About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್
Trending

ಸಾಮಾಜಿಕ ಜಾಲತಾಣದಲ್ಲಿ ಬೇಬಿಮೂನ್ ಫೊಟೊ ಶೇರ್ ಮಾಡಿದ ರಾಧಿಕಾ ಪಂಡಿತ್

ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ಯಶ್, ರಾಧಿಕಾ ಪಂಡಿತ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಜೋಡಿ ಮಾಲ್ಡೀವ್ಸ್ ಗೆ ಬೇಬಿ ಮೂನ್ ಹೋಗಿದ್ದರು. ಇದೀಗ ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸದಾ ಸಿನಿಮಾ, ಚಿತ್ರೀಕರಣ ಅಂತೆಲ್ಲಾ ಬ್ಯುಸಿ ಆಗಿರುವ ನಟ ಯಶ್ ಚಿಕ್ಕ ಬ್ರೇಕ್ ತೆಗೆದುಕೊಂಡು ಪತ್ನಿಯನ್ನು ಮಾಲ್ಡೀವ್ಸ್ ಗೆ ಕರೆದುಕೊಂಡು ಹೋಗಿದ್ದರು. ಪತ್ನಿ ಜೊತೆ ಸಮುದ್ರತೀರದಲ್ಲಿ ಸುತ್ತಾಡಿ, ಇಬ್ಬರೂ ಎಂಜಾಯ್ ಮಾಡಿದ್ದಾರೆ. ಅಲ್ಲದೆ ಬೇಬಿ ಮೂನ್ ಸಂತಸದ ಕ್ಷಣಗಳ ಫೊಟೊಗಳನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ನಾವು ಬೇಬಿ ಮೂನ್ ನಲ್ಲಿದ್ದು, ಇಲ್ಲಿ ನಾವು ಮೂವರು ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್, ಯಶ್ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ಫೊಟೊವನ್ನು ಕೂಡ ರಾಧಿಕಾ ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ ಬೇಬಿ ಮೂನ್ ಫೋಟೋಗಳನ್ನು ಶೀಘ್ರದಲ್ಲೇ ನಿರೀಕ್ಷಿಸಿ ಎಂದು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close