್ಮ ಕರ್ತವ್ಯದ ಅವಧಿಯಲ್ಲಿ ಸ್ಮಾರ್ಟ್ ಫೋನ್ ಬಳಕೆಯಲ್ಲಿ ತಲ್ಲೀನರಾಗುವುದರಿಂದಾಗಿ ಕಳ್ಳಕಾಕರ ಮೇಲೆ ನಿಗಾ ವಹಿಸುವಲ್ಲಿ ಎಡವುತ್ತಿದ್ದಾರೆ. ಇದರಿಂದಾಗಿ ದುಷ್ಕರ್ಮಿಗಳಿಗೆ ಮತ್ತು ಕಳ್ಳರಿಗೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವುದಕ್ಕೆ ಸುಲಭವಾಗುತ್ತಿದೆ ಎಂಬ ಕಾರಣಕ್ಕೆ ಇಲಾಖೆ ಈ ಆದೇಶ ಹೊರಡಿಸಿದೆ. ಹಂತದ ಸಿಬ್ಬಂದಿಗಳಿಂದ ಹಿಡಿದು, ಅಧಿಕಾರಿಗಳು ಮತ್ತು ಪ್ರಮುಖ ವ್ಯಕ್ತಿಗಳ ಭದ್ರತಾ ಸಿಬ್ಬಂದಿಗಳೂ ತಮ್ಮ ಕರ್ತವ್ಯದ ಅವಧಿಯಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡಬಾರದು ಎಂಬುದಾಗಿ ಕಾಶ್ಮೀರ ಪೊಲೀಸ್ ಎಡಿಜಿಪಿ ಎಕೆ ಚೌಧರಿ ಪ್ರಕಟಣೆ ಹೊರಡಿಸಿದ್ದಾರೆ.

ಪೊಲೀಸರು ಕರ್ತವ್ಯದ ವೇಳೆಯಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ. ಈ ಸಮಯವನ್ನು ಸಾಧಿಸಿ ಕಳ್ಳರು ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗುತ್ತಾರೆ. ಇದು ಪೊಲೀಸರಿಂದ ನಡೆಯುತ್ತರುವ ಅಶಿಸ್ತಾಗಿದೆ. ಈ ಕ್ರಮವನ್ನು ಸಹಿಸಲಸಾಧ್ಯ. ಅದರಿಂದಾಗಿ ಈ ಆದೇಶ ಚೌಧರಿ ತಿಳಿಸಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಸ್ಮಾರ್ಟ್ ಫೋನ್ ಕೊಂಡೊಯ್ಯುವುದನ್ನೂ ಈ ಆದೇಶದಲ್ಲಿ ನಿಷೇಧಿಸಲಾಗಿದೆ. ಹಾಗೆಯೇ ಭದ್ರತಾ ಸಿಬ್ಬಂದಿಗಳು ಕಡ್ಡಾಯವಾಗಿ ಬುಲೆಟ್ ಪ್ರೂಫ್ ಗೇರ್ ಮತ್ತು ತಮಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಕಡ್ಡಾಯವಾಗಿ ಒಯ್ಯುವಂತೆಯು ಈ ಆದೇಶದಲ್ಲಿ ತಿಳಿಸಲಾಗಿದೆ. ಸಮವಸ್ತ್ರದ ವಿಚಾರದಲ್ಲಿಯೂ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಪ್ರಾಂತೀಯ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

fourteen − twelve =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top