About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಹುಲ್‌ ಏಟಿಗೆ ಸ್ಮೃತಿ ಇರಾನಿ ತಿರುಗೇಟು

ದೆಹಲಿ: ಜನಸಮೂಹ ಮಾಡಿದ ಹತ್ಯೆ ಬಗ್ಗೆ ಟ್ವೀಟ್ ಮಾಡಿ ಮೋದಿ ಸರಕಾರವನ್ನು ಟೀಕಿಸಿದ ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್‌ಗೆ ತಿರುಗೇಟು ನೀಡಿರುವ ಇರಾನಿ ಅವರು, 1984ರ ಸಿಖ್ ದಂಗೆ, ಬಾಗಲ್‌ಪುರ, ನಿಲ್ಲೆ ದಂಗೆಗಳಿಗೆ ರಾಹುಲ್ ಗಾಂಧಿ ಕುಟುಂಬದ ದ್ವೇಷ ರಾಜಕಾರಣ ಕಾರಣ ಎಂದಿದ್ದಾರೆ.

ರಾಹುಲ್ ಗಾಂಧಿಯ ರಾಜಕಾರಣವನ್ನು ರಣಹದ್ದಿನಂತಹಾ ಕ್ರೂರ ರಾಜಕಾರಣ ಎಂದು ಕರೆದಿರುವ ಸ್ಮೃತಿ ಇರಾನಿ, ಅವರ ಕುಟುಂಬ ಪ್ರಾರಂಭ ಮಾಡಿದ ದ್ವೇಷ ರಾಜಕಾರಣವನ್ನು ಮುಂದುವರೆಸಿದ್ದಾರೆ ಎಂದಿದ್ದಾರೆ. ಚುನಾವಣಾ ಲಾಭಕ್ಕಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಛಿದ್ರಗೊಳಿಸಲು ಅವರು ಪ್ರಯತ್ನಿಸದೇ ಇರುವ ಒಂದೇ ಒಂದು ಉದಾಹರಣೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಗೋರಕ್ಷಕರು ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತನಾಗಿದ್ದ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಅವರು, ‘ಇದು ಮೋದಿಯ ಕ್ರೂಡ ಆಡಳಿತದ ಪರಿಣಾಮ’ ಎಂದಿದ್ದರು. ರಾಹುಲ್ ಅವರ ಈ ಟ್ವೀಟ್‌ಗೆ ಬಿಜೆಪಿ ಸದಸ್ಯರು ಕೆಂಡಾಮಂಡಲವಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close