About Us Advertise with us Be a Reporter E-Paper

ಅಂಕಣಗಳು

ಈಗೇಕೆ ಎದ್ದಿದೆ ಅಭಿವ್ಯಕ್ತಿ ಸ್ವಾತಂತ್ರ್ಯ-ಪ್ರಭುತ್ವದ ಘನತೆಯ ಪ್ರಶ್ನೆ?!

ಅವಲೋಕನ: ಟಿ. ದೇವಿದಾಸ್

ಪ್ರಭುತ್ವವೊಂದರ ಘನತೆಯನ್ನು, ಅದು ತನ್ನ ಸರ್ವಾಽಕಾರದ ಮೂಲಕ ಜನತೆಯ ಕಲ್ಯಾಣ ಮತ್ತು ಘನತೆಯನ್ನು ಎಷ್ಟರಮಟ್ಟಿಗೆ ಎತ್ತಿಹಿಡಿದಿದೆಯೆಂಬುದರ ಮೇಲೆಯೇ ಅಳೆಯಬೇಕಾಗುತ್ತದೆ. ಕೇಂದ್ರ ಸರಕಾರದ ನಾಲ್ಕೂಕಾಲು ವರ್ಷಗಳ ಆಡಳಿತವನ್ನು ಈ ಅಳತೆಗೋಲಿನಿಂದ ಅವಲೋಕಿಸಿದರೆ, ರಾಷ್ಟ್ರದ ಆರೋಗ್ಯ ಬಹುಮಟ್ಟಿಗೆ ಸುಧಾರಿಸಿದೆಯೆಂಬುದರಲ್ಲಿ ಸಂದೇಹವಿಲ್ಲ. ಸಂಪೂರ್ಣವಾಗಿ ಅಲ್ಲದಿದ್ದರೂ ಬಹುಪಾಲು ಜನತೆ ಕೇಂದ್ರ ಸರಕಾರದ ನಡೆಯನ್ನು ಮೆಚ್ಚಿದೆ. ಜನತೆಯ ನಿತ್ಯಬದುಕಿನ ಪೂರ್ಣತೆಯ ಆಕಾಂಕ್ಷೆಗೆ ಪೂರಕವಾಗುವ ವಾತಾವರಣವನ್ನು ಕಾಣಲು ಸಾಧ್ಯವಾಗುವಂತೆ ಕೇಂದ್ರ ಸರಕಾರ ಆಡಳಿತ ಮಾಡುತ್ತಿದೆ. ಆಂತರಿಕ ಮತ್ತು ಬಾಹ್ಯ ಪ್ರತಿರೋಧಗಳನ್ನು ಎದುರಿಸುವ ಸಾಮರ್ಥ್ಯದೊಂದಿಗೆ ತನ್ನ ನೀತಿಗಳಿಂದ ಸದ್ಯದ ಚಿಂತೆಯನ್ನಷ್ಟೇ ಗಹನವಾಗಿ ಸ್ವೀಕರಿಸದೆ, ದೂರಗಾಮಿ ನೆಲೆಯ ಪರಿಹಾರವನ್ನು ಕಾಣಲೆತ್ನಿಸುತ್ತಿದೆ.

 ರಾಜಕೀಯದ ಬಗ್ಗೆ ಒಲವು ಮೂಡಿದಂತೆ ಪ್ರಭುತ್ವ ವನ್ನು ಕುರಿತು ಚಿಂತಿಸುವ ಕಾರ್ಯ ನಡೆಯುತ್ತದೆ. ಪ್ರಭುತ್ವ ದ ಘನತೆಯನ್ನು ಗೌರವಿಸಲು ಇದು ಎರವಾಗುತ್ತದೆ. ಕೇವಲ ಪ್ರಭುತ್ವದ ಪೌರುಷ ಪರಾಕ್ರಮವನ್ನು ಅಪೇಕ್ಷಿಸದೆ ಕೇಂದ್ರ ಸರಕಾರವನ್ನು ಜನತೆ ಟೀಕಿಸಿದೆ. ದೋಷಗಳನ್ನು ಹುಡುಕಿದೆ. ಪ್ರತಿಯಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಆ ಭಯದಲ್ಲಿ ಎಲ್ಲವನ್ನೂ ನಿರ್ವಹಿಸಲು ಕೇಂದ್ರ ಸರಕಾರ ದುಡಿಯುತ್ತಿದೆ. ನಿಜವಾದ ಪ್ರಜಾತಂತ್ರದ ಕಾಣ್ಕೆಯಿದು. ಭಾರತದ ಮನಸ್ಸು ಈ ನಾಲ್ಕೂಕಾಲು ವರ್ಷಗಳಲ್ಲಿ ಬದಲಾಗುವಂತೆ ಯತ್ನಿಸಿದ ಈ ಸರಕಾರ ರಾಜಕೀಯವನ್ನೇ ನೈತಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದೆ. ಹಿಂಸೆಗೆ ಪ್ರತಿಹಿಂಸೆಯಾಗಿ ತನ್ನ ಅಽಕಾರವನ್ನು ಈ ಸರಕಾರ ಬಳಸಲಿಲ್ಲ. ಪ್ರಭುತ್ವಕ್ಕಿರುವ ಬಲವನ್ನು ಬಳಸದಿರುವುದು ಕೂಡ ಪ್ರಭುತ್ವದ ಬಲವೇ. ಸರಿಹೊತ್ತಿನ ರಾಜಕಾರಣದಲ್ಲೂ ನೈತಿಕ ಆಡಳಿತವನ್ನು ನೀಡಲು ಸಾಧ್ಯವಿದೆಯೆಂದು ಮನದಟ್ಟು ಮಾಡಿದ ಈ ಸರಕಾರದಲ್ಲಿ ಭ್ರಷ್ಟಾಚಾರದ ವಾಸನೆಯಿಲ್ಲ.

 ಅಽಕಾರಕ್ಕೆ ಬರುವ ಮೊದಲೇ ಬಿಜೆಪಿಯ ಬಗ್ಗೆ ಇದ್ದ ಪೂರ್ವಗ್ರಹಗಳೆ ಈ ವರ್ಷಗಳಲ್ಲಿ ಮಿಥ್ಯೆಯಾಗಿ, ಅನ್ಯಾಯ, ಅಧರ್ಮದ ವ್ಯವಹಾರವನ್ನು ಯಾವ ಸ್ಥಿತಿಯಲ್ಲೂ ಒಪ್ಪಿ ಕ್ರಮಿಸಲು ಬಿಡದಿರುವುದರಿಂದಲೇ ಬಿಜೆಪಿಯೇತರ ಪಕ್ಷಗಳೆಲ್ಲ ಒಟ್ಟಾಗಿವೆ. ಸರಕಾರವೊಂದು ಆಡಳಿತದಲ್ಲಿ ನಿಷ್ಠೆಯಿಂದಿದ್ದಷ್ಟೂ ಖುದ್ದು ಸರಕಾರದೊಳಗೂ ಹೊರಗೂ ಭೀತಿ ಹುಟ್ಟುತ್ತದೆ. ಪ್ರಭುತ್ವದ ಭೀತಿಯೂ ಒಳ್ಳೆಯದೇ. ಯಾವಾಗ ಪ್ರಜೆಗಳ ರಾಷ್ಟ್ರಹಿತದ ಪ್ರeಯಲ್ಲಿ ಮಿಥ್ಯಾಭಿವ್ಯಕ್ತಿ ಕಾಣಿಸುತ್ತದೆಯೋ ಆಗ ಪ್ರಭುತ್ವದ ಭೀತಿಯು ಅನಿವಾರ್ಯವಾಗುತ್ತದೆ. ಈ ಪ್ರe ಇzಗಲೂ ಹುಟ್ಟುವ ಪ್ರಭುತ್ವದ ಭೀತಿಯೂ ಪ್ರಜೆಗಳನ್ನು ಭಯಕ್ಕೆ ನೂಕುತ್ತದೆ. ಸದ್ಯ ಅಮೆರಿಕ , ಉತ್ತರ ಕೊರಿಯಾಕ್ಕೆ ಆಗುತ್ತಿರುವುದು ಇಂಥ ಪ್ರಭುತ್ವದ ಭೀತಿ. ಹುಸಿ ರಾಷ್ಟ್ರಹಿತ ಪ್ರeಗಳಿಗೆ ಕಾಡುವ ಪ್ರಭುತ್ವದ ಭೀತಿಯಿಂದ ಘಟ್ ಬಂಧನಗಳಂಥವು ಜನ್ಮತಳೆಯುತ್ತವೆ. ಪ್ರಜಾತಂತ್ರದ ಯಶಸ್ಸಿಗೆ ಅಗತ್ಯವಾದ ರಾಜಕೀಯ ಸ್ಪರ್ಧೆ ವಿರೋಧ ಪಕ್ಷಗಳಲ್ಲಿ ಅರ್ಥಹೀನವೂ , ಬಾಲಿಶವೂ ಆದ ವೈಯಕ್ತಿಕ ಆಸೆಬುರುಕುತನದ ಪೈಪೋಟಿಯಾಗಬಾರದು. ಸ್ಪರ್ಧೆಯೇ ಪ್ರಜಾತಂತ್ರದ ಯಶಸ್ಸಿಗೆ ಮೂಲ. ಅಽಕಾರವನ್ನು ಹಂಚಿಕೊಳ್ಳುವ ಆರೋಗ್ಯಯುತವಾದ ಸ್ಪರ್ಧೆಗೆ ಬದಲಾಗಿ ಕ್ಷುಲ್ಲಕ ಮಾತುಗಳಿಂದ ಲಜ್ಜೆಬಿಟ್ಟು, ಬಡಿದಾಡುತ್ತ, ಹುಸಿ ಸಿದ್ಧಾಂತವನ್ನು ಮೆರೆಸುವುದರಿಂದ ಪ್ರಜಾತಂತ್ರವೇ ಅತಂತ್ರವಾಗುತ್ತದೆ. ಪ್ರಜಾಪ್ರಭುತ್ವ ಸಾಯುತ್ತಿದೆಯೆಂಬ ಹುಯಿಲೆಬ್ಬಿಸಿ, ಜಾತ್ಯತೀತೆಯ ವೇಷ ಧರಿಸಿರುವ ಘಟ್ ಬಂಧನಕ್ಕೆ ಯಾವ ಭೀತಿ ಕಾಡುತ್ತಿದೆ? ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮಾರ್ಗದಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಗುರಿಯೊಂದೇ ಆಗಿರುತ್ತದೆ. ಪ್ರಭುತ್ವದ ತುಷ್ಟೀಕರಣದ ನೀತಿಯು ಏಕತೆ ಮತ್ತು ಅಖಂಡತೆಗೆ ಮಾರಕವಾಗುತ್ತದೆಯೆಂಬುದು ಚರಿತ್ರೆಯಲ್ಲೂ, ವರ್ತಮಾನದಲ್ಲೂ ಬಹು ದೊಡ್ಡ ದುರಂತವಾಗಿ ನಾವು ಅನುಭವಿಸುತ್ತಿವವರು. ಅಂದಿಗೂ ಇಂದಿಗೂ ನಕ್ಸಲ್‌ರಿಗೆ, ಮಾವೋಗಳಿಗೆ, ದೇಶವನ್ನು ತುಂಡು ಮಾಡುತ್ತೇವೆನ್ನುವವರಿಗೆ ಅಭಯದ ರಕ್ಷೆ ಎಲ್ಲಿಂದ ದೊರೆಯುತ್ತಿದೆ? ಪ್ರಭುತ್ವದ ಭೀತಿಯಿಲ್ಲದ ಪರಿಣಾಮವಲ್ಲವೇ ಇದು?

 ರಾಜಕೀಯವನ್ನೇ ನೈತಿಕವಾದ ಪ್ರeಯಲ್ಲಿ ಜನತೆಯು ನೋಡುವುದಿಲ್ಲವೆಂದರೆ ತಪ್ಪಾದೀತು! ಆದರೆ , ಪಕ್ಷ ರಾಜಕೀಯವು ಹುಟ್ಟಿಸುವ ಅಽಕಾರದ ವಾಂಛೆ ಅಂಥ ನೈತಿಕತೆಯನ್ನೂ ಜನರಲ್ಲಿ ದಮನ ಮಾಡಿ ಅಸಹ್ಯವನ್ನು ಸೃಜಿಸುತ್ತಿದೆ. ಇಂದಿರಾರ ಕಾಂಗ್ರೆಸ್ಸನ್ನು ಕಿತ್ತೊಗೆದು ಜನತಾ ಪಕ್ಷದ ಜಯಪ್ರಕಾಶ ನಾರಾಯಣರನ್ನು ಜನತೆ ಆರಿಸಿದ್ದಿದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಜೈಲನ್ನೂ ಸೇರಿ, ತಮ್ಮ ಅನಾರೋಗ್ಯಕ್ಕೆ ರಾಜಕೀಯ ಪಿತೂರಿಯೇ ಕಾರಣವೆಂದು ಜಯಪ್ರಕಾಶರು ಸಂದೇಹಪಟ್ಟಿದ್ದರು. ಆದರೂ ಸೋತ ಇಂದಿರಾರನ್ನು ಹರಸಿದ್ದರು. ಮೊರಾರ್ಜಿ ಸರಕಾರದ ವಿರುದ್ಧ ಇಂದಿರಾರ ಪರಮ ವೈರಿಗಳಾಗಿದ್ದ ಚರಣ್ ಸಿಂಗ್ ಮತ್ತು ರಾಜ ನಾರಾಯಣರು ನೈತಿಕತೆಯಿಂದ ಇಂದಿರಾರ ಬೆಂಬಲ ಕೋರಿದ್ದರು. ಹೆಗಡೆಯವರ ನೇತೃತ್ವದ ಜನತಾ ಸರಕಾರ ನೈತಿಕಮೌಲ್ಯಗಳನ್ನು ರಾಜಕೀಯದಲ್ಲಿ ಮರುಸ್ಥಾಪಿಸುವ ಭರವಸೆಯನ್ನು ಜನತೆಯಲ್ಲಿ ಹುಟ್ಟಿಸುವ ಪ್ರಯತ್ನದಲ್ಲಿರುವಾಗಲೇ ಹಾಗೂ ವೈಯಕ್ತಿಕವಾಗಿ ಅಪಾರ ಜನಪ್ರಿಯತೆ ಮತ್ತು ಪ್ರೀತಿಯನ್ನು ಗಳಿಸಿzಗಲೇ, ಇಂದಿರಾ ನಿಧನಾನಂತರ ರಾಜೀವ ಗಾಂಽ ನೇತೃತ್ವದ ಇಂದಿರಾರ ಕಾಂಗ್ರೆಸ್ಸನ್ನೇ ಕನ್ನಡ ಜನತೆ ಬೆಂಬಲಿಸಿತ್ತು.

 ಅಂದರೆ , ಜನತೆ ಯಾವತ್ತೂ ಒಂದು ಪಕ್ಷ , ಒಬ್ಬ ನಾಯಕನಿಗಾಗಿ ಹಂಬಲಿಸಿದ ಘಟನೆಗಳ ಹಿಂದಿನ ಮೂಲಕಾರಣವೆಂದರೆ ಅರಾಜಕತೆಯ ಭಯ. ರಾಜಭೀತಿಯನ್ನೇ ಹದವಾಗಿ ಮಿತವಾಗಿ ಜನತೆ ಬಯಸಿದ ನಿದರ್ಶನಗಳಿವು. ಪ್ರಭುತ್ವವಿದ್ದೂ ಅದರ ಭೀತಿಯಿಲ್ಲದೆ ಯುಪಿಎ ಅವಽಯಲ್ಲಿ ನಡೆದ ಹಗರಣಗಳಿಂದ ಬೇಸತ್ತ ಜನತೆ ಬಿಜೆಪಿಯನ್ನು ಬೆಂಬಲಿಸಿತು. ಈಗ ಅರಾಜಕತೆಯ ಭೀತಿಯಿಲ್ಲ. ಪ್ರಾಮಾಣಿಕರಿಗೆ ಪ್ರಭುತ್ವದ ಭೀತಿಯೂ ಇಲ್ಲ. ಪ್ರಭುತ್ವ ಅಭಿವ್ರದ್ಧಿಗಾಗಿ ಶ್ರಮಿಸುತ್ತಿದೆ. ಆದರೂ, ನೈತಿಕತೆಯೇ ಸತ್ತು ಅಽಕಾರದ ರಾಜಕೀಯಕ್ಕಾಗಿ ಪ್ರಧಾನಿಯನ್ನೇ ಗುರಿಯಾಗಿಸಿ ‘ಪ್ರಭುತ್ವದ ಭೀತಿ’ ಯನ್ನು ಎಲ್ಲೂ ಹರಡುವ ಹುನ್ನಾರ ನಡೆಯತ್ತಿದೆ.

 ಪ್ರಭುತ್ವದ ಭೀತಿ ದುಷ್ಟಶಕ್ತಿಗಳನ್ನು ನಿವಾರಿಸಲು ಯಾವತ್ತೂ ರಾಜಕೀಯದಲ್ಲಿ ಮಾತ್ರವಲ್ಲ, ಸಾಮಾಜಿಕವಾಗಿಯೂ ವೈಯಕ್ತಿಕವಾಗಿಯೂ ಬೇಕು. ತುಷ್ಟೀಕರಣದ ನೀತಿ ಯಾವ ದೇಶಕ್ಕೂ ಹಿತವಲ್ಲ. ಇದು ಸ್ಥಿರ ಮತ್ತು ಸದೃಢ ರಾಷ್ಟ್ರೀಯತೆಗೆ ಆಘಾತವನ್ನು ನೀಡುತ್ತದೆ. ಚರಿತ್ರೆಯಲ್ಲಿ ಇಂಥದ್ದನ್ನು ಕಾಣಬಹುದು. ಯಾವ ಭೀತಿಯೂ ಇಲ್ಲದೆ ಜನತೆ ನಿತ್ಯಬದುಕನ್ನು ಸಾಗಿಸಬೇಕು. ಪ್ರಭುತ್ವದ ನಡೆಯಲ್ಲಿ ಗೊಂದಲಗಳಿರಬಹುದು. ಆದರೆ ಪ್ರಭುತ್ವದ ಭೀತಿಯಿಲ್ಲದ ಅರಾಜಕತೆ ಸೃಷ್ಟಿಯಾಗಬಾರದು. ಸರಕಾರಕ್ಕೇ ಅರಾಜಕತೆಯ ಭೀತಿಯನ್ನು ಹುಟ್ಟಿಸುವಂತೆ ಕೃತಕ ಅರಾಜಕತೆಯ ಸೃಷ್ಟಿಯ ಜಾಲವೂ ದೇಶವನ್ನು ಬಲಹೀನಗೊಳಿಸುತ್ತದೆ. ಆಂತರ್ಯದಲ್ಲಿರುವ ಪ್ರಭುತ್ವದ ಭೀತಿಯನ್ನು ಮಣಿಸುವ ಪ್ರಯತ್ನವೂ ಅರಾಜಕತೆಯನ್ನು ಉದ್ದೀಪಿಸುತ್ತದೆ. ಉತ್ತಮ ಪ್ರಭುತ್ವಕ್ಕೆ ಹೊರಗಿನಿಂದ ಒಳಗಿನದನ್ನು ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯವಾದ ಮಾತು. ಅದರಲ್ಲೂ ಒಳಗಿನಿಂದುಂಟಾಗುವ ಅಭದ್ರತೆಯನ್ನು ಎದುರಿಸುವ ಸಾಮರ್ಥ್ಯ ಪ್ರಭುತ್ವಕ್ಕೆ ಬರಲು ಜನತೆಯೇ ಪ್ರಭುತ್ವವನ್ನು ಬೆಂಬಲಿಸಬೇಕು. ಬಹುತ್ತ್ವವೇ ಭಾರತದ ಸೌಂದರ್ಯ. ಬಹುತ್ತ್ವಕ್ಕೆ ವಿರೋಧವಾದುದನ್ನು ಖಂಡಿಸುತ್ತಲೇ ಉತ್ತಮಪ್ರಭುತ್ವವನ್ನು ಮತ್ತೆಮತ್ತೆ ರಚಿಸಿಕೊಳ್ಳಬೇಕು. ೧೯೪೭ ರಿಂದಾಗದೇ ಇದ್ದ ಅದೆಷ್ಟೋ ಬೆಳವಣಿಗೆಗಳು ಈ ನಾಲ್ಕೂಕಾಲು ವರ್ಷಗಳಗಿದೆಯೆಂದರೆ ವಿರೋಽಗಳಿಗೆ ಮರ್ಮಾಘಾತವಾದೀತು! ಸತ್ಯ ಅಪ್ರಿಯವಾಗೇ ಇರುತ್ತದೆ. ಅಪ್ರಿಯವಾದರೂ ಅಸತ್ಯವನ್ನು ಪ್ರಭುತ್ವದ ಬಗ್ಗೆ ಹೇಳಬಾರದು. ನೆಹರೂ, ಇಂದಿರಾ, ನರಸಿಂಹರಾಯರು, ಅಟಲ್ ಜೀಯನ್ನೂ ಮೀರಿಸಿದ ವಿದೇಶಾಂಗ ನೀತಿ ಮೋದಿಯವರದ್ದು ಅಂದರೆ ಅಚ್ಚರಿಯಾಗಬೇಕಿಲ್ಲ! ವಿಶ್ವದ ಪ್ರಭುತ್ವವನ್ನು ಅಲ್ಲಗಳೆದು ಮೋದಿ ಸರಕಾರ ತನ್ನ ವಿದೇಶೀ ನೀತಿಯನ್ನು ಬಲಗೊಳಿಸಲಿಲ್ಲ. ನೇಪಾಳದಿಂದ ಆರಂಭಿಸಿ ರಷ್ಯಾ ತನಕ, ಶ್ರೀಲಂಕಾದಿಂದ ಹಿಡಿದು ಆಫ್ರಿಕಾದ ತನಕ ಅಂತಾರಾಷ್ಟ್ರೀಯ ಸೌಹಾರ್ದತೆಯನ್ನು ಭಾರತ ವಿಸ್ತರಿಸಿಕೊಂಡಿದೆ. ಬಹು ರಾಷ್ಟ್ರಗಳ ಪ್ರೀತಿವಿಶ್ವಾಸವನ್ನು ಗಳಿಸಿದೆ. ೭೦ ವರ್ಷದ ಭಾರತಕ್ಕೆ ಈ ಪ್ರಭುತ್ವವು ಕೊಟ್ಟಕೊಡುಗೆ ಸಾಮಾನ್ಯವೇನಲ್ಲ ಎಂಬರಿವು ಇದ್ದೂ ಪ್ರಭುತ್ವದ ಘನತೆಯನ್ನು ಪ್ರಶ್ನಿಸುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ. ದೇಶದ್ರೋಹವೆನಿಸುತ್ತದೆ.

ಆಡಳಿತದಲ್ಲಿ ಶಿಸ್ತಿನ ಪಾಠವನ್ನು ಹೇಳಿದರೆ ತಪ್ಪೆಂದು ಪರಿಗಣಿಸಿ, ಪ್ರತಿರೋಧ ಒಡ್ಡಿದರೆ ಈ ದೇಶ ಹಳಿಗೆ ಬರಲು ಹೇಗೆ ಸಾಧ್ಯ? ಪ್ರಭುತ್ವದ ವಿರುದ್ಧ ಆಡಬಾರದ್ದನ್ನೆ ಆಡಿ, ಕೊನೆಯಲ್ಲಿ ಏನನ್ನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ದಮನಿಸಲಾಗುತ್ತಿದೆಂದು ಪ್ರಭುತ್ವದ ಬಗ್ಗೆ ಅಪಸೊಲ್ಲುಗಳನ್ನೆತ್ತಿ ಗೋಳಿಡುವುದೂ ಕೂಡ ದ್ರೋಹವಾಗಗುತ್ತದೆ. ದೇಶದೊಳಿತಿಗೆ ಮಾರಕವಾದ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ದೇಶದ್ರೋಹವೇ ಆಗುತ್ತದೆ. ೭೫-೭೭ ರ ತುರ್ತುಪರಿಸ್ಥಿತಿಯಲ್ಲಿ ಯಾವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಂದಿನ ಪ್ರಭುತ್ವವು ಪೋಷಿಸಿತ್ತು ಎಂಬುದನ್ನು ಅವಲೋಕಿಸಿದರೆ ವರ್ತಮಾನದಲ್ಲಿ ಪ್ರಭುತ್ವವನ್ನು ಹೀಯಾಳಿಸುವ, ನಿಂದಿಸುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವ ಧಕ್ಕೆಯೂ ಇಲ್ಲದೆ ಪೋಷಣೆಯಾಗುತ್ತಿದೆ. ದೇಶದ್ರೋಹದ ಅಭಿವ್ಯಕ್ತಿಗಳು ಮಾತ್ರ ಕಾನೂನಿನಂತೆ ಪ್ರಶ್ನಾರ್ಹವಾಗುತ್ತಿದೆ.

 ಈ ಕಾಲಘಟ್ಟದ ಪ್ರಭುತ್ವದ ಘನತೆಯ ಪ್ರಶ್ನೆ ಹುಟ್ಟಿದ್ದು ಹಲವು ಸಂದೇಹಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರಭುತ್ವವನ್ನು ಪ್ರಶ್ನಿಸುತ್ತಾ, ವಿಡಂಬನೆ ಮಾಡುತ್ತಾ, ಲೇವಡಿಸುತ್ತಾ, ಟೀಕೆ ಮಾಡುತ್ತಾ, ರಾಜಕೀಯ ನಮ್ಮ ಅರಿವಿಗೆ ಮೀರಿದ್ದು ಎಂದು ದೂರ ಸರಿಯದೆ ನಮ್ಮ ನಿತ್ಯದ ಬದುಕನ್ನು ನಾವು ನಂಬಿದ ಆದರ್ಶಗಳನ್ನು ಎತ್ತಿ ಹಿಡಿಯುವ ಪ್ರಭುತ್ವವನ್ನು ರಾಷ್ಟ್ರದ ಔನ್ನತ್ಯ ಮತ್ತು ಉತ್ಕರ್ಷಕ್ಕಾಗಿ ಬಲಗೊಳಿಸಲೇಬೇಕು. ಈ ಪ್ರeಯ ೨೦೧೯ರ ಮಹಾಚುನಾವಣೆಗೆ ಸಿದ್ಧವಾಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close