About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

1984ರ ಗಲಭೆ ಸಂಬಂಧ ಸೋನಿಯಾ ಗಾಂಧಿ ಸುಳ್ಳು ಪತ್ತೆ ಯಂತ್ರದ ಪರೀಕ್ಷೆ ಎದುರಿಸಲಿ: ಸುಖ್‌ಬೀರ್‌ ಸಿಂಗ್‌ ಬಾದಲ್‌

ದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಕುರಿತಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸುಳ್ಳು ಪತ್ತೆ ಯಂತ್ರದ ಪರೀಕ್ಷೆ ಎದುರಿಸಲಿ ಎಂದು ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಸುಖ್‌ಬೀರ್‌ ಸಿಂಗ್‌ ಬಾದಲ್‌ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸದಂತೆ ಸೋನಿಯಾ ಗಾಂಧಿರನ್ನು ತನಿಖೆಗೆ ಕರೆಯಬೇಕು ಎಂದು ಬಾದಲ್‌ ಇದೇ ಸಂದರ್ಭ ತಿಳಿಸಿದ್ದಾರೆ.

“ಸೋನಿಯಾ ಗಾಂಧಿ ಪತಿ ಅಧಿಕಾರದಲ್ಲಿದ್ದ ವೇಳೆ ಈ ಸಂಬಂಧ ಸಂಚನ್ನು ಅವರದ್ದೇ ಮನೆಯಲ್ಲಿ ರೂಪಿಸಲಾಗಿತ್ತು. ಆಕೆಯನ್ನು ಸುಳ್ಳು ಪತ್ತೆ ಯಂತ್ರದ ಮುಂದೆ ಹೋಗಿ ನಿಲ್ಲಲು ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಆಗ್ರಹಸಲಿ” ಎಂದು ಬಾದಲ್‌ ತಿಳಿಸಿದ್ದಾರೆ.

ಗಲಭೆ ಸಂಬಂಧ ಯಶ್ಪಾಲ್‌ ಶರ್ಮಾಗೆ ಮರಣ ದಂಡನೆ ಹಾಗು ನರೇಶ್‌ ಶರಾವತ್‌ಗೆ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ವಿಧಿಸಿದ ಬಳಿಕ ಈ ಹೇಳಿಕೆ ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close