About Us Advertise with us Be a Reporter E-Paper

Breaking NewsUncategorizedಪ್ರಚಲಿತರಾಜ್ಯ

ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿ ತನ್ನಿ…!

ಬಿಜೆಪಿ ಮಾಜಿ ಸಚಿವ ಸೊಗಡು ಎಸ್ ಶಿವಣ್ಣ ಆಗ್ರಹ

ತುಮಕೂರು: ರಾಜ್ಯದಲ್ಲಿ ರಾಜಕೀಯ ಪಕ್ಷಗಳು ನೀತಿಗೆಟ್ಟಿವೆ. ಅತಿವೃಷ್ಟಿ, ಅನಾವೃಷ್ಟಿಯಿಣದ ಜನತೆ ಕಂಗಾಲಾಗಿರುವಾಗ ಜಾತಿ ರಾಜಕೀಯ ಮಾಡುತ್ತಿರುವ ಮುಖಂಡರ ನಡೆ ಅಸಹ್ಯ ಮೂಡಿಸಿದೆ. ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲು ಬಿಜೆಪಿ ಮಾಜಿ ಸಚಿವ ಸೊಗಡು ಎಸ್ ಶಿವಣ್ಣ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಒಂದೊಂದು ಜಾತಿಯ ನಾಯಕರ ಹಿಡಿತದಲ್ಲಿ ಇದ್ದಾರೆ. ರಾಜಕೀಯ ನಾಯಕರು ತಮ್ಮ ತಮ್ಮ ಜಾತಿ ಸಮುದಾಯದ ಹೆಸರನ್ನು ಅಂಕಿ ಅಂಶಗಳನ್ನು ಹೇಳಿಕೊಂಡು ತಮ್ಮ ಅಧಿಕಾರದ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ರಾಜ್ಯದ ಜನತೆಯ ಹಿತರಕ್ಷಣೆ, ಸಮಸ್ಯೆಗಳ ನಿರ್ವಾರಣೆಗೆ ಆಡಳಿತ ಪಕ್ಷವಾಗಲೀ, ವಿರೋಧಪಕ್ಷವಾಗಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳದೆ ಇರುವುದು ಈ ಜನತೆಯ ದುರಾದೃಷ್ಟ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಎಸ್ ಶಿವಣ್ಣ ಮಾತನಾಡಿದರು.

ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಕೆಲವು ಕಡೆ ಬರಗಾಲ ಇದ್ದು ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಗುಂಪುಗಾರಿಕೆ ಮಾಡಿಕೊಂಡು ಬಡಿದಾಡುತ್ತಿರುವುದರಿಂದ ಪ್ರವಾಹ ಸಂತ್ರಸ್ಥರು. ಪ್ರಕೃತಿ ಹಾನಿ , ಸಿಟ್ಟಿನಿಂದ ಕುಟುಂಬದ ಜೀವನ ಕಾಪಾಡಿಕೊಳ್ಳಲು ಪರಿತಪಿಸುತ್ತಿರುವ ರೈತ ಸಮುದಾಯವನ್ನು ಸರಕಾರ ಗಮನಿಸುತ್ತಿಲ್ಲದಿರುವುದು ದುರಂತ ಎಂದರು.

ಅಧಿಕಾರದ ಅಮಲು ಹತ್ತಿದವರಿಗೆ ಸಂವಿಧಾನ ಬೇಕಾಗಿಲ್ಲ, ನ್ಯಾಯ ಬೇಕಾಗಿಲ್ಲ, ಪ್ರಜೆಗಳ ಹಿತ ಬೇಕಾಗಿಲ್ಲ. ಹಣವುಳ್ಳ ಬಲಿಷ್ಟರು, ರಾಜಕೀಯ ನೀತಿ ಧರ್ಮವನ್ನು ಹೊರಕ್ಕೆ ತಳ್ಳಿ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಾ ಕೋಟಿ ಕೋಟಿ ಹಣ ಚೆಲ್ಲಿ ಅಧಿಕಾರ ಪಡೆದು ರಾಜ್ಯದ ಆಡಳಿತದಲ್ಲಿ ಭಾಗಿಯಾಗಿರುವುದರಿಂದ ಪ್ರಜೆಗಳ ಕಷ್ಟ ಕೇಳುವರೇ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಆಪರೇಷನ್ ಕಮಲಕ್ಕೆ ನಾನು ವಿರೋಧಿ. ನನ್ನ ಕಾರ್ಯಕರ್ತರು ಮತ್ತು ಹಿತೈಷಿಗಳು ಒಪ್ಪುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಒಂದು ವೋಟಿನಿಂದ ಸೋತಾಗ ಹೇಗಾದರೂ ಮಾಡಿ ಅಧಿಕಾರ ಹಿಡಿಯಬಹುದಿತ್ತು. ಆದರೆ ಅವರು ಅಡ್ಡ ಮಾರ್ಗ ಹಿಡಿಯಲಿಲ್ಲ. ನಮ್ಮ ಸಂಘ ಪರಿವಾರದ ಹಿರಿಯರು ಹೇಳಿರುವಂತೆ ಮುಸ್ಲಿಂರು ಕೂಡ ಹಿಂದೂಗಳೇ. ಅವರು ಒಳ್ಳೆತನದಿಂದ ನಮ್ಮೊಂದಿಗಿರಬೇಕು. ಅವರು ಎಲ್ಲೂ ಹೋಗಲು ಆಗುವುದಿಲ್ಲ

-ಸೊಗಡು ಎಸ್.ಶಿವಣ್ಣ, ಮಾಜಿ ಸಚಿವ

Tags

Related Articles

Leave a Reply

Your email address will not be published. Required fields are marked *

Language
Close