About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರ, ಆಧಿಕಾರಿಗಳು ನಿರಾಳ

ಮುಂಬೈ: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿದ ಪೊಲೀಸ್ ಅಧಿಕಾರಿಗಳ ಹೆಸರನ್ನು ತೆಗೆದುಹಾಕಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಗುಜರಾತ್ ಎಟಿಎಸ್‌ನ ಮಾಜಿ ಮುಖ್ಯಸ್ಥ ಡಿ.ಜಿ.ವಂಝಾರ ಮತ್ತು ಗುಜರಾತ್ ಹಾಗೂ ರಾಜಸ್ಥಾನದ ಇತರೆ ನಾಲ್ವರು ಪೊಲೀಸ್ ಅಧಿಕಾರಿಗಳು ಈ ಪ್ರಕರಣದಿಂದ ನಿರಾಳವಾಗಿದ್ದಾರೆ.
ಸೊಹ್ರಾಬುದ್ದೀನ್ ಶೇಖ್, ಅವರ ಪತ್ನಿ ಕೌಸರ್‌ಬೀ ಹಾಗೂ ಸಹಚರ ರುಳಸಿರಾಂ ಪ್ರಜಾಪತಿ ಎನ್‌ಕೌಂಟರ್ ಪ್ರಕಣದಲ್ಲಿ ಈ ಅಧಿಕಾರಿಗಳ ಹೆಸರನ್ನು ಕೈಬಿಟ್ಟಿರುವುದ್ದಾಗಿ ಪ್ರಶ್ನಿಸಿ, ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದ ನ್ಯಾಯಾಧೀಶ ಎ.ಎಂ.ಬಾದರ್‌ನನ್ನು ವಜಾಗೊಳಿಸಿದ್ದು. ಗುಜರಾತ್‌ನ ರಾಜಕುಮಾರ್ ಪಾಂಡಿಯನ್ ಮತ್ತು ಎನ್.ಕೆ.ಅಮಿನ್ ಹಾಗೂ ರಾಜಸ್ಥಾನದ ಎಂ.ಎನ್. ದಿನೇಶ್ ಮತ್ತು ದಲ್ವತ್ ಸಿಂಗ್ ರಾಥೋಡ್ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಇತರೆ 33 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಲಾಗಿತ್ತು. ಈ ಪೈಕಿ, 14 ಜನ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮೀತ್ ಸೇರಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close